ಲೋಕದರ್ಶನವರದಿ
ಗುಳೇದಗುಡ್ಡ23: ದೇಶದ ಸ್ವಾತಂತ್ರ್ಯದ ಬೀಜ ಬಿತ್ತಿದವರಲ್ಲಿ ಸುಭಾಸ್ಚಂದ್ರ ಬೋಸರೂ ಒಬ್ಬರು. ಅವರ ಕ್ರಾಂತಿಯ ಗರ್ಜನೆ ಬ್ರಿಟೀಷರನ್ನು ನಿದ್ದೆ ಗೆಡಿಸುತ್ತಿದ್ದವು. ಇಂದಿನ ರಾಜಕೀಯ ಸ್ಥಿತಿಗೆ ಸುಭಾಸ್ ಚಂದ್ರಬೋಸ್ರ ಆದರ್ಶ ಗುಣಗಳು, ಕ್ರಾಂತಿಕಾರಿ ನಡುವಳಿಕೆಗಳು ಮತ್ತು ನಾಯಕತ್ವದ ಗುಣಗಳು ಯುವಕರಿಗೆ ಅವಶ್ಯವಾಗಿವೆ ಎಂದು ಪ್ರಾಚಾರ್ಯ ಎಂ.ಜಿ ಚಂದ್ರಬೋಸ್ ಹೇಳಿದರು.
ಅವರು ಗುರುವಾರ ಇಲ್ಲಿಗೆ ಸಮೀಪದ ನೀರಲಕೇರಿ ಗ್ರಾಮದ ಎಂ.ಆರ್.ಗಾಣಿಗೇರ ಪಬ್ಲಿಕ್ ಶಾಲೆಯಲ್ಲಿ ಸುಭಾಸಚಂದ್ರ ಬೋಸ್ರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿ, ನನಗೆ ರಕ್ತ ಕೊಡಿನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಹೇಳಿದ ಸುಭಾಸಚಂದ್ರ ಬೋಸರ ಕ್ರಾಂತಿಕಾರಕ ಮಾತು ಇಂದಿಗೂ ವೀರರಲ್ಲಿ ಮನದಲ್ಲಿ ಚಿರಸ್ಥಾಯಿಯಾಗಿದೆ.ಇಂದಿನ ಯುವಕರಲ್ಲಿ ದೇಶ ಭಕ್ತಿ ಬೆಳೆಯಬೇಕು. ದೇಶ ಕಟ್ಟುವಲ್ಲಿ ಇಂತಹ ಅನೇಕ ಮಹನೀಯರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಅವರ ಸ್ಮರಣೆ ನಿಮ್ಮಲ್ಲಿ ದೇಶ ಭಕ್ತಿ ಮೂಡಿಸಲಿ ಎಂದರು.
ಭಾವಚಿತ್ರಕ್ಕೆ ಪೂಜೆ ನೆರೆವೇರಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಮಕ್ಕಳಿಂದ ಭಾಷಣ, ಛದ್ಮವೇಷ ಹಾಗೂ ರಾಷ್ಟ್ರಭಕ್ತಿಗೀತೆ ಮುಂತಾದ ಕಾರ್ಯಕ್ರಮಗಳು ಜರುಗಿದವು.
ಭಾರತಿ ರಂಗಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು, ಶಿಕ್ಷಕವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.