ಗ್ರಂಥಾಲಯ ಸಪ್ತಾಹ ಸಮಾರೋಪಕವಿಗಳು ಸಮಾಜಕ್ಕೆ ಅಮೂಲ್ಯವಾದ ಕೊಡುಗೆ

ಗ್ರಂಥಾಲಯ ಸಪ್ತಾಹ ಸಮಾರೋಪಕವಿಗಳು ಸಮಾಜಕ್ಕೆ ಅಮೂಲ್ಯವಾದ ಕೊಡುಗೆ  Library Week closing poets are a valuable contribution to society

                        ಹೂವಿನ ಹಡಗಲಿ 21:  ಕವಿಗಳು ಸಮಾಜಕ್ಕೆ ಅಮೂಲ್ಯವಾದ ಕೊಡುಗೆ  ಎಂದು ಸಾಹಿತಿ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ ಶಾಂತಮೂರ್ತಿ ಕುಲಕರ್ಣಿ ಬಿ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗುರುವಾರ ಶಾಖಾ ಗ್ರಂಥಾಲಯ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗತಾಲೂಕು ಗ್ರಾ.ಪಂ. ಮೇಲ್ವಿಚಾರಕರ ಸಂಘದ ವತಿಯಿಂದ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ 2025ಸಮಾರೋಪ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಕಾವ್ಯ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಂಥಾಲಯ ಜ್ಞಾನದ ಭಂಡಾರ, ಮೊಬೈಲ್ ನಿಂದ ದೂರ ಇದ್ದು,ಪುಸ್ತಕಗಳನ್ನು ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದರು. ಅಧ್ಯಕ್ಷತೆಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ ಕೊಟ್ರಗೌಡ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಮೊದಲನೇ ಮಹಡಿ ಶೀಘ್ರದಲ್ಲೇ ಉದ್ಘಾಟನೆ ನೆರವೇರಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.  

                       ಹಿಂದಿನ ಗ್ರಂಥಪಾಲಕರ ಹಾದಿಯಲ್ಲಿ ಈಗಿನ ಶಾಖಾ ಗ್ರಂಥಾಲಯ ಸಿಬ್ಬಂದಿ ಈ ವರ್ಷ ಅರ್ಥಪೂರ್ಣವಾಗಿ ಗ್ರಂಥಾಲಯ ಸಪ್ತಾಹ ಆಚರಿಸಿದ್ದಾರೆ ಎಂದು ಪ್ರಶಂಸಿಸಿದರು.  ಬೀರಬ್ಬಿ ಬಸವರಾಜ, ಮಲ್ಲಿಗೆ ಪ್ರಕಾಶನದ ಎಲ್ ಖಾದರ ಭಾಷಾ ಮಾತನಾಡಿದರು. ಯುವ ಕವಿ ಸಾಲಿನ್ ನಿಸಾರ್ ಅಹಮದ್ ಅವರ ಕವನ ಸಂಕಲನ ಒಲವಿನ ಹನಿ ಪುಸ್ತಕವನ್ನು ಶಾಂತಮೂರ್ತಿ ಕುಲಕರ್ಣಿ ಲೋಕಾರೆ​‍್ಣ ಮಾಡಿದರು. ಕವಿ ಉಪನ್ಯಾಸಕ ಶಂಕರ್ ಬೆಟಗೇರಿ ಕೃತಿ ಪರಿಚಯಿಸಿದರು.ಗ್ರಾ.ಪಂ. ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಕುರಿ ಮಂಜುನಾಥ ತಾಲೂಕು ಅಧ್ಯಕ್ಷ  ಕೆ ದೊಡ್ಡಬಸಪ್ಪ ಶಾಖಾ ಗ್ರಂಥಾಲಯಾಧಿಕಾರಿ ಬಿ ನಾರಾಯಣ್ , ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್ ಎಂ ದಯಾನಂದ ಇದ್ದರು.ಕಾವ್ಯ ಓದು: ಕವಿಗಳಾದ ರಾಮಪ್ಪ ಕೋಟಿಹಾಳ ನಾಗಮಂಜುಳಾ ಜೈನ್ ಎನ್ ಎಂ ಗೌರಮ್ಮ ಪದ್ಮರಾಜ್ ಜೈನ್ ನಯನ ಮಲ್ಲಿನಾಥ ಎ ಅಶೋಕ, ರೋಷನ್ ಜಮೀರ್ ಕೆ ಮಾದೇಶ್ವರ ಸಹದೇವಪ್ಪ ಯಲ್ಲಪ್ಪ ಎಚ್ ಎಂ ಕೊಟ್ರಯ್ಯ ಟಿ ಎಂ ನಾಗಭೂಷಣ ಅನಿಲ್ ಪ್ರಸನ್ನ ಕುಮಾರ್ ಕವಿತೆ ವಾಚಿಸಿದರು. ಉಪನ್ಯಾಸಕಿ ನಾಗವೇಣಿ ಶಿಕ್ಷಕಿ ನಯನಾ, ಸುರೇಶ ಅಂಗಡಿ, ನಾಗರಾಜ್ ಮಲ್ಕಿ ಒಡೆಯರ್, ಅಯ್ಯನಗೌಡ ನಿರ್ವಹಿಸಿದರು.