ಯುವ ಪೀಳಿಗೆ ದೇಶಿ ಸಂಸ್ಕೃತಿಯನ್ನು ರಕ್ಷಿಸಲು ಮುಂದಾಗಲಿ

ಬಾಗಲಕೋಟೆ: ಸಕರ್ಾರದ ಹತ್ತು ಹಲವು ಮಹತ್ವದ ಯೋಜನೆಗಳ ಅರಿವನ್ನು ಬೀದಿನಾಟಕ, ಜಾನಪದ ಸಂಗೀತ ಹಾಗೂ ವಿಚಾರ ಸಂಕಿರಣದ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಾತರ್ಾ ಇಲಾಖೆಯಿಂದ ತಾಲೂಕಿನ ನೀಲಾನಗರದಲ್ಲಿ ಗುರುವಾರ ಗ್ರಾಮ ವಾಸ್ತವ್ಯ ಮಾಡಲಾಯಿತು.

ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಲಾನಗರ ಗ್ರಾಮದ ದುಗರ್ಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ವಿನೂತನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿ.ಪಂ ಸದಸ್ಯ ರಂಗನಗೌಡ ಗೌಡರ ಚಾಲನೆ ನೀಡಿದರು. ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಅಲ್ಲದೇ ಸರಕಾರದ ಯೋಜನೆಗಳ ಸದುಪಯೋಗಕ್ಕೆ ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನೀಲಾನಗರದ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು ಮಾತನಾಡಿ ಹಳ್ಳಿಯ ಸೊಗಡನ್ನು ಕಾಪಾಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡಬಾರದು ಎಂದರು. ಇಂದಿನ ಯುವ ಪೀಳಿಗೆ ದೇಶಿ ಸಂಸ್ಕೃತಿಯನ್ನು ರಕ್ಷಿಸಲು ಮುಂದಾಗಬೇಕು ಎಂದರು. 

ಇದೇ ಸಂದರ್ಭದಲ್ಲಿ ಸರಕಾರ 100 ದಿನಗಳನ್ನು ಪೂರೈಸಿ ಮುನ್ನಡೆಸುತ್ತಿರುವ ಹಿನ್ನಲೆಯಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ದಿನ ನೂರು ಸಾಧನೆ ನೂರಾರು ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು. 

 ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ರಮೇಶ ಕುರಿಗಾರ, ಸರಕಾರಿ ಪ್ರೌಢಶಾಲೆಯ ಮುಕ್ಯೋಪಾದ್ಯಾಯ ಎಂ.ಬಿ.ಪಲ್ಲೇದ, ಸಂಪನ್ಮೂಲ ವ್ಯಕ್ತಿಗಳಾದ ದೇಸಾಯಿ, ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾ ವಾತರ್ಾಧಿಕಾರಿ ಸ್ವಾಗತಿಸಿ ವಂದಿಸಿದರು.  

ನಂತರ ಕೆರೂರಿನ ಬನಶಂಕರಿ ಬೀದಿನಾಟಕ ಕಲಾತಂಡ ಹಾಗೂ ಸಂಗನಬಸಯ್ಯ ವೀರಯ್ಯ ಹಿರೇಮಠ ಜಾನಪದ ಕಲಾತಂಡಗಳ ಮೂಲಕ ಸರಕಾರದ ವಿವಿಧ ಯೋಜನಾ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದು ಎಲ್ಲರ ಗಮನ ಸೆಳೆಯಿತು. 

  ವಿವಿಧ ಕಲಾತಂಡಗಳು ತಮ್ಮ ಕಲೆ ಹಾಗೂ ಸಂಗೀತದ ಮೂಲಕ ರೈತರ ಹಿತಕ್ಕಾಗಿ ಜಾರಿಗೆ ತರಲಾದ ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯಡಿ ಕೇಂದ್ರ ಸರಕಾರದಿಂದ 6 ಸಾವಿರ ರೂ. ಹಾಗೂ ರಾಜ್ಯ ಸರಕಾರದಿಂದ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಯೋಜನೆ ಬಗ್ಗೆ ಅರಿವು ಮೂಡಿಸಿದರು.

ಇದರ ಜೊತೆಗೆ ನೇಕಾರರ ಸಾಲ ಮನ್ನಾ ಯೋಜನೆ, ನೆಲಜನ ಸಂರಕ್ಷಣೆ, ಕೆರೆ ಅಭಿವೃದ್ದಿ, ಕೃಷಿ ಹೊಂಡ ನಿಮರ್ಾಣ, ನೀರು ಸಂಗ್ರಹಣೆ, ಶಿಕ್ಷಣ, ಪರಿಸರ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಶಾಸನ, ಶೌಚಾಲಯಗಳ ಬಳಕೆ, ಆರೋಗ್ಯ ಸೇರಿದಂತೆ ಹಲವು ವಿಷಯಗಳ  ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.