ಶಿರಗುಪ್ಪಿಯಲ್ಲಿ ಅಗ್ನಿವೀರರ ಸನ್ಮಾನ ಸತತ ಸೋಲು ಗೆಲುವಿಗೆ ಪಾಠವಾಗಲಿ
Let the felicitation of fire heroes in Shiraguppi be a lesson for continuous defeat and victory
ಕಾಗವಾಡ 30: ಸತತ ಸೋಲಿನಿಂದ ಕಂಗೆಡದೇ ಕಠಿಣ ಪರಿಶ್ರಮದೊಂದಿಗೆ ಪ್ರಯತ್ನ ಮುಂದುವರಿಸಿಕೊಂಡು ಹೋಗುವುದೇ ಯಶಸ್ವಿಗೆ ಮಾರ್ಗವಾಗಿದ್ದು, ಇದಕ್ಕೆ ಶಿರಗುಪ್ಪಿಯ ಭಾರತ ರಕ್ಷಕ ಅಕೆಡೆಮಿಯ ಸುಮಾರ 15 ವಿದ್ಯಾರ್ಥಿಗಳು ಅಗ್ನಿವೀರರಾಗಿ ದೇಶ ಸೇವೆಗೆ ಆಯ್ಕೆಯಾಗಿರುವುದೇ ಸಾಕ್ಷಿಯಾಗಿದೆ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಭರತ ಭಿಲವಡೆ ಹೇಳಿದ್ದಾರೆ.
ಅವರು, ರವಿವಾರ ದಿ. 30 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಪ್ರಭಾರತ್ನ ವಿದ್ಯಾವರ್ಧಕ ಸಂಸ್ಥೆಯ ಭಾರತ ರಕ್ಷಕ ಅಕೆಡೆಮಿಯಿಂದ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಯಾದ 15 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಮಾತನಾಡುತ್ತಿದ್ದರು. ಭಾರತ ರಕ್ಷಕ ಅಕೆಡೆಮಿಯ ಸಂಸ್ಥಾಪಕ ಪ್ರಜ್ಯೋತ ಚೌಗುಲೆ ನನ್ನ ವಿದ್ಯಾರ್ಥಿಯಾಗಿದ್ದು, ಕೇವಲ 4 ವರ್ಷಗಳ ಹಿಂದೆ ಅಕೆಡೆಮಿ ಸ್ಥಾಪಿಸಿ, ಸೇನೆಗೆ ಸೇರ ಬಯಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಈ ಅಕೆಡೆಮಿಯಿಂದ ಇನಷ್ಟು ವಿದ್ಯಾರ್ಥಿಗಳು ದೇಶ ಸೇವೆಗೆ ಸೇರಲಿ ಎಂದು ಹಾರೈಸಿದರು.
ಅಕೆಡೆಮಿಯ ಸಂಸ್ಥಾಪಕ ಪ್ರಜ್ಯೋತ ಚೌಗುಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕೇವಲ 2 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಅಕೆಡೆಮಿಯಿಂದ ಈಗಾಗಲೇ 4 ಜನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ 23 ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅಗ್ನಿವೀರರಾಗಿ ಆಯ್ಕೆಗೊಂಡಿರುವ ಪ್ರಜ್ವಲ ಹರದಾರೆ, ಸಂತೋಶ ಅರವಾಡೆ, ಓಂಕಾರ ಕೊರವಿ, ಉದಯ ಕೊಕಣೆ, ವಿವೇಕ ಕೊಕಣೆ, ಮಹೇಶ ವಜಮನಿ, ಸಂಕೇತ ಭಂಡಾರೆ, ರಿತೇಶ ಉಮರಾಣೆ, ಕೃಷ್ಣಾ ಹರದಾರೆ, ಸೋಪಾನ ಧನಗರ, ಶಿವಪ್ರಸಾದ ನಾವ್ಹಿ, ಸಚೀನ ಭಾನುಸೆ, ಗಣೇಶ ಮಾಳಿ, ಉದಯ ಕೊರವಿ ಮತ್ತು ಆದಶ್ರ ಉಗಾರೆ ಇವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಶಿರಗುಪ್ಪಿ ಸಿದ್ದೇಶ್ವರ ವಿದ್ಯಾಲಯದ ಕಾರ್ಯದರ್ಶಿ ಬಸವರಾಜ ಬೆಳ್ಳಂಕಿ, ಜುಗೂಳ ಕೆಎಸ್‌ಎಸ್ ಪ್ರೌಢಶಾಲೆಯ ಶಿಕ್ಷಕ ಸತೀಶ ಕುರುಂದವಾಡೆ, ಭಾರತ ರಕ್ಷಕ ಅಕೆಡೆಮಿಯ ಸದಸ್ಯರಾದ ಅಶೋಕ ಜನಾಜ, ಸುಕುಮಾರ ಚೌಗುಲೆ ಸೇರಿದಂತೆ ಅಕೆಡೆಮಿಯಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಭಿಲಾಶಾ ಅಕಿವಾಟೆ ನಿರೂಪಿಸಿದರು. ಚೇತನ ಖೋತ ವಂದಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 