ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಜೀವನ ಸಾಗಿಸಲಿ: ಸಂಸದ ಜೋಶಿ

ಲೋಕದರ್ಶನ ವರದಿ

ಹುಬ್ಬಳ್ಳಿ 07: ವಿಶೇಷ ಚೇತನರಿಗೆ ಬೇಕಿರುವುದು ಅನುಕಂಪವಲ್ಲ, ಬದಲಾಗಿ ನೆರವು ಈ ದಿಶೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರ ಇಂತಹ ವಿಶೇಷ ಚೇತನರು ಎಲ್ಲರಂತೆ ಸಂತೋಷದಿಂದ ಜೀವನ ಸಾಗಿಸಲು ಅನುವಾಗುವಂತೆ ಉತ್ತಮ ಯೋಜನೆ ಜಾರಿಗೆ ತಂದಿದ್ದು, ಸರ್ವರ ವಿಕಾಸಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ನನ್ನ ಮತ ಕ್ಷೇತ್ರದಲ್ಲಿ 2015 ಮತ್ತು 2018 ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವರಾದ ಶ್ರೀ ತಾವರ ಚಂದ ಗೆಲ್ಹೋಟ್ ಇವರ ಸಮ್ಮುಖದಲ್ಲಿ ಕೇಂದ್ರ ಸರಕಾರ ಹಾಗೂ ನನ್ನ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಡಿ ಒಟ್ಟು ರೂ. 1.08 ಕೋಟಿ ವೆಚ್ಚದಲ್ಲಿ ಸುಮಾರು 1684 ವಿವಿಧ ರೀತಿಯ ಅಂಗ ವೈಕಲ್ಯ ಉಳ್ಳ ದಿವ್ಯಾಂಗರಿಗೆ ವಿವಿಧ ರೀತಿಯ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ಸಂಸದ ಪ್ರಲ್ಹಾದ ಜೋಶಿ ತಿಳಿಸಿದರು.

          ಸಾಂಸ್ಕೃತಿಕ ಭವನದಲ್ಲಿ ಕೇಂದ್ರ ಸರಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

         ವಿಶೇಷ ಚೇತನರು ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಇತರರೊಂದಿಗೆ ಶಕ್ತಿಯುತವಾಗಿ ಬದುಕಬೇಕು. ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಸರಕಾರದ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಸಂಸದರು ಹೇಳಿದರು.

     ಈಗ ಮತ್ತೊಮ್ಮೆ ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರಲ್ಲಿ ನಾನು ವಿನಂತಿಸಿದರ ಮೇರೆಗೆ ನನ್ನ ಧಾರವಾಡ ಲೋಕಸಬಾ ಕ್ಷೇತ್ರದಲ್ಲಿ ಮತ್ತೊಮ್ಮೆ ಬೆಂಗಳೂರಿನ ಅಲಿಮ್ಕೋ ಕಂಪನಿಯೊಂದಿಗೆ ಕಳೆದ ಸೆಪ್ಟೆಂಬರ್ನಲ್ಲಿ ನನ್ನ ಮತ ಕ್ಷೇತ್ರದಲ್ಲಿ ಅಂಗವೈಕಲ್ಯರ ಸವರ್ೆ ಕಾರ್ಯ ನಡೆಸಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾಡಳಿತ ಹಾಗೂ ಅಲಿಂಕೊ ಸಂಸ್ಥೆ ಬೆಂಗಳೂರು ಇವರ ಸಹ ಭಾಗಿತ್ವದಲ್ಲಿ ಇಂದು ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ವಿವಿಧ ಅಂಗವೈಕಲ್ಯತೆ ಹೊಂದಿದ ದಿವ್ಯಾಂಗರಿಗೆ ರೂ. 1ಕೋಟಿ ವೆಚ್ಚದಲ್ಲಿ 990 ಫಲಾನುಭವಿಗಳಿಗೆ ಅಂಗವಿಕಲ ಸಾಧನ ಸಲಕರಣೆಗಳನ್ನು ವಿತರಿಸಿದ್ದೇವೆ ಎಂದು ಸಂಸದರು ತಿಳಿಸಿದರು.

        ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ 162 ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ, 117 ಗಾಲಿ ಕುಚರ್ಿ, 600 ಕ್ರಷರ್ಸ್, 224 ಶ್ರವಣ ಸಾಧನ, 179 ಬುದ್ದಿಮಾಂದ್ಯ ಮಕ್ಕಳಿಗೆ ಎಂ.ಎಸ್.ಐ.ಡಿ ಕಿಟ್, ಯಂತ್ರ ಚಾಲಿತ ಗಾಲಿ ಕುಚರ್ಿ, 17 ಸ್ಮಾಟರ್್ ಕೇನ್ ಸ್ಟಿಕ್, ಟ್ಯಾಬ್, ಬ್ರೈಲ್ ಕಿಟ್ ಮುಂತಾದ ಸಲಕರಣೆಗಳನ್ನು ವಿತರಿಸಲಾಯಿತು.

        ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಶಾಸಕರುಗಳಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್ ಇಲಾಖಾ ಅಧಿಕರಿಗಳು ಹಾಗೂ ಅಲಿಂಕೊ ಸಂಸ್ಥೆಯ ಅನುಪಮ್ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು