ಹುಬ್ಬಳ್ಳಿ 07: ಹುಬ್ಬಳ್ಳಿ ವಿಭಾಗೀಯ ರೈಲ್ವೆ ವಲಯದಲ್ಲಿ ಇಂದು ಮಹಾಪರಿನಿರ್ವಾಣದ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಗೌರವ ಸಮರೆ್ಣ ನಡೆಯಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ ಅವರು ಡಾ.ಬಿ.ಆರ್.ಅಂಬೇಡ್ಕರ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅಂಬೇಡ್ಕರ ಅವರು ದೇಶ ಕಂಡ ಮಹಾನ ನಾಯಕರಾಗಿದ್ದು, ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಭಾರತದ ಸಂವಿಧಾನವು ವಿಶ್ವದಲ್ಲಿಯೇ ಅತಿ ಶ್ರೇಷ್ಠವಾಗಿದೆ. ಇದರ ರಚನೆಯಲ್ಲಿ ಅಂಬೇಡ್ಕರ ಅವರ ಶ್ರಮ ಅಧಿಕವಾಗಿದೆ ಎಂದು ಹೇಳಿದರು. ಸಿಬ್ಬಂದಿಗಳು ಪ್ರಮಾಣಿಕ ಸೇವೆ ಸಲ್ಲಿಸಿ, ದೇಶದ ಎಲ್ಲಾ ಮಹಾತ್ಮರ, ಸಂತರ ಹಾಗೂ ಹೋರಾಟಗಾರರ ಸಂದೇಶಗಳನ್ನು ಸದಾ ಮನನ ಮಾಡಿಕೊಂಡು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷ ಕುಮಾರ ವರ್ಮಾ ಅವರು ಅಂಬೇಡ್ಕರ ಅವರು ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿದರು. ಈ ಸಂದರ್ಭದಲ್ಲಿ ವಿಭಾಗೀಯ ರೈಲ್ವೆ ಮುಖ್ಯ ಕಾರ್ಮಿಕ ಅಧಿಕಾರಿ ಕೆ.ಆಸೀಫ್ ಹಫೀಜ್ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.