ಹೆಣ್ಣಿನ ಮೇಲಿನ ದೌರ್ಜನ್ಯ ನಿಲ್ಲಲಿ : ಲಕ್ಷ್ಮಣ ಕಿಶೋರ
Let's stop violence against women: Lakshman Kishor
ಮಹಾಲಿಂಗಪುರ 21: ಹೆಣ್ಣು ಸಬಲೆಯಲ್ಲ, ಅವಳಿಗೆ ಉತ್ತಮ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುತ್ತಾಳೆ. ಬಾಲ್ಯವಿವಾಹ, ಅತ್ಯಾಚಾರ ಹೀಗೆ ಹೆಣ್ಣಿನ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು ತಡೆಯುವ ಕಾರ್ಯ ನಮ್ಮಿಂದಾಗಬೇಕು. ಅಪಾರಜ್ಞಾನವನ್ನು ಹೊಂದಿ ಒಳ್ಳೆ ಅಧಿಕಾರ ಪಡೆದು ಮನೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾಳೆ ಎಂದು ಪತ್ರಕರ್ತ ಲಕ್ಷ್ಮಣ ಕಿಶೋರ ಹೇಳಿದರು.ಸ್ಥಳೀಯ ಕೆಂಗೇರಿಮಡ್ಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಗರ್ಲ್ಸ್ ಐಕಾನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಯೋಜಕಿ ತೇಜಸ್ವಿನಿ ಭಜಂತ್ರಿ ಮಾತನಾಡಿ ಮಿಲಾನ್ ಸಂಸ್ಥೆಯು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. 12 ರಿಂದ 18 ವರ್ಷದ ಒಳಗಿನ ಹೆಣ್ಣು ಮಕ್ಕಳನ್ನು ಒಳಗೊಂಡು, ಅದರಲ್ಲೂ ಗರ್ಲ್ಸ್ ಐಕಾನ್ ನಲ್ಲಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಮೊಬೈಲ್, ಶಾಲಾ ಚೀಲ, ಪುಸ್ತಕ ವಿತರಣೆ ಮಾಡುತ್ತಿದೆ. ಹೆಚ್ಚಾಗಿ ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಡೆದು ಅವರಿಗೆ ನಾಯಕತ್ವದ ತರಬೇತಿ ನೀಡಿ ಬಲಪಡಿಸುತ್ತಿದೆ ಎಂದರು.
ನಂತರ ಅತಿಥಿ ಸಿದ್ದಣ್ಣ ರಾಮೋಜಿ, ಗರ್ಲ್ಸ್ ಐಕಾನ್ಸ್‌ನ ಸಂಜನಾ ಮರೆಗೊಂಡ ಮತ್ತು ಪ್ರಿಯಾಂಕಾ ಚಿಚಖಂಡಿ ಮಾತನಾಡಿದರು. ಗರ್ಲ್ಸ್ ಐಕಾನ್‌ನ ಸಾವಕ್ಕಾ, ಪವಿತ್ರಾ, ರೂಪಾ, ಸರಿತಾ, ಲಕ್ಷ್ಮಿ, ಸಾವಿತ್ರಿ, ಗಾಯತ್ರಿ, ಪ್ರಿಯಾಂಕಾ, ಶೇಶಮ್ಮ, ರಾಧಿಕಾ, ಮಂಜುಳಾ, ಲಕ್ಷ್ಮೀ, ಐಶ್ವರ್ಯಾ, ಲಕ್ಷ್ಮೀ, ಹರ್ಷಿತಾ, ರಾಜೇಶ್ವರಿ ಎಲ್ಲ ಹೆಣ್ಣು ಮಕ್ಕಳು ನೃತ್ಯ, ನಾಟಕ ಮಾಡಿ ಜನರನ್ನು ಮನರಂಜಿಸಿದರು. ಆಹ್ವಾನಿತರಿಗೆ ಲೇಖನಿಗಳನ್ನು ನೀಡಿ ಸನ್ಮಾನಿಸಲಾಯಿತು.ಪುರಸಭೆ ಸದಸ್ಯ ಶೇಖರ ಅಂಗಡಿ, ಲಕ್ಷ್ಮಣ್ ಮರೆಗೊಂಡ, ಮಹಾಲಿಂಗ ಮರೆಗೊಂಡ, ಮಹೇಶ ಆರಿ, ಹನಮಂತ ನಾವಿ, ನಾಗಲಿಂಗ ಬಡಿಗೇರ, ರಾಜೇಂದ್ರ ನಾವಿ, ಈರಯ್ಯ ಮಠಪತಿ, ಪರಶುರಾಮ ಬಂಡಿ, ಮಹಾಂತೇಶ ದೇವರಮನಿ ಸೇರಿದಂತೆ ಗ್ರಾಮದ ಮಹಿಳೆಯರಿದ್ದರು. ಸಂಜನಾ ಮರೆಗೊಂಡ ನಿರೂಪಿಸಿ, ವಂದಿಸಿದಳು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 