ಬಾಬಾಸಾಹೇಬರು ಕಟ್ಟಿಕೊಟ್ಟಿರುವ ಭಾರತ ಉಳಿಸಿಕೊಳ್ಳೊಣ
ವಿಜಯಪುರ07 : ಅಪ್ಪಟ ದೇಶಪ್ರೇಮಿಗಳಾದ ಬಾಬಾಸಾಹೇಬರು ಈ ಭಾರತವನ್ನು ಸದೃಢವಾಗಿ ಕಟ್ಟಿಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಯುವಜನರು ಸಂಕಲ್ಪ ಮಾಡಬೇಕಾಗಿದೆ. ಬಾಬಾಸಾಹೇಬರು ಹಲವು ದಾಖಲೆಯ ಕೆಲಸಗಳನ್ನು ಮಾಡಿದ್ದಾರೆ ಅದರಲ್ಲಿ ಮುಖ್ಯವಾಗಿ ದೇಶದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಸ್ತ್ರೀ ಸ್ವಾತಂತ್ರ್ಯ ಸಮಾನತೆ ತಂದುಕೊಟ್ಟ ಮಹಾನ್ ಮಾನವತವಾದಿ ಡಾ. ಬಿ. ಆರ್.ಅಂಬೇಡ್ಕರ್‌ಅವರ ವಿಚಾರ ಇಂದಿನ ವಿದ್ಯಾರ್ಥಿಯುವಜನರಿಗೆಆದರ್ಶ ದೀಪವಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀನಾಥ್ ಪೂಜಾರ್ ಹೇಳಿದರು.ಡಾ. ಬಿ. ಆರ್.ಅಂಬೇಡ್ಕರ್‌ರವರ 68 ನೇ ಮಹಾ ಪರಿನಿರ್ವಾಣ ಪ್ರಯುಕ್ತ ನಗರದಲ್ಲಿದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್‌ಕ್ಯಾಂಡಲ್ ಮಾರ್ಚ ಉದ್ದೇಶಿಸಿ ಮಾತನಾಡಿದಅವರು, ಆಧುನಿಕ ಭಾರತದಲ್ಲಿ ಮಹಿಳೆಯರು ಪ್ರತಿಯೊಂದುಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದರೆಅದಕ್ಕೆ ಬಾಬಾಸಾಹೇಬ್‌ಅಂಬೇಡ್ಕರ್‌ಅವರ ಹೋರಾಟ ಮತ್ತುಅವರ ಬರೆದ ಸಂವಿಧಾನವೇ ಇದಕ್ಕೆ ಕಾರಣವಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ರೂಪದಲ್ಲಿ ನಮ್ಮೊಂದಿಗೆ ಇದ್ದರೆ, ಅವರ ಸಂವಿಧಾನ ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕು ಜೊತೆಗೆ ಸಂವಿಧಾನರಕ್ಷಣೆಗೆ ಶಪತ ಮಾಡಬೇಕೆಂದು ಹೇಳಿದರು.ನಮ್ಮದೇಶಕ್ಕೆ ಸಂವಿಧಾನಒದಗಿಸದಿದ್ದರೆ ಶೋಷಿತ ಸಮುದಾಯಗಳು ಆರ್ಥಿಕವಾಗಿ ಸಬಲ ರಾಗುತ್ತಿರಲಿಲ್ಲ. ಸಂವಿಧಾನದಿಂದ ಶೋಷಿತ ಸಮುದಾಯಗಳು ಎಲ್ಲಾರಂಗದಲ್ಲಿ ಅವಕಾಶಗಳು ಸಿಕ್ಕಿರುವುದು ಸಂವಿಧಾನದಿಂದ ಮಾತ್ರಎಂದು ಹೇಳಿದರು. ಸಂವಿಧಾನವು ನಮ್ಮದೇಶದ ಪವಿತ್ರಗ್ರಂಥವಾಗಿದೆ.ಅದನ್ನು ಇಂದಿನ ವಿದ್ಯಾರ್ಥಿ ಮತ್ತುಯುವಕರು ಅರ್ಥೈಸಿಕೊಂಡು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತುಅಗತ್ಯವೆಂದರು.ದೇಶದಲ್ಲಿ ಸಂವಿಧಾನ ವಿರೋಧಿ ಹೇಳಿಕೆಯನ್ನು ದಲಿತ ವಿದ್ಯಾರ್ಥಿ ಪರಿಷತ್ತುತೀವ್ರವಾಗಿ ಖಂಡಿಸುತ್ತದೆ. ಸಂವಿಧಾನ ವಿರೋಧಿ ಹೇಳಿಕೆ ನೀಡುವವರು ಭಾರತದೇಶದಲ್ಲಿಅವಕಾಶವಿಲ್ಲಎಂದರು.
ಈ ಸಂದರ್ಭದಲ್ಲಿ ಪರಿಷತ್‌ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ನ್ಯಾಯವಾದಿಗಳಾದ ವಿದ್ಯಾವತಿ ಅಂಕಲಿಗಿ, ಫಾದರ್‌ಟಿಯೋಲ್ ಮಾಚದೊ, ಸಂತೋಷ ಪೂಜಾರಿ, ರೈತ ಸಂಘಟನೆಜಿಲ್ಲಾ ಮುಖಂಡ ಸಂಗಮೇಶ ಸಗರ, ಜಿಲ್ಲಾ ಮುಖಂಡರಾದಅಕ್ಷಯಅಜಮನಿ, ಮಾದೇಶಛಲವಾದಿ ಇತರರು ಉಪಸ್ಥಿತರಿದ್ದರು.ನಗರದ ಶಿವಾಜಿ ವೃತ್ತದಿಂದ ಆರಂಭಗೊಂಡ ಕ್ಯಾಂಡಲ್ ಈ ಬೃಹತ್ ಮಾರ್ಚ ಅಂಬೇಡ್ಕರ್ ವೃತ್ತದ ವರೆಗೂ ಸಾಗಿತ್ತು. ಕ್ಯಾಂಡಲ್ ಮಾರ್ಚನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಯುವ ಜನರುಅಲ್ಲದೇ ಬಾಬಾಸಾಹೇಬ್‌ಅಂಬೇಡ್ಕರ್‌ಅವರ ಅನುಯಾಯಿಗಳು ಭಾಗವಹಿಸಿ, ಜೈ ಭೀಮ್‌ಘೋಷಣೆಕೂಗುತ್ತಾಉತ್ಸಾಹದಿಂದ ಪಾಲ್ಗೊಂಡಿದ್ದರು.