ಮಹಿಳೆಯರು ಸಾಮಾಜಿಕ ಆರ್ಥಿಕವಾಗಿ ಪ್ರಗತಿ ಹೊಂದಲಿ: ಡಾ. ವಿಜಯಲಕ್ಷ್ಮಿ ಪುಟ್ಟಿ
Let women progress socio-economically: Dr. Vijayalakshmi Putti
ಲೋಕದರ್ಶನ ವರದಿ
ಅಂಜನಾ ಮಹಿಳಾ ಮಂಡಳದಿಂದ ಮೊದಲ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ
ಬೆಳಗಾವಿ 08 : ಮಹಿಳೆಯರು ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಸೌಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿ ಹೊಂದಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಾಹಿತಿ, ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ ಪುಟ್ಟಿ ಅವರು ಹೇಳಿದರು.
ನಗರದ ಮಹಾಂತ ಭವನದಲ್ಲಿ ಬುಧವಾರ ಅಂಜನಾ ಮಹಿಳಾ ಮಂಡಳದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಮಹಿಳೆ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಶಕ್ತಿ,ಸಹನೆ ಮತ್ತು ಮೌಲ್ಯಗಳ ಪ್ರತೀಕ,ಮನೆ,ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅವಿಭಾಜ್ಯ ಅಂಗವಾಗಿರುವ ಮಹಿಳೆ ಇಂದು ಶಿಕ್ಷಣ,ಉದ್ಯೋಗ,ಆಡಳಿತ, ಕೃಷಿ,ಕಲೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದಾಳೆಂದು.
ಇನ್ನೂ ಎಲ್ಲಾ ರಂಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದರು.ಶ್ರೀ ಅಂಜನಾ ಮಹಿಳಾ ಮಂಡಳವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವುದು ಸಂಸತವಾಗಿದೆ. ಸಹಾಯ ಮತ್ತು ಸಹಕಾರದಿಂದ ನಾಡಿನ ಬದಲಾವಣೆಗೆ ಸಾಧ್ಯ , ಇತಂಹ ಸಂಘಟನೆ ಹೆಚ್ಚೆಚ್ಚು ಸಮಾಜಕ್ಕಾಗಿ ಶ್ರಮಿಸಲಿ ಎಂದರು.ಮಂಡಳದ ಅಧ್ಯಕ್ಷ ಭಾಗ್ಯಶ್ರೀ ಭೈರ್ಪನವರ ಅವರು, ಮಂಡಳದ ಬೆಳವಣಿಗೆ ಹಾಗೂ ಮುಂದಿನ ಗುರಿಗಳ ಬಗ್ಗೆ ವಿವರಿಸಿದರು.ಮಹಿಳಾ ಮಂಡಳದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೃತ್ಯ ನಾಟಕ ರ್ಯಾಂಪ್ ವಾಕ್ ಪ್ರದರ್ಶನಗೊಂಡವು.
ವೇದಿಕೆಯ ಮೇಲೆ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರ ಸಂಭ್ರಮಿಸಿದರು. ಈ ವೇಳೆ ಮಂಡಳದ ಕಾರ್ಯದರ್ಶಿ ವಿಜಯಲಕ್ಷ್ಮಿ ಪಾಟೀಲ್, ಉಪಾಧ್ಯಕ್ಷ ಲಲಿತಾ ಹೂಗಾರ್, ಸಹ ಕಾರ್ಯದರ್ಶಿ ಪ್ರಭಾ ಪಾಟೀಲ್, ಖಜಾಂಚಿ ಜಯಶ್ರೀ ದುಗ್ಗಾಣಿ , ಸಲಹಾ ಸಮಿತಿಯವರಾದ ಲತಾ ಸಿಂಗ್, ಗೀತಾ ಕಾವೇರಿ ಸುಮಿತ್ರ ಕುಲಕರ್ಣಿ , ಪ್ರೇಮಾ ಮಾಮದಾಪುರ ಹಾಗೂ ಇತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 