ಲೋಕದರ್ಶನ ವರದಿ
ಶಿಗ್ಗಾವಿ 02: ಸತ್ಯ, ಅಹಿಂಸೆ, ಸರಳತೆ ಹಾಗೂ ವೈಚಾರಿಕ ಚಿಂತನೆಗಳಿಂದ ಜಗತ್ತೀಗೆ ಮಾದರಿಯಾದವರು ಗಾಂಧೀಜಿ, ಅವರ ತಾತ್ವಿಕ ಚಿಂತನೆಗಳು, ಬದುಕು, ಹೋರಾಟದ ಗುಣಗಳ ಇಂದಿನ ಯುವಕರಲ್ಲಿ ಅನುಕರಣೆಯಾಗಲಿ ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ ಬಿ ನಾಯಕ್ ಅವರು ಹೇಳಿದರು.
ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪ್ರದರ್ಶನ ಕಲಾವಿಭಾಗ ವತಿಯಿಂದ ಆಡಳಿತ ಭವನದಲ್ಲಿನ ಮಲ್ಲಿಗೆದಂಡೆ ಸಭಾಂಗಣದಲ್ಲಿ ಜರುಗಿದ, ಧಾರವಾಡ ರಂಗಾಯಣ ಘಟಕದ ಕಲಾವಿದರಿಂದ ಬೊಳುವಾರು ಮೊಹ್ಮದ್ ಕುಂಇ ಅವರ ಕಾದಂಬರಿ ಆಧಾರಿತ ಡಾ. ಶ್ರೀಪಾದ ಭಟ್ ನಿದರ್ೇಶನದ ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಮೇಲೆ ಸತ್ಯ ಹರಿಶ್ಚಂದ್ರ ಕಥೆಯಾಧಾರಿತ ನಾಟಕ ಸಾಕಷ್ಟು ಪ್ರಭಾವ ಬೀರಿದ್ದು, ಈ ಹಿನ್ನೆಲೆಯಲ್ಲಿ ಸತ್ಯದ ಮಾರ್ಗವನ್ನು ಗಾಂಧೀಜಿಯವರು ಪ್ರತಿಪಾದಿಸುತ್ತಾರೆ. ಹಾಗಾಗಿ ವೈಚಾರಿಕ ಹಾಗೂ ಸದಾಭಿರುಚಿಯ ಅಂಶಗಳನ್ನು ಪ್ರದಶರ್ಿಸುವ ನಾಟಕದಂತಹ ದೃಶ್ಯ ಮಾಧ್ಯಮಗಳು ಪರಿಣಾಮಕಾರಿಯಾದ ಮಾಧ್ಯಮವಾಗಿದೆ ಎಂದು ರಂಗಭೂಮಿಯ ಕೊಡಿಗೆಗಳನ್ನು ಶ್ಲಾಘೀಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಡಾ.ಎಂ.ಎನ್.ವೆಂಕಟೇಶ ಅವರ ಮಾತನಾಡಿ, ಗಾಂಧೀಜಿಯವರ 150 ವರ್ಷದ ಸ್ಮರಣೆಗಾಗಿ ಅವರ ಚಿಂತನೆಗಳನ್ನು ಪ್ರಚಾರ ಪಡಿಸುವ ಮೂಲಕ ನಾಡಿನೆಲ್ಲೆಡೆ ತಲುಪಿಸುತ್ತಿರುವುದು ಉತ್ತಮವಾದ ಕಾರ್ಯವಾಗಿದೆ. ಗಾಂಧೀಜಿಯವರ ಚಿಂತನೆಗಳನ್ನು ಅನುಸರಿಸುವ ಮೂಲಕ ಅರೋಗ್ಯಕರವಾದ ಜೀವನ ಸಾಗಿಸುವ ಎಂದು ಕಿವಿಮಾತು ಹೇಳಿದರು.
ವಿವಯ ಪ್ರದರ್ಶನ ಕಲಾ ವಿಭಾದ ಅಧ್ಯಾಪಕರಾದ ಶ್ರೀ ಮಹ್ಮದಆಲಿ ಹೊಸೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಷ್ಟ್ರೀಯ ಸೇವಾ ಯೋಜನೆಯ ವಿವಿಯ ಸಂಯೋಜನಾಧಿಕಾರಿಯಾದ ಡಾ.ಮಲ್ಲಿಕಾರ್ಜುನ ಮಾನ್ಪಡೆ ಅವರು ಸ್ವಾಗತಿಸಿದರು, ಡಾ.ರಾಜಶೇಖರ ಡೊಂಬರ ಮತ್ತೂರು ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.