ಲೋಕದರ್ಶನ ವರದಿ
ಶಿರಹಟ್ಟಿ 22: ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರನ್ನು ಕ್ವಾರೈಂಟೆನ ಪರಿಶೀಲನೆಗೆ ಹೋದ ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿದ ಘಟನೆ ಅತ್ಯಂತ ಖಂಡನೀಯವಾಗಿದೆ, ಯಾರು ತಪ್ಪು ಮಾಡಿದ್ದಾರೆಯೋ ಅಂತಹವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಸಮಾಜ ಸೇವಕ ಹಸನ್ ತಹಶೀಲ್ದಾರ ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಯಮಗಳನ್ನು ಕಡ್ಡಾಯವಾಗಿ ಯಾರೇ ಆಗಲಿ ಪಾಲನೆ ಮಾಡದೆ ಉಲ್ಲಂಘಿಸುತ್ತಾರೆಯೋ ಅಂಥಹವರ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು.
ಕೆಲವು ಕಿಡಿಗೇಡಿಗಳು ಮಾಡುವ ಈ ರೀತಿಯ ಅಮಾನವೀಯ ಕೃತ್ಯಕ್ಕೆ ಅಂತಹ ಪುಂಡರನ್ನು ಶಿಕ್ಷಿಸಬೇಕು ಈ ಮೂಲಕ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಕೊರೊನಾ ಮಹಾಮಾರಿ ವೈರಸನ್ನು ನಿಯಂತ್ರಿಸಲು ಸರಕಾರದ ಆದೇಶವನ್ನು ಪಾಲನೆ ಹಾಗೂ ನಿಯಮವನ್ನು ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಂತಹ ಕಠಿಣ ಸಮಯದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೌರ ಕಾಮರ್ಿಕರ ಸಹೋದರರು ತಮ್ಮ ಕುಟುಂಬಗಳ ಜೀವವನ್ನೂ ಲೆಕ್ಕಿಸದೆ ತಮ್ಮ ಜೀವನವನ್ನು ಒತ್ತೆ ಇಟ್ಟು ಇಡೀ ರಾಜ್ಯವನ್ನು ಕೊರೊನಾ ರೋಗ ಹರಡದಂತೆ ಕರ್ತವ್ಯ ನಿರ್ವಹಿಸುತ್ತಿರುವಾಗ ಇಂತಹ ಘಟನೆಯನ್ನು ನಡೆಸುವ ಯಾವುದೇ ವ್ಯಕ್ತಿಯಾಗಲಿ ಅವರಿಗೆ ಕಠಿಣ ಶಿಕ್ಷೆಯಾಗಲಿ ನಮ್ಮ ರಾಜ್ಯದ ಮುಖ್ಯಮಂತ್ರಿಯವರು ಮಾಡಿರು ಆದೇಶವನ್ನು ಪಾಲನೆ ಮಾಡುವ ಮುಖಾಂತರ ಈ ಕೊರೊನಾ ಮಹಾಮಾರಿ ವೈರಸನ್ನು ತೊಲಗಿಸಲು ನಾವು ಅವರ ಆದೇಶವನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರತಿಕ್ರಿಯಿಸಿದರು.