ಜನನ ಮರಣ ಮಾಹಿತಿ ನಿಖರವಾಗಿರಲಿ - ಅಪರಜಿಲ್ಲಾಧಿಕಾರಿ ಸಿದ್ರಾಮೇಶ್ವರ
Let the birth and death information be accurate - Sub-District Officer Sidrameshwar
ಕೊಪ್ಪಳ 09: ಜನನ ಮರಣ ಮಾಹಿತಿಯು ನಿಖರವಾಗಿ ಸಂಗ್ರಹಿಸುವುದರಜೊತೆಗೆಇದನ್ನುತಂತ್ರಾಶದಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಪರಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಅವರು ಬುಧವಾರಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿಕರೆದಜನನ ಮರಣ ನೋಂದಣಿಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ನಾಗರಿಕ ನೋಂದಣಿ ಪದ್ಧತಿಯಡಿಜನನ ಮರಣ ಹಾಗೂ ನೀರ್ಜೀವ ಜನನಗಳನ್ನು“ಜನನ ಮರಣ ನೋಂದಣಿ ಅಧಿನಿಯಮಗಳು-1969”ಹಾಗೂ"ಕರ್ನಾಟಕಜನನ ಮರಣ ನೋಂದಣಿ ನಿಯಮಗಳು 1999" ರನ್ವಯಕಡ್ಡಾಯವಾಗಿ ನೋಂದಣಿ ಮಾಡಬೇಕಾಗಿರುತ್ತದೆ.ಜನನ-ಮರಣ ನೋಂದಣಿಯನ್ನುಅಧಿನಿಯಮಮತ್ತು ನಿಯಮಗಳಂತೆ ಅನುಷ್ಠಾನಕ್ಕೆ ಕ್ರಮವಹಿಸುವುದರಜೊತೆಗೆಶೇ.100 ರಷ್ಟುಜನನ, ಮರಣ ಮತ್ತು ನೀರ್ಜೀವ ಜನನಗಳ ಘಟನೆಗಳನ್ನು ನೋಂದಾವಣೆಆಗಿರುವ ಬಗ್ಗೆ ಪರೀಶೀಲನೆ ಕೈಗೊಳ್ಳಬೇಕುಎಂದರು.
ಬದುಕಿರುವಪ್ರತಿಯೊಬ್ಬ ವ್ಯಕ್ತಿಗೆಜನನ ಪ್ರಮಾಣ ಪತ್ರತುಂಬಾಅಗತ್ಯವಾದದಾಖಲೆಯಾಗಿದೆ ಮತ್ತುವ್ಯಕ್ತಿಯಮರಣದನಂತರಕುಟುಂಬದವರಿಗೆ ಮರಣ ಪ್ರಮಾಣಪತ್ರಉಪಯುಕ್ತವಾದದಾಖಲೆಯಾಗಿದ್ದು, ಈ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು.ಜನನ ಮತ್ತು ಮರಣ ನೋಂದಣಿಕಾರ್ಯವನ್ನುಜಿಲ್ಲೆಯಎಲ್ಲಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು, ಈ ಕಾರ್ಯವನ್ನು ಸರಿಯಾಗಿನಿರ್ವಹಿಸಬೇಕು. ನೋಂದಣಿ ವೇಳೆ ಸೂಕ್ತ ಪರೀಶೀಲನೆ ಕೈಗೊಂಡುಅದರ ವದಿಯನ್ನು ಸಲ್ಲಿಸಬೇಕು.ವಿಳಂಬ ನೋಂದಣಿ ಘಟನೆಗಳನ್ನು ತಡೆಯಬೇಕು.ಯಾವುದೇದಾಖಲಾತಿಬಾಕಿ ಉಳಿಯದಂತೆ ಶೇ.100ರಷ್ಟು ನೋಂದಣಿಯಾಗುವಂತೆಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಸಾಂಖ್ಯಿಕಅಧಿಕಾರಿ ಸುಧಾಕರ ಅ. ಮಾನೆಅವರು ಮಾತನಾಡಿ, ಜನನ, ಮರಣ ಮತ್ತು ನೀರ್ಜೀವ ಜನನಗಳ ನೋಂದಣಿಕಡ್ಡಾಯವಾಗಿರುತ್ತದೆ.21 ದಿವಸ ಗಳೊಳಗಾಗಿ ಯಾವುದೇ ಶುಲ್ಕವಿಲ್ಲದೆಜನನ ಮರಣ ನೋಂದಣಿಯನ್ನು ಮಾಡಲಾಗುವುದು.2024ರ ತಿದ್ದುಪಡಿ ನಿಯಮದಂತೆಜನನ ಮರಣ ಹೆಚ್ಚುವರಿ ಪ್ರಮಾಣ ಪತ್ರಗಳ ಶುಲ್ಕವು ಈಗ ರೂ.50ಆಗಿರುತ್ತದೆ.ವಿಳಂಬ (ತಡ) ನೋಂದಣಿಗೆಘಟನೆ ಸಂಭವಿಸಿದ 21 ದಿನಗಳಿಂದ 30 ದಿನದವರೆಗೆಶುಲ್ಕ 20ಆಗಿರುತ್ತದೆ.ಘಟನೆ ಸಂಭವಿಸಿದ 30 ದಿನಗಳ ನಂತರಒಂದು ವರ್ಷದವರೆಗೆಶುಲ್ಕ ರೂ.50ಆಗಿರುತ್ತದೆ.ಕೊಪ್ಪಳ ಜಿಲ್ಲೆಯಲ್ಲಿ 731 ನೋಂದಣಿ ಘಟಕಗಳಿವೆ ಎಂದು ಹೇಳಿದರು.ಜನನ ಮರಣ ಘಟನೆಗಳನ್ನು ಇ-ಜನ್ಮತಂತ್ರಾಂಶದ ಮೂಲಕ ನೋಂದಣಿ ಮಾಡುವಕಾರ್ಯ 2015 ರಿಂದ ಪ್ರಾರಂಭಿಸಲಾಗಿದೆ. ತದನಂತರಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 2018 ರಿಂದ ಸಂಪೂರ್ಣವಾಗಿಇ-ಜನ್ಮತಂತ್ರಾಂಶದ ಮೂಲಕ ಜನನ ಮರಣ ಘಟನೆಗಳನ್ನು ನೋಂದಣಿ ಮಾಡುವಕಾರ್ಯವನ್ನುಕೊಪ್ಪಳ ಜಿಲ್ಲೆಯಾದ್ಯಂತ ಕಡ್ಡಾಯಗೊಳಿಸಲಾಗಿದೆ.ಎಲ್ಲಾನೋಂದಣಾಧಿಕಾರಿಗಳು ಅಥವಾಉಪನೋಂದಣಾಧಿಕಾರಿಗಳು ಕಡ್ಡಾಯವಾಗಿಡಿಜಿಟಲ್ ಸಹಿಯೊಂದಿಗೆ ಪ್ರಮಾಣ ಪತ್ರಗಳವಿತರಣೆ ಮಾಡಬೇಕು.ಜನನ ಮರಣ ನೋಂದಣಿ ಘಟಕಗಳ ಪರೀಶೀಲನೆ ಸೆಕ್ಷನ್ 18ರ ಪ್ರಕಾರಜಿಲ್ಲೆಯಎಲ್ಲಾ ನೋಂದಣಿಘಟಕವು ನಿಯಮಾನುಸಾರ ನೋಂದಣಿಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡಾ 100ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಪರೀಶೀಲನೆಯನ್ನುಕಂದಾಯ, ನಗರಾಭಿವೃದ್ಧಿಅಥವಾಸಾಂಖ್ಯಿಕಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆಎಂದರು.
ಸಭೆಯಲ್ಲಿಸಣ್ಣ ನೀರಾವರಿ ಇಲಾಖೆ ಇಇ ಬಸವರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ ಶೆಟ್ಟಪ್ಪನವರ್,ಸಹಾಯಕಸಾಂಖ್ಯಿಕ ಅಧಿಕಾರಿಗಳಾದ ಕಾಮಾಕ್ಷೀ ಹಾಗೂ ಪ್ರವೀಣ,ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಸಮಾಲೋಚಕದತ್ತು ಪ್ರಸಾದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 