ಸಕಾಲದಲ್ಲಿ ಬೀಜ ಗೊಬ್ಬರ ಕೊರತೆಯಾಗದಿರಲಿ : ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ಅಧಿಕಾರಿಗಳಿಗೆ ಶಾಸಕ ಮಹಾಂತೇಶ ದೊಡಗೌಡರ ಸೂಚನೆ

. ಚನ್ನಮ್ಮನ ಕಿತ್ತೂರು 01: ಕೇಂದ್ರ ಸಕರ್ಾರ ಹಾಗೂ ರಾಜ್ಯ ಸಕರ್ಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಅನೇಕ ಸಲಕರಣೆಗಳ ಮೇಲೆ ಸಬ್ಸಿಡಿ ನೀಡುವ ಮೂಲಕ ಸಹಾಯಕವಾಗಿವೆ. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ಸ್ಥಳಿಯ ವೀರಭದ್ರೆಶ್ವರ ಕಲ್ಯಾಣ ಮಂಟಪದಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕೃಷಿ ಅಭಿಯಾನ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ಸರಿಯಾದ ವೇಳೆಗೆ ಮಳೆಯಾಗಿಲ್ಲ. ಪರಿಣಾಮ ರೈತರು ತತ್ತರಿಸಿದ್ದಾರೆ. ಇನ್ನೂ ಮುಂದೆ ಮಳೆ ಆರಂಭವಾಗುತ್ತಿದ್ದಂತೆ ರೈತಾಪಿ ವರ್ಗದ ಚಟುವಟಿಕೆಗಳು ಆರಂಭಗೊಳುತ್ತವೆ ಇದಕ್ಕಾಗಿ ಕೃಷಿ ಅಧಿಕಾರಿಗಳು ಗೊಬ್ಬರ ಹಾಗೂ ಬೀಜಗಳನ್ನು ಶೇಖರಿಸಿಟ್ಟು ರೈತರಿಗೆ ಸರಿಯಾದ ವೇಳೆಗೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಕೆಲವೇ ಕೆಲವು ಬೆಳೆಗಳಿಗೆ ಮಾತ್ರ ಸಕರ್ಾರಗಳಿಂದ ಬೆಂಬಲ ಬೆಲೆ ದೊರೆಯುತ್ತಿದೆ ಆದಕಾರಣ ಸಕರ್ಾರಗಳು ಸಹ ಇನ್ನಷ್ಟೂ ಬೆಳೆಗಳಿಗೂ ವ್ಶೆಜ್ಞಾನಿಕ ಬೆಲೆ ಘೋಷಿಸುವ ಅವಶ್ಯಕತೆ ಇದೆ, ಒಕ್ಕಲುತನ ಮಾಡುವವರಿಗೂ ವಾಸ್ತವ ಸ್ಥಿತಿಯು ಪೂರಕವಾಗಿಲ್ಲ, ಅವರ ಕಷ್ಟದ ಜೀವನಕ್ಕೆ ಸಕರ್ಾರದ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಕಿವಿ ಮಾತನ್ನು ಹೇಳಿದ ಅವರು, ಹೊಲ ಗದ್ದೆಗಳನ್ನು ಸಹ ಯುವ ಪೀಳಿಗೆಯು ಕಾಖರ್ಾನೆ ಎಂದು ತಿಳಿದುಕೊಂಡಲ್ಲಿ ಮಾತ್ರ ಅಲ್ಲಿಂದ ಉತ್ಪನ್ನ ತೆಗೆಯಲು ಸಾಧ್ಯವಾಗುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ರೈತಾಪಿ ವರ್ಗದ ಜನರಿಗೆ ಅನುಕೂಲ ಸೃಷ್ಠಿಸುವ ನಿಟ್ಟಿನಲ್ಲಿ ಗೌರವ ಸನ್ಮಾನ ಎಂಬ ಯೋಜನೆ ಜಾರಿಗೊಳಿಸಿ ಪ್ರತಿ ರೈತನ ಖಾತೆಗೂ ಹಣ ಜಮೆ ಮಾಡುವ ಮೂಲಕ ರೈತರ ಹಿತಾಸಕ್ತಿ ಕಾಪಾಡುವ ಕಾರ್ಯ ಕೈಗೊಂಡಿದ್ದಾರೆ. ಕೃಷಿ ಅಧಿಕಾರಿಗಳು ಸಹ ಬೀಜ ಹಾಗೂ ಗೊಬ್ಬರಗಳ ಕುರಿತು ಪೂರ್ವ ತಯಾರಿಯಲ್ಲಿರಬೇಕು ಮತ್ತು ಪ್ರತಿ ಗ್ರಾಮ ಪಂಚಾಯಿತಿಯ ನೋಟಿಸ್ ಬೋರ್ಡಗಳಿಗೆ ರೈತರಿಗೆ ಅನುಕೂಲವಾಗುವ ಯೋಜನೆಗಳ ಸಮಗ್ರ ಮಾಹಿತಿಯನ್ನು ಅಂಟಿಸಲು ಸೂಚಿಸಿದರು. 

ತಾಪಂ ಸದಸ್ಯ ಎಂ.ಎಂ. ಹಿತ್ತಲಮನಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಸಕರ್ಾರಗಳು ಯೋಜನೆ ಜಾರಿಗೊಳಿಸಿ ಕೈಕಟ್ಟಿ ಕುಳಿತಿವೆ, ಕೇಂದ್ರ ಸಕರ್ಾರದ ಮಹತ್ವದ ಯೋಜನೆಯಾದ ಫಸಲ ಭಿಮಾ ಯೋಜನೆಯು ಇನ್ನೂವರೆಗೂ ಸರಿಯಾಗಿ ಎಲ್ಲ ರೈತರಿಗೆ ಮುಟ್ಟಿಲ್ಲ ಎಂದರು. 

ಜಿಪಂ ಸದಸ್ಯರಾದ ರಾಧಾ ಕಾದ್ರೋಳ್ಳಿ, ಬಸವ್ವ ಕೋಲಕಾರ, ತಾಪಂ ಸದಸ್ಯರಾದ ಹೇಮಾವತಿ ಬೇಕವಾಡಕರ, ಎಸ್. ಜೆ. ಜಮಾದಾರ, ಧಾರವಾಡ ಕೃಷಿ ವಿವಿಯ ವಿಜ್ಞಾನಿಗಳಾದ ಎಸ್.ಆರ್.ಸಲಕಿನಕೊಪ್ಪ, ಸೋಮನಗೌಡರ, ಸಹಾಯಕ ಕೃಷಿ ನಿದರ್ೇಶಕ ಎಂ.ಬಿ.ಹೊಸಮನಿ, ರೈತ ಸಂಪರ್ಕ ಕೆಂದ್ರ ಅಧಿಕಾರಿ ಪ್ರಭಾಕರ ಇಟ್ನಾಳ ಸೇರಿದಂತೆ ಇತರರು ಹಾಜರಿದ್ದರು.