ಕುಸ್ತಿಗೆ ಅಂತರಾಷ್ಟ್ರೀಯ ಮನ್ನಣೆ ದೊರೆಯಲಿ : ಡಾ. ಮುರುಘರಾಜೇಂದ್ರ ಶ್ರೀ

ಕುಸ್ತಿಗೆ ಅಂತರಾಷ್ಟ್ರೀಯ ಮನ್ನಣೆ ದೊರೆಯಲಿ : ಡಾ. ಮುರುಘರಾಜೇಂದ್ರ ಶ್ರೀ Let wrestling get international recognition: Dr. Murugarajendra Sri

ಪಾಲಬಾವಿ, 27 : ನಮ್ಮ ಭಾರತ ದೇಶದಲ್ಲಿ ಹುಟ್ಟಿ ಬೆಳೆದಿರುವ ಅಪ್ಪಟ ದೇಶಿಯ ಸೊಗಡಿನ ಕ್ರೀಡೆ ಕುಸ್ತಿ. ಪ್ರತಿಯೊಬ್ಬರು ದೇಶಿಯ ಕ್ರೀಡೆಯಾದ ಕುಸ್ತಿಯನ್ನು ಉಳಿಸಿ ಬೆಳೆಸಬೇಕು. ಇಂದಿನ ಯುವಕರು ಮೊಬೈಲ್ ಹಾಗೂ ದುಶ್ಚಟಗಳ ಗೀಳನ್ನು ಬಿಟ್ಟು ಕುಸ್ತಿ, ಕಬಡ್ಡಿ ಗಳಂತಹ ಆಟವಾಡಿ ದೇಶಿಯ ಸೊಗಡನ್ನು ಬೆಳೆಸಬೇಕೆಂದು ಮುಗಳಖೋಡ-ಜಿಡಗಾ ಶ್ರೀ ಯಲ್ಲಾಲಿಂಗ ಬ್ರಹನ್ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಅವರು ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಬ್ರಹ್ ನ ಮಠದಲ್ಲಿ ಶ್ರೀ ಸಿದ್ದಲಿಂಗ ಮಹಾರಾಜರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ 6 ಗಂಟೆಗೆ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಕುಸ್ತಿಗೆ ಹಾಗೂ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ  ಪ್ರೋತ್ಸಾಹ ದೊರೆಯಲಿ ಎಂದು ಹಾರೈಸಿದರು. 

ಜಂಗಿ ನಿಖಾಲಿ ಕುಸ್ತಿಗಳು ನಿರ್ಣಾಯಕರು: ಮುತ್ತಪ್ಪ ಬಾಳೋಜಿ, ಪರ​‍್ಪಗೌಡ ಖೇತಗೌಡರ, ಹಾಲಪ್ಪ ಶೇಗುಣಶಿ, ಭೀಮಶಿ ತಳವಾರ, ಹಾಲಪ್ಪ ಮೆಕ್ಕಳಕಿ, ಸಿದ್ಧರಾಮ ಅಳಗೋಡಿ, ವಿಠ್ಠಲ ಕಾಮಾಣಿ, ಮುಖ್ಯಶಿಕ್ಷಕ ಮಾರುತಿ ಕಳ್ಳಿಗುದ್ದಿ, ಶ್ರೀಶೈಲ ಅಂಗಡಿ, ಮಹಾದೇವ ಸಂಗಾನಟ್ಟಿ, ಮಲ್ಲಪ್ಪ ಹೊನ್ನೂರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. 

ಪುರಸಭೆಯ ಸದಸ್ಯರು ರಾಜುಗೌಡ ನಾಯಕ, ಮಹಾಂತೇಶ ಯರಡೆತ್ತಿ, ಗುರು ಮಠಪತಿ, ಅಣ್ಣಪ್ಪಗೌಡ ಪಾಟೀಲ, ಮಹಾದೇವ ಬುಲಬುಲೆ, ಚೇತನ ಯಡವನ್ನವರ, ರಾಯಗೌಡ ಖೇತಗೌಡರ, ಸಿದ್ದರಾಮ ಯರಡೆತ್ತಿ, ಗುತ್ತಿಗೆದಾರ ಲಕ್ಷ್ಮಣ ಗೋಕಾಕ, ಮಾಜಿ ಪೈಲ್ವಾನ್ ಮಾರುತಿ ಗೋಕಾಕ, ಕಾಮಾಣಿ, ಸತ್ಯಪ್ಪ ಮಂಟೂರ, ಭೀಮಪ್ಪ ಹಳಿಂಗಳಿ, ಈರ​‍್ಪ ಗೋಕಾಕ ಹನುಮಂತ ಬಾಬಣ್ಣವರ, ರಾವಸಾಬ ನಾಯಿಕ, ಗಂಗಪ್ಪ ಗೋಕಾಕ, ರಮೇಶ ಖೇತಗೌಡರ, ಶಿವಾನಂದ ಮೆಕ್ಕಳಕಿ, ಭೀಮಶಿ ಬನಶಂಕರಿ, ಕರೆಪ್ಪ ಮಂಟೂರ, ಗೋಪಾಲ ಯಡವಣ್ಣವರ, ಪಿಕೆಪಿಎಸ್ ಸಂಘದ ಅಧ್ಯಕ್ಷ ಶಿವಾನಂದ ಗೋಕಾಕ, ವಕೀಲ ಸೋಮು ಹೊರಟ್ಟಿ ಇತರರು ಇದ್ದರು. 

ಹಾರೂಗೇರಿ ಠಾಣೆಯ ಸಿಪಿಐ ರತನಕುಮಾರ ಜೀರಗ್ಯಾಳ, ಪಿಎಸ್‌ಐ ಮಾಳಪ್ಪ ಪೂಜಾರಿ, ಕುಡಚಿ ಪಿಎಸ್‌ಐ ಪ್ರೀತಮ ನಾಯಿಕ ಹಾಗೂ ಸಿಬ್ಬಂದಿ ವರ್ಗ ಬಿಗಿ ಪೋಲಿಸ್ ಬಂದೋಬಸ್ತ್‌ ಕಲ್ಪಿಸಿದ್ದರು.