ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೆತ್ರದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸೋಣ

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೆತ್ರದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸೋಣ  Let us work together for the development of the library and information science sector

ಬೆಳಗಾವಿ: ನಗರದ ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ  ಬೆಂಗಳೂರು  ಬೆಳಗಾವಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 28-06-2026ರ ಭಾನುವಾರ ವಿಜೃಂಭಣೆಯಿಂದ ನೆರವೇರಿತು.  

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎಸ್‌. ಎಲ್‌. ಕಾಡದೇವರಮಠ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು.  

ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಉಪಾಧ್ಯಕ್ಷರು ಹಾಗೂ ಬೆಂಗಳೂರಿನ ಐಆರ್ಸಿ ಟಿಸಿಎಸ್ನ ಪ್ರಾದೇಶಿಕ ಮುಖ್ಯಸ್ಥರಾದ ಡಾ. ನಾಗಪ್ಪ ಬಕ್ಕಣ್ಣನವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಸಂಘದ ನಿಯಮಾವಳಿ ಮತ್ತು ಉದ್ದೇಶಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುವಂತೆ ಪ್ರಮಾಣವಚನ ಬೋಧಿಸಿದರು.  

ಎಲ್‌ಐಎಸ್ ಅಕಾಡೆಮಿ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. ಪಿ. ವಿ. ಕೊಣ್ಣೂರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಗ್ರಂಥಾಲಯ ಚಳುವಳಿಯ ಮಹತ್ವ ಹಾಗೂ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರ ಜವಾಬ್ದಾರಿಯ ಕುರಿತು ವಿವರಿಸಿದರು.  

ಕಾರ್ಯಕ್ರಮದಲ್ಲಿ ಸಂಘದ ಬೆಳಗಾವಿ ಜಿಲ್ಲಾ ಘಟಕದ ಸಲಹೆಗಾರರಾದ ಡಾ. ಕಿರಣ ಪಿ. ಸವನೂರ ಹಾಗೂ ಜಿಲ್ಲಾ ಗ್ರಂಥಾಲಯ ಅಧಿಕಾರಿ ಶ್ರೀ ರಾಮಯ್ಯ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.  

ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷರಾಗಿ ಡಾ. ಭರತ್ ಬಿ. ಅಲಸಂಡಿ, ಉಪಾಧ್ಯಕ್ಷರಾಗಿ ಶ್ರೀ ರವಿ ಡಿ. ಶಿವಣಾಯ್ಕರ ಮತ್ತು ಡಾ. ರಮೇಶ್ ಬಿ. ಕುರಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಕಿರಣ ಮಾಳವಾಡೆ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಪ್ರಕಾಶ ಇಚಲಕರಂಜಿ ಹಾಗೂ ಖಜಾಂಚಿಯಾಗಿ ಡಾ. ಸುಮನ್ ಮುದ್ದಾಪುರ ಅಧಿಕಾರ ಸ್ವೀಕರಿಸಿದರು.  

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀ ರಾಮಯ್ಯ, ಡಾ. ವೇಣುಗೋಪಾಲ ಹಜ್ಜಿ, ಡಾ. ಅಶ್ವಿನಿ ಲಟ್ಟೆ, ಶ್ರೀಮತಿ ನಳಿನಿ ಅಂಬಲಿ, ಡಾ. ತಾಯಪ್ಪ ಅದಿನ್, ಶ್ರೀ ರಮೇಶ್ ಶಿರೋಟೆ, ಶ್ರೀ ಸುಪ್ರೀತ್ ಸಕಟ್, ಡಾ. ರಾಜು ಗಡದ ಮತ್ತು ಶ್ರೀ ಮಹೇಶ್ ದೊಡ್ಡಲಕ್ಕಣ್ಣವರ ಅವರು ಅಧಿಕಾರ ಸ್ವೀಕರಿಸಿದರು.  

ಮುಕ್ತ ಚರ್ಚೆ (ಪ್ಯಾನೆಲ್ ಡಿಸ್ಕಶನ್) ಸಂದರ್ಭದಲ್ಲಿ ಸಂಘದ ಮುಂದಿನ ಕಾರ್ಯಯೋಜನೆಗಳು, ಸದಸ್ಯತ್ವ ವೃದ್ಧಿ, ಗ್ರಂಥಾಲಯ ವೃತ್ತಿಪರರ ಕೌಶಲ್ಯಾಭಿವೃದ್ಧಿ, ಸರ್ಕಾರಿ ನೇಮಕಾತಿ, ತರಬೇತಿ ಕಾರ್ಯಾಗಾರಗಳು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳ ಆಯೋಜನೆ, ಡಿಜಿಟಲ್ ಗ್ರಂಥಾಲಯ ಸೇವೆಗಳ ವಿಸ್ತರಣೆ ಹಾಗೂ ಜಿಲ್ಲೆಯ ಗ್ರಂಥಾಲಯಗಳ ನಡುವೆ ಸಮನ್ವಯ ಮತ್ತು ಸಹಕಾರ ಬಲಪಡಿಸುವ ಕುರಿತು ಸಲಹೆಗಳು ವ್ಯಕ್ತವಾದವು.  

ಕಾರ್ಯಕ್ರಮವನ್ನು ಡಾ. ರಾಜು ಗಡದ ಮತ್ತು ಡಾ. ಅಶ್ವಿನಿ ಲಟ್ಟೆ ನಿರ್ವಹಿಸಿದರು. ಕೊನೆಯಲ್ಲಿ ಡಾ. ಕಿರಣ ಮಾಳವಾಡೆ ವಂದನಾರೆ​‍್ಣ ಸಲ್ಲಿಸಿದರು. ಜಿಲ್ಲೆಯ ಗ್ರಂಥಾಲಯ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.