ಆಪರೇಷನ್ ಆಡಿಯೋ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ನಾಗನಗೌಡ ಕಂದಕೂರು

ಯಾದಗಿರಿ, ಸೆ 8  ಆಪರೇಷನ್ ಕಮಲದ ಅಡಿಯೋ ಬಿಡುಗಡೆಯ ದ್ವೇಷದಿಂದ ಜಿಲ್ಲೆಗೆ ಅನುದಾನ ರದ್ದು ಮಾಡಿದ್ದು, ಆಪರೇಷನ್ ಆಡಿಯೋ ಪ್ರಕರಣವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಲಿ ಎಂದು  ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು  ಆಗ್ರಹಿಸಿದ್ದಾರೆ ಜಿಲ್ಲೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಆಡಿಯೋ ಬಿಡುಗಡೆಯ ದ್ವೇಷದಿಂದ ಜಿಲ್ಲೆಗೆ ಅನುದಾನ ರದ್ದು ಮಾಡಿದ್ದಾರೆ. ಮುಖ್ಯಮಂತ್ರಿ ಬಳಿ ಶಾಸಕರ ನಿಯೋಗ ಹೋಗಿ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡುತ್ತೇವೆ. ಹಣ ಬಿಡುಗಡೆ ಮಾಡದಿದ್ದರೆ, ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಪ್ರಾಣ ತ್ಯಾಗಕ್ಕೂ ಸಿದ್ಧ. ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ ರಾಜಾ ಹುಲಿ. ಆದರೆ, ದೆಹಲಿಗೆ ಹೋದಾಗ ಅವರು ಹೆಣ್ಣು ಹುಲಿ ಆಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮೀತ್ ಶಾ ಅವರನ್ನು ಕಂಡರೆ ಯಡಿಯೂರಪ್ಪ ಅವರಿಗೆ ಭಯ ಕಾಡುತ್ತದೆ. ಮೋದಿ ಜನರನ್ನು ಭಾವುಕರನ್ನಾಗಿ ಮಾಡಿ ಮೋಸ ಮಾಡುತ್ತಿದ್ದು, ಮೋದಿ ಮಾತಿನಲ್ಲಿ ಮಂಟಪ ಕಟ್ಟುತ್ತಿದ್ದಾರೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆಯಲ್ಲಿ ಮಗ್ನರಾಗಿದ್ದಾರೆ. ಮುಖ್ಯಮಂತ್ರಿ ಅವರಿಗೆ ಇದೆಲ್ಲ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ವರ್ಗಾವಣೆ ದಂಧೆಯಿಂದ ಬರೋಬ್ಬರಿ ಒಂದು ಸಾವಿರ ಕೋಟಿ ಹಣ ಸಂಪಾದಿಸಿದ್ದಾರೆ ಎಂದು ಆರೋಪಿಸಿದರು ರಾಜ್ಯದಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದ ಜನರ ಬದುಕು ನರಕಯಾತನೆ ಆಗಿದೆ. ಆದರೆ, ಇದುವರೆಗೆ ವರ್ಗಾವಣೆ ಒಂದೇ ಕೆಲಸವಾಗಿದೆ. ಅಧಿಕಾರಿಗಳನ್ನು ಅತ್ತಂದಿತ್ತ ಓಡಾಡಿಸುತ್ತಿದ್ದಾರೆ ಎಂದು ಅವರು  ಕಿಡಿಕಾರಿದರು.