ಶ್ರೀನಗರ, ಆಗಸ್ಟ್ 16 ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಾರಗಳೆ ಕಳೆದಿವೆ.
ಈ ಘಟನೆ ನಡೆದಾಗಿನಿಂದ ಮೆಹಬೂಬಾ ಮುಫ್ತಿ ಪುತ್ರಿ ಇಲ್ಟಿಜಾ ಜಾವೇದ್ ಸರ್ಕಾರದ ಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೊಸದಾಗಿ ಅವರು, ಕೇಂದ್ರ ಗೃಹ ಸಚಿವ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದು, ತಮ್ಮ ವಾಯ್ಸ್ ಮೇಲ್ ಅನ್ನು ಸಹ ಬಿಡುಗಡೆಗೊಳಿಸಿದ್ದಾರೆ.
ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರೆ, ನಮಗೆ ಮಾತ್ರ ಆ ಅವಕಾಶವೇ ಇಲ್ಲ. ಪ್ರಾಣಿಗಳನ್ನು ಕೂಡಿಹಾಕುವಂತೆ ನಮ್ಮನ್ನು ಬಂಧಿಸಿಡಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
ನನ್ನನ್ನು ಕೂಡ ನಿರ್ಬಂಧಿಸಿದ್ದಾರೆ. ಕರ್ಪ್ಯೋ ಜಾರಿಗೊಂಡಂದಿನಿಂದ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮಾಧ್ಯಮಗಳಿಗೆ ಹೇಳಿದ್ದಕ್ಕೆ ನನಗೆ ನಿರ್ಬಂಧ ವಿಧಿಸಿ, ಬೆದರಿಸುತ್ತಿದ್ದಾರೆ. ಅದಕ್ಕಾಗಿಯೇ ನಾನು ಮತ್ತೊಮ್ಮೆ ಮಾಧ್ಯಮಗಳೊಂದಿಗೆ ಮಾತನಾಡಲು ಬಯಸುತ್ತೇನೆ. ನನ್ನನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ನನ್ನ ಜೀವದ ಬಗ್ಗೆ ಭಯ ಉಂಟಾಗಿದೆ ಎಂದು ವಾಯ್ಸ್ ಮೇಲ್ ನಲ್ಲಿ ತಿಳಿಸಲಾಗಿದೆ.