ಮಹಾಲಿಂಗಪುರವನ್ನು ಟ್ರಾಫೀಕ ಸಮಸ್ಯೆಯಿಂದ ಮುಕ್ತ ಮಾಡೋಣ- ಸ್ವೇತಾ ಬೀಡಿಕರ
Let's make Mahalingapuram free from traffic problems - Sweta Bidikar
ಮಹಾಲಿಂಗಪುರ 16: ಮಹಾಲಿಂಗಪುರದ ರಸ್ತೆ ಮತ್ತು ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫೀಕ ಸಮಸ್ಯೆಗಳ ಕುರಿತು ನಮಗೆ ಬಂದ ಮನಿವಿಯನ್ನು ಅಧರಿಸಿ ಪೊಲೀಸ, ಪಿಡಬ್ಲುಡಿ, ತಹಶಿಲ್ದಾರ, ಮತ್ತು ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಪಟ್ಟಣ ಮತ್ತು ಪಟ್ಟಣದ ಸುತ್ತಮುತ್ತಲು ಸಹ ಯಾವುದೇರೀತಿಯ ಟ್ರಾಪೀಕ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ಕೈಗೋಳ್ಳಲಾಗುವುದು ಎಂದು ಜಮಖಂಡಿ ಅಸಿಸ್ಟಂಟ ಕಮೀಷನರ ಸ್ವೇತಾ ಬೀಡಿಕರ ಹೇಳಿದರು.
ಪುರಸಭೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪಿ.ಎಸ್.ಐ ಅವರು ಹೇಳಿದಂತೆ ಪಟ್ಟಣದ ಕೆಲವು ಭಾಗಗಳಲ್ಲಿ ಸಿ.ಸಿ ಕ್ಯಾಮಾರ ಅಳವಡಿಕೆ ಮಾಡಿಸಲು ತಿಳಿಸಲಾಗಿದೆ. ಅಲ್ಲದೆ ಇಗಾಗಲೇ ಟ್ರಾಫೀಕ ಕಂಟ್ರೋಲ ಮಾಡಲು ಅವರು ಸಹ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕ್ಯಾಮಾರಗಳು ಇದ್ದರೆ ಅಪಘಾತ ಮತ್ತು ಕಳ್ಳತನ ಸಂಭವಿಸಿದಾಗ ಅವರ ಪತ್ತೆಗಾಗಿ ಹೆಚ್ಚು ಅನುಕೂಲವಾಗುತ್ತದೆ. ಮತ್ತು ಬಸವೇಶ್ವರ ವೃತ್ತದಿಂದ ಅಂಬೇಡ್ಕರ ವೃತ್ತ, ಗಾಂಧಿವೃತ್ತದಿಂದ ಚನ್ನಮ್ಮ ವೃತ್ತದ ವರೆಗೆ ರಸ್ತೆ ಬದಿಗಳಲ್ಲಿ ಹೆಚ್ಚು ವಾಹನಗಳ ಪಾರ್ಕಿಂಗ ಆಗುವುದರಿಂದ ವಾಹನ ತೊಂದರೆಯಾಗಿದೆ ಎಂದು ನಮಗೆ ಮನವಿ ಬಂದಿದೆ. ಅದರಿಂದ ವಾಹನಗಳನ್ನು, ಅಟೋ ರಿಕ್ಷಾಗಳನ್ನು ನಿಲ್ಲಿಸಲು ಬಸ್ ನಿಲ್ದಾಣದ ಹತ್ತಿರ ಇರುವ ಜಾಗೆಯಲ್ಲಿ ನಿಲ್ಲಿಸಲು ಅನುಕೂಲ ಮಾಡಿಕೊಡಲು ತಿಳಿಸಲಾಗಿದೆ. ಇದು ಪಟ್ಟಣದ ಸಾರ್ವಜನಿಕರ ಅನುಕೂಲಕ್ಕಾಗಿ ಮಾಡುತ್ತಿರುವುದು ಕಾರಣ ಸಾರ್ವಜನಿಕರು ಸಹ ಈ ಕ್ರಮಕ್ಕೆ ಸಹಕರಿಸಬೇಕು.
ಟೂ ವ್ಹಿಲರಗಳನ್ನು ರಸ್ತೆ ಬದಿಯಲ್ಲಿ ಹಚ್ಚುವುದರಿಂದ ಟ್ರಾಫೀಕ ಸಮಸ್ಯೆ ಹೆಚ್ಚುತ್ತಿದೆ ಕಾರಣ ಗಾಡಿ ಮಾಲೀಕರು ಖಾಲಿ ಜಾಗೆಗಳಲ್ಲಿ ಟ್ರಾಫೀಕ ತೊಂದರೆಯಾಗದ ರೀತಿಯಲ್ಲಿ ಪಾರ್ಕ ಮಾಡಬೇಕು. ಕೆ.ಯು.ಎಸ್.ಡಬ್ಲು ಎಂ ದವರಿಗಂದ ನೀರು ಸರಬರಾಜು ಕಾಮಗಾರಿ 34 ಕಿ.ಮಿ. ಇದೆ. ಇದರು ಕೂಡಾ ಸಿಕ್ಕ ಸಿಕ್ಕಲ್ಲಿ ರಸ್ತೆ ಅಗೆದು ಹಾಗೆ ಬಿಡದೆ ಅವುಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಾಗಾರಿ ನಡೆಸಬೇಕು ಅಷ್ಟೆ ಅಲ್ಲದೆ ಕೇವಲ 3-4 ತಿಂಗಳುಗಳಲ್ಲಿ ಕೆಲಸವನ್ನು ಪೂರ್ತಿ ಮುಗಿಸುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಸಾರ್ವಜನಿಕರು ಸಹಕರಿಸಬೇಕು. ಬೇಸಿಗೆಯಲ್ಲಿ ಪಟ್ಟಣದಲ್ಲಾಗುವ ನೀರಿನ ತೊಂದರೆಯೂ ಈ ಬಾರಿ ಬರುವುದಿಲ್ಲ ಆ ರೀತಿಯಾಗಿ ಕಾಮಗಾರಿ ಬೇಗ ಮುಗಿಸಲು ತಿಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಹಶಿಲ್ದಾರ ಗೀರೀಶ ಸ್ವಾಧಿ, ಮುಖ್ಯಾಧಿಕಾರಿ ನಾಮದೇವ ಲಮಾಣಿ. ಪಿ.ಎಸ್.ಐ ಕಿರಣ ಸತ್ತಿಗೇರಿ, ಚನಬಸವ ಮಾಚನೂರ, ಕಿರಣ ಪಾಗಿ ಸೇರಿದಂತೆ ಅಧಿಕಾರಿಗಳು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 