ಧಾರವಾಡ ಸುಪ್ರೀಂ ಕೋರ್ಟ್‌ ಬೆಂಚ್ ಪ್ರಾರಂಭಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸೋಣ: ಕೋನರಡ್ಡಿ

Let's urge the central government to start a Dharwad Supreme Court bench: Konaraddy

ಮಹದಾಯಿ, ಕಳಸಾ-ಬಂಡೂರಿ ಮತ್ತು ಮೇಕೆದಾಟು ಪ್ರಧಾನಮಂತ್ರಿ ಬಳಿ ನಿಯೋಗ ಹೋಗಿ ಒತ್ತಾಯಿಸಲು ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಆಗ್ರಹ  

ಬೆಂಗಳೂರು 21: ದಕ್ಷಿಣ ಭಾರತದಲ್ಲಿ ಕಕ್ಷಿದಾರರಿಗೆ ದೆಹಲಿಗೆ ಹೋಗಿ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ದಾಖಲಿಸಲು ತೊಂದರೆಯಾಗುತ್ತಿದ್ದು ಬಡ ಕಕ್ಷಿದಾರರ ಪರವಾಗಿ ಜನರ ಬಾಗಲಿಗೆ ನ್ಯಾಯ ಎಂಬ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿ ಸುಪ್ರೀಂ ಕೋರ್ಟ್‌ ಬೆಂಚನ್ನು ಧಾರವಾಡದಲ್ಲಿ ಪ್ರಾರಂಭಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಾಯಿಸಬೇಕೆಂದು ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಮನವಿ ಮಾಡಿದರು.  

ಕಾಂಗ್ರೆಸನ ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ ದಿ. 20 ರಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಾ ಧಾರವಾಡ ಭಾಗದಲ್ಲಿ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕು. ಕಾನೂನು ತಗಾದೆಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ವರೆಗೂ ಹೋರಾಟ ನಡೆಸಬೇಕಾದ ಸಂದರ್ಭ ಬಂದಾಗ ಜಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠವನ್ನು ಉತ್ತರ ಕರ್ನಾಟಕದ ಧಾರವಾಡದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಕೆಲವು ಶಾಸಕರು ಬೆಂಗಳೂರಿನಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.   

ಕೃಷ್ಣ ಹಾಗೂ ಕಾವೇರಿ ಕಣಿವೆಗಳು ರಾಜ್ಯದ ಎರಡು ಕಣ್ಣುಗಳು ಇದ್ದಂತೆ. ಅದರಲ್ಲಿ ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಮಹದಾಯಿ, ಕಳಸಾ-ಬಂಡೂರಿ ಯೋಜನೆಯನ್ನು ರಾಜ್ಯ ಸರ್ಕಾರ ಟೆಂಡರ್ ಕರೆದಿದ್ದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ಅರಣ್ಯ ಹಾಗೂ ಪರಿಸರ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸುವದು ಬಾಕಿ ಇರುತ್ತದೆ ಹಾಗೂಮೇಕೆದಾಟು ಯೋಜನೆ ಜಾರಿ ಮಾಡಲು ಕಾಂಗ್ರೆಸ್ ಪಕ್ಷದಿಂದ ರೈತರೊಂದಿಗೆ ಪಾದಯಾತ್ರೆ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರೂ ಇಲ್ಲಿಯವರೆಗೆ ಅನುಮತಿ ನೀಡದೆ ಬೆಂಗಳೂರಿನ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಸ್ಪಂಧಿಸುತ್ತಿಲ್ಲ ಇದು ನೋವಿನ ಸಂಗತಿ. ಕೃಷ್ಣ ಕಣಿವೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು. ತುಂಗಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ 5300 ಕೋಟಿ ಅನುದಾನ ಬಿಡುಗಡೆ ಮಾಡಲು ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಿಯೋಗ ತೆಗೆದುಕೊಂಡು ಕೂಡಲೇ ಅನುಮತೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.  

ಲೋಕಸಭೆಯಲ್ಲಿ ದಿನಾಂಕ: 20 ರಂದು ಹಾವೇರಿ-ಗದಗ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮಹದಾಯಿ ಹಾಗೂ ಕೃಷ್ಣ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆಗೆ ಪರಿಹಾರ ನೀಡಬೇಕು, ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಒಂದೇ ನ್ಯಾಯಮಂಡಳಿ ಸ್ಥಾಪನೆ ಮಾಡಿ 6 ತಿಂಗಳಲ್ಲಿ ವಿವಾದ ಇತ್ಯರ್ಥಪಡೆಸಬೇಕೆಂದು ಒತ್ತಾಯಿಸಿರುವದು ಸ್ವಾಗತಾರ್ಹ.  

ಕರೋನಾ ಮತ್ತು ಮುಂತಾದ ಸಮಸ್ಯೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ಸಹಾಯ ಮಾಡಲೇಬೆಕೆಂದು ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಸೇರಿದಂತೆ 5 ಪಂಚ ಗ್ಯಾರೆಂಟಿ ಜಾರಿ ಮಾಡುತ್ತೇವೆ ಎಂದು ಮಾತು ಕೊಟ್ಟಂತೆ 56 ಸಾವಿರ ಕೋಟಿ ಹಣವನ್ನು ನೇರವಾಗಿ ಡಿಬಿಟಿ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಮೂಲಕ  ನಮ್ಮ ಸರ್ಕಾರ ನುಡಿದಂತೆ ನಡೆದು ಜನರ ವಿಶ್ವಾಸ ಗಳಿಸಿದ್ದೇವೆ.  

ರಾಜ್ಯದಲ್ಲಿ ಜಾರಿಯಲ್ಲಿದ್ದ ಡಾ: ನಂಜುಂಡಪ್ಪ (ಜಠಿ) ಯೋಜನೆ ಸ್ಥಗಿತಗೊಂಡ ನಂತರ ಪ್ರೋ. ಗೋವಿಂದರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿಯ ವರದಿ ಬರುವವರೆಗೆ ಕಲ್ಯಾಣ ಕರ್ನಾಟಕಕ್ಕೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 371ಜೆ ಅನುಷ್ಠಾನಗೊಳಿಸಿದಂತೆ ಅದಕ್ಕೆ ಸರಿಸಮಾನವಾಗಿ ಬೆಳಗಾವಿ ವಿಭಾಗದ ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕೆಂದರು.  

ನನ್ನ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖ ಬೇಡಿಕೆಯಾದ ಬೆಣ್ಣೆಹಳ್ಳ ಪ್ರವಾಹ ತಡೆಯಲು ಕಳೆದ ಬಾರಿ ಆಯವ್ಯಯದಲ್ಲಿ ಮಂಡಣೆಯಾಗಿ ಈ ಬಾರಿ ಅನುಷ್ಠಾನಗೊಳಿಸಲು 200 ಕೋಟಿ ಅನುದಾನ ಒದಗಿಸಿಲಾಗಿದೆ, ಕಂದಾಯ ಇಲಾಖೆಯಿಂದ ನೂತನ ಅಣ್ಣಿಗೇರಿ ತಾಲ್ಲೂಕಿಗೆ ಪ್ರಜಾಸೌಧ ನಿರ್ಮಾಣ ಹಾಗೂ ಆರೋಗ್ಯ ಇಲಾಖೆಯಿಂದ ಅಣ್ಣಿಗೇರಿ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (ಕಊಅ) ಸಮುದಾಯ ಆರೋಗ್ಯ ಕೇಂದ್ರವಾಗಿ (ಅಊಅ) ಮೇಲ್ದರ್ಜೆಗೆ ಏರಿಸುವದು, ನಿವೃತ್ತಿ ಹೊಂದಿದ ಕುಸ್ತಿಪಟುಗಳಿಗೆ (ಮಾಜಿ ಪೈಲವಾನರಿಗೆ) ನೀಡಲಾಗುತ್ತಿರುವ ಮಾಸಾಶನವನ್ನು ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಿಗೆ 6000 ರೂ., ರಾಷ್ಟ್ರ ಮಟ್ಟದ ಕುಸ್ತಿಪಟುಗಳಿಗೆ 5000 ರೂ., ರಾಜ್ಯ ಮಟ್ಟಡ ಕುಸ್ತಿಪಟುಗಳಿಗೆ 4500 ರೂ ಗಳಿಗೆ ಮಾಶಾಸನ ಹೆಚ್ಚಳ ಮಾಡಲಾಗಿದೆ.  

ರೈತರ ಹೋರಾಟಗಾರ ಪ್ರೋ. ನಂಜುಂಡಸ್ವಾಮಿ ಅವರ ಸಂಶೋಧನಾ ಪೀಠವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾವುದಾಗಿ ಹೇಳಿರುವುದು ಸ್ವಾಗತಾರ್ಹ. ಇದೇ ರೀತಿ ರೈತ ಹೋರಾಟ ಮಾಡಿದ ನಾಯಕರುಗಳಾದ ಬಾಬಾಗೌಡ ಪಾಟೀಲ, ಕೆ.ಎಸ್‌. ಪುಟ್ಟಣ್ಣಯ್ಯ, ಬಸವರಾಜ ತಂಬಾಕೆ, ನವಲಗುಂದ-ನರಗುಂದ ರೈತರ ಬಂಡಾಯದ ಹೋರಾಟದಲ್ಲಿ ಪ್ರಾಣತೆತ್ತ ರೈತ ಯೋಧರಾದ ಬಸಪ್ಪ ಲಕ್ಕುಂಡಿ ಹಾಗೂ ವೀರ​‍್ಪ ಕಡ್ಲಿಕೊಪ್ಪ ಅವರ ಬಗ್ಗೆ ಹಾಗೂ ಮುಂತಾದ ರೈತರ ಹೋರಾಟಗಾರರ ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಇತಿಹಾಸ ಗೊತ್ತಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರ ಹೋರಾಟಗಾರನಾಗಿ ಒತ್ತಾಯಿಸಲಾಯಿತು.  

ಧಾರವಾಡ ಜಿಲ್ಲೆಯಲ್ಲಿ ಖಾಸಗಿ ಇಂಜೀನೀಯರಿಂಗ್ ಕಾಲೇಜುಗಳನ್ ಬಿಟ್ಟರೆ ಸರ್ಕಾರದ ಇಂಜೀನೀಯರಿಂಗ್ ಕಾಲೇಜನ್ನು ಇಲ್ಲಿಯವರೆಗೂ ಸ್ಥಾಪಿಸಿಲ್ಲ. ನನ್ನ ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಸರ್ಕಾರಿ ಜಮೀನು ಇದ್ದು ಇಂಜೀನೀಯರಿಂಗ್ ಕಾಲೇಜು, ಮೊರಾರ್ಜಿ ವಸತಿ ಶಾಲೆ ಹಾಗೂ ವಿದ್ಯಾರ್ಥಗಳಿಗೆ ವಸತಿ ನಿಲಯ ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯಿಸಲಾಯಿತು.  

ಬೆಂಗಳೂರು ಬಿಟ್ಟರೇ ಎರಡನೇ ರಾಜಧಾನಿ ಎನಿಸಿಕೊಂಡ ಹುಬ್ಬಳ್ಳಿಯಲ್ಲಿರುವ ಉತ್ತರ ಕರ್ನಾಟಕದ ಜೀವನಾಡಿ ಕೆ.ಎಂ.ಸಿ. ಯಲ್ಲಿ ಜಯದೇವ ಹೃದಯಾಲಯ ಹಾಗೂ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಬೇಕು, ಮೂಲಭೂತ ಸೌಕರ್ಯಕ್ಕಾಗಿ 100 ಕೋಟಿ ಅನುದಾನ ಮೀಸಲಿರಿಸಲು ಒತ್ತಾಯಿಸಲಾಯಿತು.   

ಕಾಯಕವೇ ಕೈಲಾಸ, ಸರ್ವಧರ್ಮ ಒಂದು ಎಂಬ ಸಾಮಾಜಿಕ ಧಾರ್ಮಿಕ ಕ್ರಾಂತಿ ಕೀರ್ತಿ ವಿಶ್ವಗುರು ಬಸವಣ್ಣ ಅರಿಗೆ ಸಲ್ಲುತ್ತದೆ. ಬಸವಣ್ಣ ಅವರನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಸರ್ಕಾರ ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ನವಲಗುಂದ ರೈತ ಬಂಡಾಯದ ಹೋರಾಟದಿಂದಲೇ ನಾನು ಶಾಸಕನಾಗಿ, ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 16 ಬಾರಿ ಆಯವ್ಯಯ ಮಂಡಿಸಿದ್ದು ನಮ್ಮೆಲ್ಲರ ಹೆಮ್ಮೆ. ಆರ್ಥಿಕ ಶಿಸ್ತನ್ನು ಉಳಿಸಿಕೊಂಡು ದೊಡ್ಡ ಗಾತ್ರದ ಆಯವ್ಯಯವು ರೂ. 4,09,549 ಕೋಟಿಗಳು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಗಾದೆಯಂತೆ ಜನರ ಪ್ರೀತಿ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದ ಸರ್ಕಾರ ನುಡಿದಂತೆ ನಡೆದು ಆಯವ್ಯಯವನ್ನು ಮಂಡಿಸಿದ್ದು ಸಂತೋಷವಾಗಿದೆ.  

ಮುಖ್ಯಮಂತ್ರಿಗಳ 2025-26ನೇ ಆಯವ್ಯಯವನ್ನು ನಾನು ಬೆಂಬಲಿಸುತ್ತಾ ಬಿಜೆಪಿ ಅವರು ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡಲು ಆಯವ್ಯಯದ ವಿರುದ್ಧ ಮಾತನಾಡುವುದನ್ನು ಖಂಡಿಸುತ್ತೇನೆ. ಆಯವ್ಯಯವನ್ನು ಸ್ವಾಗತಿಸಿ ಅವಕಾಶಕ್ಕೆ ಧನ್ಯವಾದ ತಿಳಿಸಿದೆನು.