ಗ್ರಂಥಪಾಲಕರು ಓದುಗರಿಗೆ ಉತ್ಕೃಷ್ಟ ಸೇವೆ ನೀಡಲಿ: ಗುಂಜಾಳ

ಹುಬ್ಬಳ್ಳಿ 20: ಡಾ. ಎಸ್.ಆರ್.ರಂಗನಾಥನ್ರ ಆದರ್ಶ ಗುಣಗಳನ್ನು ಗ್ರಂಥಪಾಲಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಓದುಗರಿಗೆ ಉತ್ಕೃಷ್ಟ ಸೇವೆಯನ್ನು ನೀಡಬೇಕು ಎಂದು ನಾಡಿನ ಖ್ಯಾತ ಗ್ರಂಥಪಾಲಕ,  ಹಿರಿಯ ಸಾಹಿತಿ ಡಾ. ಎಸ್.ಆರ್.ಗುಂಜಾಳ ಹೇಳಿದರು.

ನಿವೃತ್ ಗ್ರಂಥಪಾಲಕ ಜಿ.ಬಿ.ಹೊಂಬಳ ಗೆಳೆಯರ ಬಳಗ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಡಾ. ಎಸ್.ಆರ್.ರಂಗನಾಥನ್ರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಅತ್ಯಂತ ಸರಳವಾಗಿ ಆಚರಿಸಲಾದ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥನ್ರ 127ನೇ ಜಯಂತಿ ಉತ್ಸವ ಹಾಗೂ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

 ಇತರರು ನೆರೆಹಾವಳಿಯಿಂದ ತೊಂದರೆಗಿಡಾದ ಜನರ ಬದುಕು ಆದಷ್ಟು ಬೇಗ ಸುಧಾರಿಸಲಿ ಎಂದು ಪ್ರಾಥರ್ಿಸಲಾಯಿತು. ಜೀವ ಹಾನಿಗೊಳಗಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಲಾಯಿತು. ಗ್ರಂಥಪಾಲಕರು ಹಾಗೂ ಸಾರ್ವಜನಿಕರು ನಿರಾಶ್ರೀತರಿಗೆ ತಮ್ಮಿಂದ ಸಾಧ್ಯವಾದ ಎಲ್ಲ ರೀತಿಯಿಂದಲೂ ಸಹಾಯ, ಸಹಕಾರ ನೀಡಿ ಅವರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕು ಎಂದು ವಿನಯದಿಂದ ವಿನಂತಿ ಮಾಡಿದ್ದಾರೆ. 

ಮಕ್ಕಳ ಸಾಹಿತಿ ನಿಂಗಣ್ಣ ಕುಂಠಿ, ನಿವೃತ್ ಗ್ರಂಥಪಾಲಕ ಜಿ.ಬಿ.ಹೊಂಬಳ, ಶ್ರೀನಿವಾಸ ವಾಡಪ್ಪಿ,  ಬಿವಿಬಿ ಕಾಲೇಜಿನ ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಬೆಂಗಳೂರಿನ ಕೆ.ಎನ್.ಪ್ರಸಾದ, ಎಸ್.ಎಸ್.ನಾಗಶೆಟ್ಟಿ, ಪಿ.ಬಿ.ಯಲಿಗಾರ, ಎಮ್.ಎಫ್. ಗೌಡಪ್ಪನವರ, ಸಿದ್ಧಯ್ಯ ಹಿರೇಮಠ, ಬಿ.ಎಫ್.ಕೂಬಿಹಾಳ, ಮುಂತಾದವರು ಭಾಗವಹಿಸಿದ್ದರು.