ಕುರಿಗಾಹಿ ಗಳಿಗಿರುವ ಸೌಲಭ್ಯಗಳ ಸದುಪಯೋಗ ವಾಗಲಿ-ಮೀರಾ ನಾಯಕ್
Let the facilities available to shepherds be utilized properly - Meera Nayak
ಕುರಿಗಾಹಿ ಗಳಿಗಿರುವ ಸೌಲಭ್ಯಗಳ ಸದುಪಯೋಗ ವಾಗಲಿ-ಮೀರಾ ನಾಯಕ್
ಕೊಪ್ಪಳ 25, : ಕುರಿ ಸಾಕಾಣಿಕೆ ಉತ್ತಮ ಉದ್ಯೋಗ ವಾಗಿದೆ ಇದರ ಬಗ್ಗೆ ತಿಳುವಳಿಕೆ ಮತ್ತು ಜಾಗೃತಿ ಮುಖ್ಯವಾಗಿದ್ದು ಕುರಿಗಾಹಿ ಗಳಿಗೆ ಇರುವ ಸರ್ಕಾರದ ಸಹಾಯ ಸೌಲಭ್ಯ ಗಳ ಉಪಯೋಗ ವಾಗಬೇಕು ಇದು ಸದ್ಬಳಕೆಯಾಗಬೇಕು ಎಂದು ಶ್ರೀ ಬಾಳು ಮಾಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಧಾರವಾಡಿನ ಸಂಪನ್ಮೂಲ ವ್ಯಕ್ತಿ ಹಾಗೂ ನಿವೃತ್ತ ಪ್ರಾಚಾರ್ಯ ಡಾ, ಮಹಮ್ಮದ್ ರಫೀಕ್, ಏನ್, ಮೀರಾ ನಾಯಕ್ ಅಭಿಪ್ರಾಯಪಟ್ಟರು, ಅವರು ಕೊಪ್ಪಳದಲ್ಲಿ ಪತ್ರಿಕೆಗಳೊಂದಿಗೆ ಮಾತನಾಡುತ್ತಾ ಈ ಕುರಿತು ಹೇಳಿಕೆ ನೀಡಿದ ಅವರು ಕುರಿ ಸಾಕಾಣಿಕೆ ಕೇವಲ ಯಾವುದೇ ಒಂದು ಜಾತಿ ಜನಾಂಗಕ್ಕೆ ಸೇರಿದ ಉದ್ಯೋಗ ಅಲ್ಲ ಯಾರೇ ಇದನ್ನು ಮಾಡಬಹುದು ಕುರಿಗಾಹಿ ಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಇದರ ಸದ್ಬಳಕೆ ಯಾಗಬೇಕಾಗಿದೆ ಅದಕ್ಕೂ ಮುನ್ನ ಇದರ ಬಗ್ಗೆ ಸಂಪೂರ್ಣ ಜಾಗೃತಿ ಮತ್ತು ತರಬೇತಿ ಬಹಳ ಮುಖ್ಯವಾಗಿದೆ, ನಿರುದ್ಯೋಗಿ ಯುವಕರಿಗೆ ಸರಕಾರದಿಂದ ಯೋಜನೆ ಜಾರಿಗೊಂಡಿದೆ ಕುರಿ ಸಾಕಾಣಿಕೆ ನಷ್ಟದ ಉದ್ಯೋಗ ಅಲ್ಲ 2022 ರಲ್ಲಿ ಇದನ್ನು ಜಾಬ್ ರೂಲ್ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸೇರೆ್ಡಗೊಂಡಿದೆ ಸ್ಕೀಮ್ ಎಸ್ ಸಿ ಎಸ್ ಟಿ ಸಮುದಾಯ ಸೇರಿದಂತೆ ಇತರೆ ವರ್ಗದವರಿಗೂ ಆಸಕ್ತ ಕುರಿಗಾಹಿಗಳಿಗೆ ತರಬೇತಿ ನೀಡಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ, ಎನ್ ಆರ್ ಸಿ ಎಂ ಯೋಜನೆ ಅಡಿಯಲ್ಲಿ ಇದರ ಮಾರಾಟ ಕುರಿ ಮಾಂಸ ಅದರಲ್ಲಿ ವಿವಿಧ ರೀತಿಯ ಲಾಭದಾಯಕ ರೀತಿಯಲ್ಲಿ ಮಾಂಸ ಮಾರಾಟದ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುವುದು ಈಗಾಗಲೇ ರಾಜ್ಯದಲ್ಲಿ ಸುಮಾರು 10000ಕ್ಕೂ ಅಧಿಕ ಯುವಕರಿಗೆ ತರಬೇತಿ ನೀಡಲಾಗಿದೆ ಸುಮಾರು ನಾಲ್ಕು ಸಾವಿರದಷ್ಟು ಜನರಿಗೆ ಸಾಲ ಸೌಲಭ್ಯ ಕೂಡ ಒದಗಿಸಿ ಕೊಡಲಾಗಿದೆ, ಲಾಭದಾಯಕವಾದ ಈ ವೃತ್ತಿ ಮಾಡುವ ಮುನ್ನ ಇದರ ಬಗ್ಗೆ ಜಾಗೃತಿ ಮತ್ತು ತರಬೇತಿ ಬಹಳ ಮುಖ್ಯ, ಆ ಕೆಲಸ ನಮ್ಮ ಸಂಸ್ಥೆ ವತಿಯಿಂದ ಮಾಡುತ್ತಾ ಬಂದಿದ್ದೇವೆ ಇದರ ಬಗ್ಗೆ ಆಸಕ್ತಿ ಹೊಂದಿದ ನಿರುದ್ಯೋಗಿ ಯುವಕ ಯುವತಿಯರು ಯಾರೇ ಆಗಿರಲಿ ಅವರು ಮುಂದೆ ಬಂದರೆ ಅವರಿಗೆ ಸಮಗ್ರ ಮಾಹಿತಿ ಮತ್ತು ತರಬೇತಿ ನೀಡಲಾಗುವುದು ಎಂದು ಶ್ರೀ ಬಾಳು ಮಾಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿರುವ ನಿವೃತ್ತ ಪ್ರಾಚಾರ್ಯ ಡಾ, ಮೊಹಮ್ಮದ್ ರಫೀಕ್ ,ಎನ್ ,ಮೀರಾ ನಾಯಕ್ ಹೇಳಿದರು, ಅವರೊಂದಿಗೆ ಸಂಸ್ಥೆಯ ಕಾರ್ಯದರ್ಶಿ, ಮಲ್ಲಿಕಾರ್ಜುನಯ್ಯ ಪುರಾಣಿಕ್ ಮಠ್ ಸದಸ್ಯ ಮಾರುತಿ ಹೊಸಮನಿ ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 