ಧಾರವಾಡ 15: ಸಂಗೀತ ಕ್ಷೇತ್ರಕ್ಕೆ ಪಂಡಿತ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ. ಅವರ ಆಶಯದಂತೆ ಸಂಗೀತ ಮತ್ತು ಕಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅವುಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಧಾರವಾಡದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಪರಾಸ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಕುರಿತು ಸವದತ್ತಿಯಲ್ಲಿ ಏರಿ್ಡಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸವದತ್ತಿ ತಾಲೂಕಿನಲ್ಲಿರುವ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಬೇಕಾಗಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದರು.ಪ್ರತಿಷ್ಠಾನದ ಉಪಾಧ್ಯಕ್ಷರಾದ ಸುರೇಶ ಬೆಟಗೇರಿ ಮಾತನಾಡಿ, ಧಾರವಾಡದಲ್ಲಿ ಜರುಗಿದ ಪುಟ್ಟರಾಜ ಗವಾಯಿಗಳ 14ನೆಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವಿಸುವ ಕಾರ್ಯಕ್ರಮವನ್ನು ಈ ಒಂದು ಪ್ರತಿಷ್ಠಾನದ ಮುಖಾಂತರ ಮಾಡಲಾಗಿತ್ತು. ಅದರಲ್ಲಿ ಸವದತ್ತಿಯ ಗಣ್ಯರನ್ನು ಸಹ ಆಹ್ವಾನಿಸಿ ಗೌರವಿಸಲಾಗಿತ್ತು ಉಳಿದ ಕೆಲವು ಗಣ್ಯರಿಗೆ ಸವದತ್ತಿ ಪಟ್ಟಣಕ್ಕೆ ಬಂದು ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ನಮ್ಮ ಪ್ರತಿಷ್ಠಾನದಿಂದ ಮಾಡುತ್ತಿದ್ದೇವೆ ಎಂದರು. ಗಣ್ಯರಾದ ಸೌರಭ ಆನಂದ ಚೋಪ್ರಾ ಮಾತನಾಡಿ, ತಾಲೂಕಿನಲ್ಲಿ ಸಂಗೀತ ಹಾಗೂ ಸಾಹಿತ್ಯದ ಜೊತೆಗೆ ಬಡ ಮಕ್ಕಳಿಗೆ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದಿಂದ ತರಬೇತಿ ನೀಡುವ ಕಾರ್ಯಕ್ರಮವನ್ನು ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದಿಂದ ತವನಪ್ಪ ಸದರೆ, ಉಮೇಶ್ ವಕ್ಕುಂದ, ಅಭಿಯಂತರರಾದ ಭೋಪಾಲ್ ಭಾಂಡೆಕರ್, ಪ್ರಭು ಪ್ರಭನವರ, ಸೌರಭ ಆನಂದ್ ಚೋಪ್ರಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಮಹಮ್ಮದ್ ಎಲಿಗಾರ, ಡಾ. ರಾಜು ಪಾಯಣ್ಣವರ, ನಾಗರಾಜ ಬೋನಗೇರಿ, ಪತ್ರಕರ್ತರಾದ ಗೀರೀಶಪ್ರಸಾದ ರೇವಡಿ, ಪ್ರವೀಣಕುಮಾರ ಅವಗಡನವರ, ಮಲ್ಲಿಕಾರ್ಜುನ ಬೀಳಗಿ, ಅರವಿಂದ ಇಜಂತಕರ ಎಂ. ಎಸ್. ಫರಾಸ, ಪ್ರೇಮಾನಂದ ಸಿಂಧೆ ಉಪಸ್ಥಿತರಿದ್ದರು.