ನಾಗರೀಕ ಸೌಲಭ್ಯ ಜಾಗೆಯನ್ನು ಬಿಡದೇ ಇರುವ ಕುರಿತು ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಪೌರಾಯುಕ್ತರು, ಗದಗ ಬೆಟಗೇರಿ ನಗರಸಭೆ ಗದಗ ಇವರಿಗೆ ಮನವಿ ಪತ್ರ.

ನಾಗರೀಕ ಸೌಲಭ್ಯ ಜಾಗೆಯನ್ನು ಬಿಡದೇ ಇರುವ ಕುರಿತು ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಪೌರಾಯುಕ್ತರು, ಗದಗ ಬೆಟಗೇರಿ ನಗರಸಭೆ ಗದಗ ಇವರಿಗೆ ಮನವಿ ಪತ್ರ. Letter of appeal to the Gadag Betageri Urban Development Authority and the Municipal Commissioner, G

ಲೋಕದರ್ಶನ ವರದಿ  


ವಾರ್ಡ ನಂಬರ 16 ರಲ್ಲಿ ಡಿ.ಸಿ.ಮಿಲ್ ಕಂಪೌಂಡ ವಿನಾಯಕ ಲೇಓಟನಲ್ಲಿ ಕಳಪೆ ಕಾಮಗಾರಿ ಹಾಗೂ ನಾಗರೀಕ ಸೌಲಭ್ಯ ಜಾಗೆಯನ್ನು ಬಿಡದೇ ಇರುವ ಕುರಿತು ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಪೌರಾಯುಕ್ತರು, ಗದಗ ಬೆಟಗೇರಿ ನಗರಸಭೆ ಗದಗ ಇವರಿಗೆ ಮನವಿ ಪತ್ರ. 


ಗದಗ 04: ಗದಗ ಬೆಟಗೇರಿ ಅವಳಿ ನಗರದ ವಾರ್ಡ ನಂಬರ 16 ರಲ್ಲಿ ಬರುವ ಡಿ.ಸಿ.ಮಿಲ್ ಕಂಪೌಂಡನಲ್ಲಿ ಹೊಸದಾಗಿ ಸಿಸನಂ.3982/1ಬಿ-1,3982/1ಬಿ-2ಬಿ ಇತರೆ ನಂಬರಗಳಲ್ಲಿ ವಿನಾಯಕ ಲೇಓಟ ಅಂತಾ ನಿರ್ಮಾಣ ಮಾಡಿರುತ್ತಾರೆ. ಸದರಿ ಲೇಓಟನಲ್ಲಿ ಈಗಾಗಲೇ ಪರಿಶಿಷ್ಟ ಜಾತಿಯ ಜನಾಂಗದವರು ನಿವೇಶನಗಳನ್ನು ಖರೀದಿ ಮಾಡಿರುತ್ತಾರೆ. ಈ ಒಂದು ಲೇಓಟನಲ್ಲಿ ಮೂಲಭೂತ ಸೌಕರ್ಯಗಳಾದ  ರಸ್ತೆ, ಚರಂಡಿ, ಮುಂತಾದ ಸೌಲಭ್ಯಗಳ್ನು ಮಾಡಿದ್ದು ಅವುಗಳು ಸಂಪೂರ್ಣ ಕಳಪೆ ಕಾಮಗಾರಿಯನ್ನು ಮಾಡಿರುತ್ತಾರೆ ಹಾಗೂ ಲೇಓಟನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಇರಬೇಕಾದ ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ಇತರೆ ಉದ್ದೇಶಕ್ಕಾಗಿ ನಿರ್ಮಾಣ ಮಾಡಲು ಅವಶ್ಯವಿರುವ ನಾಗರೀಕ ಸೌಲಭ್ಯ ಜಾಗೆಯನ್ನು ಸಹ ಬಿಟ್ಟಿರುವುದಿಲ್ಲಾ, ಸರ್ಕಾರದ ನಿಯಮಾವಳಿಯಂತೆ ಗುಣಮಟ್ಟದ ಕಾಮಗಾರಿಯನ್ನು ಮಾಡಿರುವುಲ್ಲ. ಲೇಓಟನಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿಯ ಜನಾಂಗದವರು ನಿವೇಶನಗಳನ್ನು ಖರೀದಿ ಮಾಡಿರುತ್ತಾರೆ ಇದರಿಂದ ಮುಂದಿನ ದಿನಮಾನದಲ್ಲಿ ಮನೆ ನಿರ್ಮಾಣ ಮಾಡಿ ವಾಸಮಾಡಲು ಯೋಗ್ಯವಾಗಿರುವುದಿಲ್ಲಾ, ಸದರಿ ಲೇಓಟನ ಸ್ಥಳ ಪರೀಶೀಲನೆ ಮಾಡಿ ಮಾಲೀಕರ ಮೇಲೆ ಸೂಕ್ತ ಕ್ರಮಕೈಗೊಂಡು ಆ ಲೇಓಟನಲ್ಲಿ ನಿವೇಶನ ಖರೀದಿಸಿದ ಪರಿಶಿಷ್ಟ ಜನಾಂಗದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮಾನ್ಯ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರು ಹಾಗೂ ಮಾನ್ಯ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಗದಗ ಬೆಟಗೇರಿ ಇವರಿಗೆ ಡಿ.ಸಿ.ಮಿಲ್, ತಳಗೇರಿ ಓಣಿಯ ಸಮಾಜದ ನಾಗರಿರು ಹಾಗೂ ಹಿರಿಯರೆಲ್ಲರು ಸೇರಿ ಮನವಿ ನೀಡಿದರು.  

  ಈ ಸಂದರ್ಭದಲ್ಲಿ ನಗರಸಭೆ ಹಾಲಿ ಸದಸ್ಯರಾದ ಶ್ರೀ ಕೃಷ್ಣಾ ಪರಾಪೂರ, ಎಸ್‌.ಎನ್‌.ಬಳ್ಳಾರಿ, ಈರ​‍್ಪ ಕೊಟ್ನಿಕಲ್, ವಿರುಪಾಕ್ಷ ಪಿ.ಪರಾಪೂರ, ವಿನಾಯಕ ಪರಾಪೂರ, ವೆಂಕಟೇಶ ಕೆ.ಬಳ್ಳಾರಿ, ದೊಡ್ಡಪೆಕ್ಕಿರ​‍್ಪ ಬಳ್ಳಾರಿ, ನಾರಾಯಣ ದೊಡ್ಡಮನಿ, ಪೆದ್ದಣ್ಣ ರಾಮಗಿರಿ. ಗೋವಿಂದರಾಜ ಬಳ್ಳಾರಿ, ಯುವರಾಜ ಬಳ್ಳಾರಿ, ಪ್ರಸಾದ ಗೌಡರ, ಮಾರುತಿ ಬಳ್ಳಾರಿ, ವಿಶಾಲ ಗೊಶಾಲನವರ, ಮುತ್ತುರಾಜ ಪಿ.ಗೌಡರ, ಪೃಥ್ವಿ ಪರಾಪೂರ ಅರುಣ ವಿ.ಬಳ್ಳಾರಿ ವಿನಾಯಕ ಕಲ್ಮನಿ, ಕೃಷ್ಣಾ ಎಚ್‌.ಪರಾಪೂರ ರಾಹುಲ ಎಸ್‌.ಜಂಬಲದಿನ್ನಿ, ಪ್ರಮೋದ ಸಕ್ರಿ, ಹುಲಗಣ್ಣ ತೌಜುಲ್, ಪ್ರೇಮ್ ಬಳ್ಳಾರಿ, ಆದರ್ಶ ತೌಜುಲ್, ವಿಕಾಸ ಅನಂತಪೂರ, ವಾಸು ಹುನಗುಂದ ಪರಶುರಾಮ ಸೊಂಪೂರ, ನವೀನ ಕೊಟ್ನಿಕಲ್ ಮುಂತಾದವರು ಉಪಸ್ಥಿತರಿದ್ದರು,