ಕನ್ನಡಾಂಬೆಯ ತೇರನ್ನು ಒಗ್ಗಟ್ಟಿನಿಂದ ಎಳಿಯೋಣ: ಡಾ. ಪ್ರಭುಗೌಡ
ದೇವರಹಿಪ್ಪರಗಿ 10: ನೂತನ ತಾಲೂಕು ಕೇಂದ್ರವಾದ ಬಳಿಕ ಮೊದಲನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಖುಷಿ ತರುವಂತಹದ್ದಾಗಿದೆ. ಕನ್ನಡಾಂಭೆಯ ತೇರನ್ನು ಎಲ್ಲರೂ ಒಗ್ಗಟ್ಟಿನಿಂದ ಎಳೆಯಬೇಕಾಗಿದೆ ಎಂದು ಡಾ. ಪ್ರಭು ಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.ಪಟ್ಟಣದಲ್ಲಿ ಡಿ.27ರಂದು ಜರುಗಲಿರುವ ದೇವರಹಿಪ್ಪರಗಿ ನೂತನ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಪಟ್ಟಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗಣ್ಯರು ಜೋತೆ ಭೇಟಿ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಹೊತ್ತುಕೊಂಡು ಮೆರೆಸುವಂತಹ ಸಂದರ್ಭ ಬಂದಿದೆ. ನಾಡಿನ ನೆಲ, ಜಲ, ಭಾಷೆಯನ್ನು ಉಳಿಸಿ, ಬೆಳೆಸುವುದರೊಂದಿಗೆ ಅದನ್ನು ರಸುವಂತಹ ಜವಾಬ್ದಾರಿಯೂ ಕೂಡಾ ಪ್ರತಿಯೊಬ್ಬರ ಮೇಲಿದೆ ಎಂದರು.ತಾಲೂಕಿನ ಎಲ್ಲ ಇಲಾಖೆಗಳು ಈ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯಿಂದ ಸಹಕರಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹಾಸಿಂಪೀರ ವಾಲಿಕಾರ ಹಾಗೂ ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಅವರೂ ಕೂಡಾ ಕನ್ನಡ ಭಾಷಾಭಿಮಾನದ ಪ್ರತಿಕವಾಗಿದ್ದಾರೆಂದರೆ ತಪ್ಪಾಗಲಾರದು. ಪಟ್ಟಣದಲ್ಲಿ ಕನ್ನಡದ ತಾಯಿ ಭುವನೇಶ್ವರಿ ದೇವಿಯ ತೇರನ್ನು ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಳೆಯಲು ಸಜ್ಜಾಗಿರುವುದು ಸಂತಸ ತಂದಿದೆ ಎಂದರು.ಸಂದರ್ಭದಲ್ಲಿ ವಿವಿಧ ಇಲಾಖೆಗಳು, ವೈದ್ಯರು, ಮೆಡಿಕಲ್ ಅಂಗಡಿಗಳು ಹಾಗೂ ಪ್ರಮುಖರನ್ನು ಭೇಟಿ ಮಾಡಿ ಸಹಾಯ ಸಹಕಾರ ನೀಡಲು ಉತ್ಸುಕತೆಯಿಂದ ಒಪ್ಪಿದರು.ಇದೇ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ರಿಯಾಜ್ ಯಲಗಾರ, ಶಿಕ್ಷಕರ ಸಂಘದ ಅಧ್ಯಕ್ಷರಾದ ಎ.ಎಚ್. ವಾಲೀಕಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಸಿ.ಕೆ.ಕುದರಿ, ಮುಖಂಡರುಗಳಾದ ಮಂಜುನಾಥ ಮಠ,ಹೈದರಸಾಬ ಮುಲ್ಲಾ,ಅರುಣ ಕೋರವಾರ,ಎಮ್.ಎಚ್. ಪಟೇಲ,ಪಿ.ಸಿ.ತಳಕೇರಿ,ಕಾಸು ಕೋರಿ,ಎಸ್.ಜಿ. ತಾವರಖೇಡ,ಪಿ.ಎಸ್. ಮಿಂಚನಾಳ,ಮುರ್ತುಜಾ ತಾಂಬೋಳಿ,ಸುಭಾಸ್ ನಾಟೀಕಾರ,ಶ್ರೀಕಾಂತ ಭಜಂತ್ರಿ, ರವಿ ಕೊಟೀನ,ಅಣ್ಣು ಭಜಂತ್ರಿ, ಭೀಮು ನಾಗರಾಳ,ಕೆ.ಎಮ್. ನಂದಿ, ರಾಘು ಗುಡಿಮನಿ ಸೇರಿದಂತೆ ಸಾಹಿತ್ಯ ಬಳಗ ಇದ್ದರು.