ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಿಸೋಣ: ನರಸನಗೌಡ್ರ

ಲೋಕದರ್ಶನವರದಿ

 ಮುಧೋಳ:  ವಿಷ್ಣು ಸಾಂಸ್ಕೃತಿಕ ಕ್ರೀಡಾ ಹಾಗೂ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ (ರಿ)ಮಾಲಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಇವರ ಸಂಯಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ಸುಗಮ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾಂತೇಶ ನರಸನಗೌಡ್ರ ಕ್ಷೇತ್ರ ಸಮನ್ವಯಾಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಧೋಳ ಇವರು ಮಾತನಾಡಿ ಈ ಕ್ಷೇತ್ರದ ಕಲಾವಿದರು ತಮ್ಮ ತಮ್ಮ ಕಲೆಗಳನ್ನು ಪ್ರೇಕ್ಷಕರಿಗೆ ಕೇಳುವಂತ ಗ್ರಾಮೀಣ ಮಟ್ಟದಲ್ಲಿ ಹುಟ್ಟಿ ಬೆಳೆದಿರುವಂತಹ ಹಾಡುಗಳನ್ನು ಕೇಳಿ ನನಗೆ ತುಂಬಾ ಸಂತೋಷ ತಂದಿದೆ, ನೀವು ಹಾಡಿದಂತಹ ಹಾಡುಗಳು ಸುಗಮ ಸಂಗೀತ,ತತ್ವ ಪದ, ಭಜನಾ ಪದ, ಚೌಡಕಿ ಪದ,ಹಂತಿ ಪದ ಕೇಳಿ ಹಾಗೂ ಇನ್ನೂ ಅನೇಕ ಕಲಾವಿದರು ಭಾಗಿಯಾಗಿದ್ದಕ್ಕೆ ಕಲೆಗೆ ಬೆಲೆ ಕಟ್ಟೋಕಾಗಲ್ಲ ಅಂತ ನರಸನಗೌಡ್ರ ಹೇಳಿದರು.

     ಹಾಗೂ ಅಧ್ಯಕ್ಷತೆಯನ್ನು ವಹಿಸಿದಂತ ಶೇಖರ ಎಸ್ ಘಾಟಗೆ ಕ್ರೆಂ ಪಿ.ಎಸ್.ಆಯ್ ಮಾತನಾಡಿ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಈ ಸಂಸ್ಥೆಯವರು ಮಾಡಿದ್ದಾರೆ. ಪ್ರತಿಯೊಬ್ಬ ಕಲಾವಿದರು ತಮ್ಮ ತಮ್ಮ ವೇಷ ಭೂಷಣಗಳನ್ನು ಧರಿಸಿ ತಮ್ಮ ಕಲೆಯನ್ನು ಪ್ರತಿ ಮನೆ ಮನೆಯೊಳಗೆ ಕಲಾವಿದರು ಇರಬೇಕು.ನಮಗೆ ಎಷ್ಟೋ ನೋವು ಕಷ್ಟ ಇದ್ದರೂ ಕೆಲವೊಂದು ಮನರಂಜನೆಯ ಹಾಡುಗಳನ್ನು ಕೇಳಿದರೆ ನಮಗೆ ನೆಮ್ಮದಿ ಸಿಗುತ್ತದೆ ಎಂದು ಮಾತನಾಡಿದರು, ಮತ್ತು ಪ್ರಾಸ್ತಾವಿಕ ನುಡಿಗಳನ್ನು ಡಾ|| ಸಿದ್ದಣ್ಣ ಬಾಡಗಿ ತಾಲೂಕಾ ಅಧ್ಯಕ್ಷರು ವಚನ ಸಾಹಿತ್ಯ ಪರಿಷತ್ ಮುಧೋಳ ಇವರು ಮಾತನಾಡಿ ಕಲಾವಿದರಿಗೆ ಸರಕಾರ ವಯಸ್ಸಿನ ಮಿತಿ ನಲವತ್ತು ನಲವತೈದು ವರ್ಷಗಳ ಇವರಿಗೆ ಮಾಶಾಸನ ಕೊಡುವುದು ಸರಕಾರ ಮಾಡಬೇಕು, ಯಾಕೆಂದರೆ ಈಗ ಅರವತ್ತು ಅರವತ್ತೈದು ವರ್ಷ ಆದರೂ ಕಲಾವಿದರು ಅಲ್ಲಿ ವರೆಗೆ ಬದುಕುವುದಕ್ಕೆ ಆಗುವುದಿಲ್ಲ, ಸರಕಾರ ತಕ್ಷಣ ವಯಸ್ಸಿನ ಮಿತಿ ಕಡಿಮೆ ಮಾಡಿ ಅವರಿಗೆ ಮಾಶಾಸನ ದೊರುಕುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.  ಮುಖ್ಯ ಅತಿಥಿಗಳಾಗಿ ಸಂಗಮೇಶ ನಿಲಗುಂದ , ಬಸವರಾಜ ಮಹಾಲಿಂಗೇಶ್ವರಮಠ,ಗುರುಪಾದ.ತಿ.ಕುಳಲಿ ನಗರಸಭೆ ಸದಸ್ಯರು, ಈಶ್ವರ ಯಂಕಾಂಚಿ, ಸುರೇಶ ಗು ಭಸ್ಮೆ ಪತ್ರಕರ್ತರು, ಕ್ರೀಷ್ಣಾ ಭಜಂತ್ರಿ ಸಮಾಜ ಸೇವಕರು ಹಾಗೂ ಕಲಾವಿದರು, ಸದಾಶಿವ ಕಣಬೂರ,ಅಶೋಕ ಮೈತ್ರಿ ಇನ್ನು ಅನೇಕ ಗಣ್ಯ ಮಾಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಭಾಗವಹಿಸಿದಂತ ವೇದಮೂತರ್ಿ ಹೊಳಬಸಯ್ಯ ಹೀರೆಮಠ ವಹಿಸಿದರು, ಸ್ವಾಗತ ಹಾಗೂ ಮಾಲಾರ್ಪಣೆ ರೇವಣಸಿದ್ದಯ್ಯ ಮರೆಗುದ್ದಿ ನೆರವೇರಿಸಿದರು. ವಂದನಾರ್ಪಣೆ ಈ ಸಂಸ್ಥೆಯ ಅದ್ಯಕ್ಷರಾದ ನಾಮದೇವ ಕೋಪಡರ್ೆ ಮಾಡಿದರು.  ಹಾಗೂ ಈ ಸಂಸ್ಥೆಯ ಕಲಾವಿದರು ಹಾಗು ಸದಸ್ಯರು ಉಪಸ್ಥಿತರಿದ್ದರು.