ಗ್ರಂಥಪಾಲಕರು ಸೇವಾ ಮನೋಭಾವವುಳ್ಳವರಾಗಲಿ: ಸಿದ್ದಮಲ್ಲಯ್ಯಾ

ಧಾರವಾಡ 29: ಗ್ರಂಥಪಾಲಕರು ಸದಾ ಹಸನ್ಮುಖಿಗಳಾಗಿ ಓದುಗರಿಗೆ ಗ್ರಂಥಗಳನ್ನು ಹಾಗೂ ಗ್ರಂಥಾಲಯದ ಸೇವೆಗಳನ್ನು ನೀಡಬೇಕು. ಉತ್ತಮ ಗ್ರಂಥಾಲಯದ ಸೇವೆಗಳಿಂದ ವಿದ್ಯಾಥರ್ಿಗಳು ಹಾಗೂ ಶಿಕ್ಷಕರು ಜ್ಷಾನವನ್ನು ಪಡೆಯಲು ಸಾಧ್ಯ ಎಂದು ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಗ್ರಂಥಪಾಲಕ ಡಾ.ಎಚ್.ಎಸ್.ಸಿದ್ದಮಲ್ಲಯ್ಯಾ ಹೇಳಿದರು.

ಅವರು ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ನಡೆದ ಮೂರು ದಿನಗಳ ಗ್ರಂಥಪಾಲಕರ ತರಬೇತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಕರ್ಾರಿ ಪ್ರಥಮ ದಜರ್ೆ ಕಾಲೇಜುಗಳ ಗ್ರಂಥಾಲಯಗಳು ಅತ್ಯುತ್ತಮ ಗ್ರಂಥಗಳನ್ನು ಹೊಂದಿದ್ದು, ಉತ್ತಮ ಸೇವೆಗಳನ್ನು ವಿದ್ಯಾಥರ್ಿಗಳಿಗೆ ಹಾಗೂ ಶಿಕ್ಷಕರಿಗೆ ನೀಡಿದ್ದಲ್ಲಿ ಉತ್ತಮ ಫಲಿತಾಂಶಗಳನ್ನು ವಿದ್ಯಾಥರ್ಿಗಳು ಪಡೆಯಲು ಸಾಧ್ಯ ಎಂದು ಹೇಳಿದರು.

ಗೌರವ ಅತಿಥಿಗಳಾಗಿ ಆಗಮಿಸಿದ  ಕನರ್ಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಆರ್.ಕರಿಸಿದ್ದಪ್ಪಾ ಅವರು ಮಾತನಾಡುತ್ತ ಗ್ರಂಥಪಾಲಕರು ಗ್ರಂಥಾಲಯಗಳನ್ನು ನೆಟವಕರ್ಿಂಗ ಮಾಡಿಕೊಂಡು ಓದುಗರಿಗೆ ಬೇರೆ ಬೇರೆ ಕಾಲೇಜುಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಹಾಗೂ ಇನ್ನೀತರ ಸಂಪನ್ಮೂಲಗಳನ್ನು ವಿದ್ಯಾಥರ್ಿಗಳಿಗೆ ಹಾಗೂ ಶಿಕ್ಷಕರಿಗೆ ಎರವಲು ನೀಡಿದಲ್ಲಿ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಹಾಗೂ ಗ್ರಂಥಾಲಯದ ಸೇವೆಯು ಅತ್ಯಮೂಲ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಅಕಾಡೆಮಿ ನಿದರ್ೇಶಕ ಡಾ. ಎಸ್.ಎಮ್.ಶಿವಪ್ರಸಾದ ಅವರು  ಮಾತನಾಡಿ ಗ್ರಂಥಪಾಲಕರು ಹಾಗೂ ಶಿಕ್ಷಕರು ವಿದ್ಯಾಥರ್ಿಗಳಿಗೆ ತಮ್ಮ ಜ್ಞಾನವನ್ನು ಧಾರೆಯರೆದು ವಿದ್ಯಾಥರ್ಿಗಳ ಯಶಸ್ಸಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

 ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಗ್ರಂಥಾಲಯದ ಸೇವೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಂಥಪಾಲಕರು ಇಂದಿನ ತಂತ್ರಜ್ಞಾನ ಬಳಸಿ ಓದುಗರಿಗೆ ಸೇವೆಯನ್ನು ಸಲ್ಲಿಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಹೇಳಿದರು.

ಅಕಾಡೆಮಿಯ ಗ್ರಂಥಪಾಲಕರು ಹಾಗೂ ತರಬೇತಿಯ ಸಂಚಾಲಕ ಡಾ.ಮಲ್ಲಿಕಾಜರ್ುನ ಮೂಲಿಮನಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿಯ ಡೀನರಾದ ಡಾ.ಎಚ್. ಬಿ. ನೀಲಗುಂದ, ಡಾ ಅರುಂಧತಿ ಕುಲಕಣರ್ಿ ಹಾಗೂ ಡಾ. ಡಾ.ಆಯ್.ಬಿ.ಸಾತೀಹಾಳ ಮತ್ತು ಅಕಾಡೆಮಿ ಸಿಬ್ಬಂದಿಯವರು ಹಾಜರಿದ್ದರು.