ಸಮ್ಮೇಳನ ರಾಜ್ಯಕ್ಕೆ ಮಾದರಿಯಾಗುವಂತೆ ಶ್ರಮಿಸೋಣ: ಸಾದಿಕ ಅಲಿ

ಲೋಕದರ್ಶನ ವರದಿ

ಗಂಗಾವತಿ 29: ಕಾರ್ಯನಿರತ  ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ  ರಾಜ್ಯಮಟ್ಟದ ಸಮ್ಮೇಳನ ನಡೆಯುತ್ತದೆ. ಅದರಂತೆ ಪ್ರಸಕ್ತ ವರ್ಷದ 35ನೇ ರಾಜ್ಯಮಟ್ಟದ ಸಮ್ಮೇಳನ ಕೊಪ್ಪಳ ಜಿಲ್ಲೆಯಲ್ಲಿ ನಡೆಸುವಂತೆ ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಘೋಷಣೆ ಮಾಡಿ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.  ಈ ಸಮ್ಮೇಳನದ ಯಶಸ್ವಿಗೆ ಗಂಗಾವತಿ ತಾಲೂಕಿನ ಎಲ್ಲಾ ಪತ್ರಕರ್ತರು ಸೇರಿದಂತೆ ಜಿಲ್ಲೆಯ ಪತ್ರಕರ್ತರು ಸಜ್ಜಾಗಬೇಕು.  ನಾವು ನಡೆಸುವ ರಾಜ್ಯಮಟ್ಟದ ಈ ಸಮ್ಮೇಳನ ಈಡೀ ರಾಜ್ಯಕ್ಕೆ ಮಾದರಿಯಾಗಿ ಕೊಪ್ಪಳ ಜಿಲ್ಲೆಯ ಹೆಸರು ಪಡೆಯಬೇಕು ಎಂದು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಸಾದಿ ಕಅಲಿ ಹೇಳಿದರು. 

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನ ಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.  ಕಾರ್ಯನಿರತ ಪತ್ರಕರ್ತರ ಸಂಘ ಸರಕಾರದ ಮಾನ್ಯತೆ ಪಡೆದ ಸಂಘಟನೆಯಾಗಿದೆ.  ಈ ಸಂಘದಲ್ಲಿ ಸದಸ್ಯತ್ವ ಪಡೆದ ಪತ್ರಕರ್ತರಿಗೆ ಸರಕಾರದ ಸೌಲಭ್ಯಗಳು ದೊರೆಯುತ್ತವೆ.  ಆರೋಗ್ಯ ಕಾಡರ್್ ವಿತರಣೆ ಮಾಡುವ ಕುರಿತು ಸರಕಾರ ಈಗಾಗಲೇ ಆದೇಶ ಮಾಡಿದೆ.  ಇಂತಹ ಸಂಘಟನೆಯಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿರುವುದು ಭಾಗ್ಯ.  ಸೆಪ್ಟೆಂಬರ್ ತಿಂಗಳಲ್ಲಿನಲ್ಲಿ 35ನೇ ರಾಜ್ಯ ಸಮ್ಮೇಳನ ನಡೆಸುವುದಾಗಿ ನಾವು ಈಗಾಗಲೇ ರಾಜ್ಯ ಸಂಘಕ್ಕೆ ಮನವಿ ಮಾಡಿದ್ದೇವೆ.  ನಮ್ಮ ಮನವಿಗೂ ಅವರು ಈಗಾಗಲೇ ನಿರ್ಣಯ ತೆಗೆದುಕೊಂಡು ಘೋಷಣೆ ಮಾಡಿದ್ದಾರೆ.  ಈ ಹಿನ್ನೆಲೆಯಲ್ಲಿ ನಾವು ಈಗಿನಿಂದಲೇ ಸಿದ್ಧತೆಗೆ ಸಕ್ರೀಯರಾಗಬೇಕು.  ಈ ಸಮ್ಮೇಳನದಲ್ಲಿ ನಾಡಿನ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಚಿವರು ಸೇರಿದಂತೆ ರಾಜ್ಯಮಟ್ಟದ ಪತ್ರಕರ್ತರು ಆಗಮಿಸುತ್ತಾರೆ.  ಮತ್ತು ಸಮ್ಮೇಳನದ ಮೂಲಕ ನಮ್ಮ ಜಿಲ್ಲೆಯ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಚಚರ್ಿಸಲಾಗುವುದು.  ಎಲ್ಲರು ಒಗ್ಗಟ್ಟಾಗಿ ಯಶಸ್ವಿಗೆ ಶ್ರಮಿಸೋಣ ಎಂದರು.  

ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೆಚ್.ಎಸ್.ಹರೀಶ, ಜಿ.ಎಸ್.ಗೋನಾಳ ಮಾತನಾಡಿ, ನಮ್ಮ ಜಿಲ್ಲೆಗೆ ರಾಜ್ಯ ಸಮ್ಮೇಳನ ನಡೆಸುವ ಜವಬ್ದಾರಿ ನೀಡಿದ್ದಾರೆ.  ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ವಿಶೇಷವಾಗಿ ಗಂಗಾವತಿ ಪತ್ರಕರ್ತರು ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದರದೊಂದಿಗೆ ಒಂದುವಾರಗಳ ಕಾಲ ಸಮಯ ನೀಡಬೇಕು.  ಇದು ಅಭಿಪ್ರಾಯ ಸಂಗ್ರಹಣೆಗಾಗಿ ಸಭೆ ನಡೆಸುತ್ತಿದ್ದು, ಇನ್ನು ಹತ್ತಾರು ರೀತಿಯ ಸಭೆಗಳು ನಡೆಯಲಿದ್ದು, ಆ ಸಭೆಗೆ ಎಲ್ಲರನ್ನು ಅಹ್ವಾನಿಸಲಾಗುವುದು ಎಂದರು. 

ಸಮ್ಮೇಳನ ನಿರ್ವಹಣ ಸಮಿತಿ ಅಧ್ಯಕ್ಷ ಸಿರಾಜ ಬಿಸರಹಳ್ಳಿ ಮಾತನಾಡಿ, ಪತ್ರಕರ್ತರ ರಾಜ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.  ಸಮ್ಮೇಳನ ಯಶಸ್ವಿಗೆ ಎಲ್ಲರೂ ಸಂಪೂರ್ಣ ತೊಡಿಸಿಕೊಂಡಿದ್ದೇವೆ.  ವಿಶೇಷವಾಗಿ ಈ ಸಮ್ಮೇಳನಕ್ಕೆ ಗಂಗಾವತಿ ಪತ್ರಕರ್ತರು ಸಂಪೂರ್ಣ ತೊಡಿಸಿಕೊಳ್ಳಬೇಕು.  ಸಮ್ಮೇಳಕ್ಕಾಗಿ ನೀಡುವ ಜವಬ್ದಾರಿಯನ್ನು ನಿಭಾಯಿಸಲು ಎಲ್ಲರು ಮುಂದಾಗಬೇಕು ಎಂದು ಕರೆ ನೀಡಿದರು.  

ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎಂ.ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಸಂಘಟನಾ ಕಾರ್ಯದಶರ್ಿ ವೃಷಭೇಂದ್ರಸ್ವಾಮಿ, ತಾಲೂಕು ಅಧ್ಯಕ್ಷ ವಿಶ್ವನಾಥ ಬೆಳಗಲ್ಮಠ ಮಾತನಾಡಿ, ಸಮ್ಮೇಳನ ಯಶಸ್ವಿಗೆ ಗಂಗಾವತಿಯ ಎಲ್ಲಾ ಪತ್ರಕರ್ತರು ಸಂಪೂರ್ಣ ತೊಡಗಿಸಿಕೊಳ್ಳುತ್ತೇವೆ.  ಸಾಕಷ್ಟು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.  ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಕುಲಕಣಿ, ಗೌರವ ಸಲಹೆಗಾರ ನಾಗರಾಜ ಇಂಗಳಗಿ, ಪ್ರಸನ್ನ ದೇಸಾಯಿ, ದೇವರಾಜ ಮತ್ತಿತರ ಸಮ್ಮೇಳನ ಕುರಿತು ಸಲಹೆ ನೀಡಿದರು.  ಸಂಘಟನೆ ಮತ್ತು ಪತ್ರಕರ್ತ ಸಮಸ್ಯೆಗಳ ಕುರಿತು ಚಚರ್ಿಸಲಾಯಿತು.  ತಾಲೂಕು ಪ್ರಧಾನ ಕಾರ್ಯದಶರ್ಿ ಹರೀಶ ಕುಲಕಣರ್ಿ ನಿರ್ವಹಿಸಿದರು.  ಪತ್ರಕರ್ತರಾದ ಬಳ್ಳಾರಿ ವಿರೇಶ, ಎಂ.ಜೆ.ಶ್ರೀನಿವಾಸ, ಶ್ರೀನಿವಾಸ ದೇವಿಕೇರಿ, ವಸಂತ, ಹನುಮೇಶ ಭಟಾರಿ, ಶರಣಯ್ಯಸ್ವಾಮಿ, ವೆಂಕಟೇಶ ಹೊಸಳ್ಳಿ, ವಾಗೇಶಸ್ವಾಮಿ, ಬಸವರಾಜ ಹಣವಾಳ, ಮಂಜುನಾಥ ಗುಡ್ಲಾನೂರು, ಕಾಸಿಂ, ರವಿ, ಕಾಶಿನಾಥ, ಶಿವಪ್ಪ ನಾಯಕ ಮತ್ತಿತರು ಇದ್ದರು.