ಪ್ರತಿಭೆ ಸಮಾಜದ ಒಳಿತಿಗೆ ಸದ್ಭಳಕೆಯಾಗಲಿ: ಬಂತಿ
Let talent be put to good use for the good of society: Banti
ಲೋಕದರ್ಶನ ವರದಿ
ಹಾರೂಗೇರಿ 01: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರೆಸಿದ್ದೇಶ್ವರ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ, ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಮಕ್ಕಳಲ್ಲಿನ ಈ ಪ್ರತಿಭೆ, ಬುದ್ಧಿವಂತಿಕೆ ಸಮಾಜದ ಒಳಿತಿಗಾಗಿ ಬಳಕೆಯಾಗಬೇಕೆಂದು ಕುರುಬರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಸತ್ಯೆಪ್ಪ ಬಂತಿ ಹೇಳಿದರು.
ಪಟ್ಟಣದ ಕರೆಸಿದ್ದೇಶ್ವರ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅತೀ ಹೆಚ್ಚು ಅಂಕಗಗಳಿಸಿದ ಟಾಪ್‌ಟೆನ್ ವಿದ್ಯಾರ್ಥಿಗಳ ಸತ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆಯಬೇಕಾದರೆ ಶಿಕ್ಷಕರ ಪಾತ್ರ ಹಿರಿದಾಗಿದೆ. ಶಿಕ್ಷಕರು ನಿಮಗೆ ಸದಾ ಬೆನ್ನೆಲುಬಾಗಿದ್ದು, ಅವರ ಮಾರ್ಗದರ್ಶನದಲ್ಲಿ ಅಭವಿಷ್ಯವನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು.
ಮುಖ್ಯೋಪಾಧ್ಯಾಯ ಆಯ್.ಬಿ.ಬಿರಾದಾರ ಮಾತನಾಡಿ ಹೆಚ್ಚು ಅಂಕದ ಜೊತೆಗೆ ಒಳ್ಳೆಯ ವ್ಯಕ್ತಿತ್ವ, ಮಾನವೀಯ ಗುಣ ಮೈಗೂಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಮುಂದೆಯೂ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕೆಂದು ಹೇಳಿದರು.
ಈವೇಳೆ ಟಾಪ್‌ಟೆನ್ ವಿದ್ಯಾರ್ಥಿಗಳಾದ ನಿಸರ್ಗಾ ಬಡಿಗೇರ, ಅಂಕಿತಾ ಪಾಟೀಲ, ಸಭಾ ಶೇಖ, ಸಾದಿಯ ಜಮಾದಾರ, ಪ್ರೀತಿ ಗಾಣಿಗಾರ, ಜಮೀಯಾ ಜಮಾದಾರ, ವಿನೋದ ಬಡಿಗೇರ, ಲಕ್ಷ್ಮೀ ನಾವಿ, ಕವಿತಾ ಹೆಗಡೆ, ಈಶ್ವರಿ ಸರಿಕರ ಹಾಗೂ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ, ಅಭಿನಂದಿಸಿದರು.
ಸಂಸ್ಥೆಯ ಹಿರಿಯ ನಿರ್ದೇಶಕ ಸಿದ್ದಪ್ಪ ಹಾಡಕಾರ, ವಕೀಲ ಎಮ್.ಜಿ.ಹಾಡಕಾರ, ಎನ್.ಎಲ್.ತಟ್ಟಿಮನಿ, ಕೆ.ವಾಯ್.ನಾಯಿಕ, ಪ್ರಮೋದ ದೊಡಮನಿ, ಜಗದೀಶ ಗಡಾದ, ಜ್ಞಾನೇರ್ಶವರ ಹಾಡಕಾರ ಹಾಗೂ ಪಾಲಕರಾದ ರಮೇಶ ಬಡಿಗೇರ, ಬಸವರಾಜ ಪಾಟೀಲ, ಹಣಮಂತ ಗಾಣಿಗೇರ, ಬಾಬಾಗೌಡ ಪಾಟೀಲ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 