ಬಾಗಲಕೋಟೆ25: ರನ್ನನ ಕೊಡುಗೆಗಳನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರನ್ನ ಪ್ರತಿಷ್ಠಾನ ಕಾರ್ಯಕ್ರಮ ಕುರಿತು ಇತ್ತೀಚೆಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರನ್ನನ ಸಾಹಿತ್ಯ ಹಳೆಗನ್ನಡದಲ್ಲಿದ್ದು, ಕೃತಿಗಳ ರೂಪದಲ್ಲಿದೆ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ರನ್ನನ ಸಾಹಿತ್ಯದ ಬಗ್ಗೆ ಅಭಿರುಚಿ ಹೆಚ್ಚಿಸಿ ಆಕಷರ್ಿತರಾಗಲು ನವೀನ ಮಾದರಿಯ ಆಧುನಿಕ ತಂತ್ರಜ್ಞಾನದ ಸಹಾಯ ಪಡೆದುಕೊಂಡು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಕೆಲಸವಾಗಬೇಕು ಎಂದರು.
ಇತ್ತೀಚೀನ ದಿನಗಳಲ್ಲಿ ಪುಸ್ತಕ ಮುದ್ರಿಸುವ ಹಾಗೂ ಓದುಗರ ಸಂಖ್ಯೆ ವಿರಳವಾಗುತ್ತಿರುವದರಿಂದ ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ಗಳು ಹೆಚ್ಚಾಗಿ ಬಳಕೆಯಾಗುತ್ತಿವೆ. ರನ್ನ ಸಾಹಿತ್ಯ, ಕಾವ್ಯಗಳನ್ನು ಕನ್ನಡ ಯುನಿಕ್ಕೋಡ್ಕೆ ಪರಿವತರ್ಿಸಿ ಗೂಗಲ್ನಲ್ಲಿ ಅಪಲೋಡ್ ಮಾಡುವ ಕಾರ್ಯವಾಗಬೇಕು. ಅಂದಾಗ ಮಾತ್ರ ರನ್ನ ಕೊಡುಗೆ, ಆದರ್ಶಗಳು ಎಲ್ಲೆಡೆ ಪ್ರಸರಿಸಲು ಸಾಧ್ಯವೆಂದರು. ಅಲ್ಲದೇ ರನ್ನನ ಪ್ರತಿಷ್ಠಾನದ ಹೆಸರಿನಲ್ಲಿ ಪ್ರತ್ಯೇಕ ವೆಬ್ಸೈಟ್ ಪೇಜ್ ತಯಾರಿಸಲು ಎನ್.ಐ.ಸಿಯ ಗಿರಯಾಚಾರ ಅವರಿಗೆ ತಿಳಿಸಿದರು. ಅಲ್ಲದೇ ಈ ಪೇಜನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಲಿಂಕ್ ಮಾಡಲು ಸೂಚಿಸಲಾಯಿತು.
ಕವಿಚರ್ಕವತರ್ಿ ರನ್ನನ ಕಾವ್ಯಗಳನ್ನು ಕೇವಲ ಪುಸ್ತಕ ರೂಪದಲ್ಲಿ ಮುದ್ರಿಸುವ ಕೆಲಸವಾಗದೇ ವೆಬ್ಪೇಜ್ನಲ್ಲಿ ಹಾಕುವ ವ್ಯವಸ್ಥೆಯಾಗಬೇಕು. ಗೂಗಲ್ನಲ್ಲಿ ಸರ್ಚ ಮಾಡಿದರೆ ಸಾಕು ರನ್ನ ಸಂಪೂರ್ಣ ಕಾವ್ಯಗಳು ಬರುವಂತಾಗಬೇಕು. ಅಂದಾಗ ಮಾತ್ರ ಇಂದಿನ ತಲೆಮಾರಿಗೆ ತಲುಪಿದಂತಾಗುತ್ತದೆ. ರನ್ನನ ಗದಾಯುದ್ದವನ್ನು ಇಂಗ್ಲೀಷ ಭಾಷೆಗ ಭಾಷಾಂತರ ಮಾಡಲಾಗಿದ್ದು, ಆ ಪುಸ್ತಕ ಬಿಡುಗಡೆಗೆ ಮುಧೋಳದ ರನ್ನ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈಗಾಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತಿ ತಿಂಗಳು ಒಂದೊಂದು ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಹಳೆಗನ್ನಡ ಕಾವ್ಯಕಮ್ಮಟ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ ವಿದ್ವಾಂಸರನ್ನು ಕರೆಯಿಸಿ ಉಪನ್ಯಾಸ ಕಾರ್ಯಕ್ರಮ, ಪುಸ್ತಕ ಪ್ರಕಟಣೆ ಸೇರಿದಂತೆ ವಿವಿಧ ಚಟುವಟಿಕೆಗಳ ಬಗ್ಗೆ ರನ್ನ ಪ್ರತಿಷ್ಠಾನದ ಸದಸ್ಯ ಬಿ.ಪಿ ಹಿರೇಸೋಮನ್ನವರ ವಿವರವಾಗಿ ಸಭೆಗೆ ತಿಳಿಸಿದರು. ರನ್ನ ಭವನದಲ್ಲಿ ಪ್ರವೇಶಿಸಿದಂತೆ ಮುಧೋಳದ ಸಾಂಸ್ಕೃತಿ ಇತಿಹಾಸದ ಚಿತ್ರಣ ಕಾಣುವಂತಾಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪವ್ವಾರ, ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ, ಉಪವಿಭಾಗಾಧಿಕಾರಿ ಎಚ್.ಜಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ, ರನ್ನ ಪ್ರತಿಷ್ಠಾನದ ಸದಸ್ಯರಾದ ಇಬ್ರಾಹಿಂ ಸುತಾರ, ವಾಯ್.ಎಚ್.ಕಾತರಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.