ದೇವಸ್ಥಾನಗಳು ಸತ್ಸಂಗದ ತಾಣಗಳಾಗಲಿ: ಖೊದ್ನಾಪೂರ
Let temples be places of satsang: Khodnapur
ದೇವಸ್ಥಾನಗಳು ಸತ್ಸಂಗದ ತಾಣಗಳಾಗಲಿ: ಖೊದ್ನಾಪೂರ
ವಿಜಯಪುರ 06: ಸತ್ಸಂಗ ಎಂದರೆ ಸತ್ಯದ ಸಂಗಡ ಅಥವಾ ದೇವರ ಧ್ಯಾನ, ಅಧ್ಯಾತ್ಮಿಕ ಬೆಳವಣಿಗೆ ಮಾಡಿಕೊಳ್ಳುವ ಸಾಧನ. ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಲು ಸತ್ಸಂಗ ಸಹಾಯಕಾರಿ. ಜೀವನದ ಸಾರ್ಥಕತೆ ಮತ್ತು ಅಧ್ಯಾತ್ಮಿಕ ಜ್ಞಾನವನ್ನು ಪಡೆಯಲು ದೇವಸ್ಥಾನಗಳು ಸತ್ಸಂಗದ ತಾಣಗಳು. ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಭಾವನೆಗಳು ಸದಾಚಾರ, ಸನ್ನಡತೆ, ಸಚ್ಚಾರಿತ್ರ್ಯ, ಸದ್ಭಾವ, ಸದ್ಗುಣಗಳು ಒಡಮೂಡುತ್ತವೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ಶನಿವಾರ 5ರಂದು ನಗರದ ಅಥಣಿ ರಸ್ತೆಯಲ್ಲಿರುವ ಎನ್.ಜಿ.ಓ ಕಾಲನಿಯಲ್ಲಿರುವ ಜೈ ಆಂಜನೇಯ ದೇವಸ್ಥಾನದಲ್ಲಿ ಜರುಗಿದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಂಘರ್ಷ-ಒತ್ತಡಮಯವಾಗುತ್ತಿರುವ ಇಂದಿನ ಬದುಕಿನಲ್ಲಿ ಮನುಷ್ಯನಿಗೆ ಹಣ ಸಂಪಾದನೆ, ಆಸ್ತಿ ಗಳಿಕೆ ಮತ್ತು ಇನ್ನಿತರ ವಿಷಯಗಳಿಮದ ಒಂದಿಷ್ಟೂ ಮಾನಸಿಕ ನೆಮ್ಮದಿ, ಕೊಂಚ ರಿಲ್ಯಾಕ್ಸ್ ಇಲ್ಲದಂತಾಗಿದೆ. ಅದಕ್ಕಂತಲೇ ಎನ್.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ಸನ್ಮಾರ್ಗದತ್ತ ಸಾಗುವಂತೆ ಪ್ರೇರೇಪಿಸುವ ಮಹೋನ್ನತವಾದ ಉದ್ದೇಶದಿಂದ ನಗರದ ಅಥಣಿ ರಸ್ತೆಯಲ್ಲಿರುವ ಎನ್.ಜಿ.ಓ ಕಾಲನಿಯಲ್ಲಿರುವ ಜೈ ಆಂಜನೇಯ ದೇವಸ್ಥಾನದಲ್ಲಿ ಪ್ರತಿ ಶನಿವಾರದಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಸತ್ಸಂಗವನ್ನು ಆಯೋಜಿಸಲಾಗುತ್ತಿದೆ, ದೇವಸ್ಥಾನದಲ್ಲಿ ಸುಮಾರು 5 ವರ್ಷಗಳಿಂದ ಕೀರ್ತನೆ, ಅಧ್ಯಾತ್ಮಿಕ ಗೋಷ್ಠಿ, ಭಜನೆ, ತತ್ವಪದ ಮತ್ತು ವಚನ, ದಾಸ ವಾಣಿ ಮತ್ತು ಸಂಗೀತ ಕಾರ್ಯಕ್ರಮ ಮತ್ತು ಸಾಮೂಹಿಕ ಹನುಮಾನ ಚಾಲೀಸ್ ಪಠಣದಂತಹ ಮೂಲಕ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಎಂದರು.
ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ಜನರು ತಮ್ಮ ಜೀವನದಲ್ಲಿ ಸನ್ನಡತೆ, ಸಚ್ಚಾರಿತ್ರ್ಯ, ಮಾನವೀಯ ಮೌಲ್ಯಗಳು, ನೈತಿಕ, ವೈಚಾರಿಕ ಮತ್ತು ಅಧ್ಯಾತ್ಮಿಕತೆಯ ವಿಷಯಗಳ ಬಗೆಗೆ ಅರಿವು ಮೂಡಿಸುವದರ ಜತೆಗೆ ನವರಸಪುರ ಸುತ್ತಮುತ್ತಲಿನ ಕಾಲನಿಗಳ ನಾಗರೀಕರಲ್ಲಿ ಉತ್ತಮ ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಧಾರ್ಮಿಕ-ಸಾಮಾಜಿಕ ಮತ್ತು ಅಧ್ಯಾತ್ಮಿಕ ವಿಚಾರಧಾರೆಗಳನ್ನು ಒಡಮೂಡಿಸಲಾಗುತ್ತಿದೆ ಎಂದರು.
ರಶ್ಮೀ ಕುಮಟಗಿ ಇವರಿಂದ ದಾಸವಾಣಿ, ವಚನ ಗಾಯನ, ರಾಮ ನಾಮ ಮತ್ತು ದೇವರ ನಾಮಸ್ಮರಣೆಯ ಸಂಗೀತ ಕಾರ್ಯಕ್ರಮ ಮೂಡಿಬಂತು.
ಬಿ.ಆರ್.ಬಿರಾದಾರ, ಎಸ್.ಜಿ.ನಿಂಗನಗೌಡ್ರರ, ಬಾಬು ಕೋಲಕಾರ, ಶಿವಪ್ಪ ಸಾವಳಗಿ, ನಾನಾಸಾಬ ಕೂಟನೂರ, ಶಿವಾನಂದ ಬಿಜ್ಜರಗಿ, ವೆಂಕಟೇಶ ಹೊಸಮನಿ, ಪ್ರೊ. ಎಂ.ಆರ್.ಜೋಶಿ, ನಾಗರಾಜ.ಎಸ್.ಎಚ್, ಬಿ.ಆರ್.ಪೂಜಾರಿ, ಎಸ್.ಡಿ.ಪತ್ತಾರ, ಎಸ್.ಎಸ್.ಪೂಜಾರಿ, ಎಸ್.ಆರ್.ಬಶೆಟ್ಟಿ, ಶ್ರೀರಾಂ ದೇಶಪಾಂಡೆ, ಶಕುಂತಲಾ ಅಂಕಲಗಿ, ಜಯಶ್ರೀ ಚಾಂದಕವಠೆ, ಸರೋಜಿನಿ ಬಿರಾದಾರ, ಭಾರತಿ ಬಿರಾದಾರ, ಮಹಾಂತೇಶ್ವರಿ ಪಾಟೀಲ, ಲಲಿತಾ ರಜಪುರ, ಮಂಜುಳಾ ಜೋಶಿ, ಸಿದ್ದಮ್ಮ ಪಾಟೀಲ, ಪ್ರೇಮಾ ಕನ್ನೂರ, ಭಾರತಿ ಬಣಗಾರ ಇನ್ನಿತರರು ಉಪಸ್ಥಿತರಿದ್ದರು.
ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ನವರಸಪುರ ವಿವಿಧ ಕಾಲನಿಗಳ ನೂರಾರು ಮಹಿಳೆಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 