ಲೋಕದರ್ಶನವರದಿ
ಧಾರವಾಡ ೦೬: ಪರಿಸರ ರಕ್ಷಣೆಯಲ್ಲಿ ಸಕ್ರೀಯವಾಗಿ ಭಾಹವಹಿಸಿ, ಪರಿಸರ ನಾಶ ಮಾಡುವವರ ವಿರುದ್ಧ ಹೋರಾಟವಾಗಲಿ. ಅಲ್ಲದೇ ಮುಂಬರುವ ಪೀಳಿಗೆಯಿಂದ ಶಾಪ ಪಡೆಯುವುದು ಬೇಡವೆಂದು ಪರಿಸರವಾದಿ ಹರ್ಷವರ್ಧನ ಶೀಲವಂತ ಹೇಳಿದರು ಎಂದರು.
ಧಾರವಾಡ ಶ್ರೀನಗರದಲ್ಲಿರುವ ಪರಿಸರ ಭವನದಲ್ಲಿ ಧಾರವಾಡ ಮತ್ತು ಹುಬ್ಬಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ಸ್ ಲೋಕಲ್ ಸೆಂಟರ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಧಾರವಾಡ ಹೊಸಯಲ್ಲಾಪೂರದ ರುದ್ರಭೂಮಿಯಲ್ಲಿಯ ವಾಯುಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಕಳಕಳಿಯಿಂದ ಹೇಳಿದರು. ಅಧಿಕಾರಿಗಳಲ್ಲಿ ಪರಿಸರದ ರಕ್ಷಣೆ ಬಗ್ಗೆ ನಿರ್ಲಕ್ಷ ಕಂಡು ಬರುತ್ತಿದ್ದು, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಸರ ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ತ್ಯಾಜ್ಯ ಮುಕ್ತ ನಗರವನ್ನಾಗಿ ಮಾಡಲು ಮುಂದಾಗಬೇಕು. ಕೇವಲ ಸರಕಾರಕ್ಕೆ ಬೊಟ್ಟು ಮಾಡಿ ತೋರಿಸದೇ ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ ಪರಿಸರ ರಕ್ಷಿಸೋಣವೆಂದರು.
ಸಿವ್ಹಿಲ್ ಇಂಜಿನೀಯರ್ಸ ಸಂಘದ ಅಧ್ಯಕ್ಷರಾದ ವಿಜಯಕುಮಾರ ಹಳ್ಳಿಕೇರಿ ಮಾತನಾಡಿ, ಕಡ್ಡಾಯವಾಗಿ ಎರಡು ಸಸಿಗಳನ್ನು ಮನೆಯ ಮಾಲಿಕರು ಹಚ್ಚಿದ ನಂತರ ಕಟ್ಟಡದ ಮುಕ್ತಾಯ ಪ್ರಮಾಣ ಪತ್ರವನ್ನು ಸಂಬಂಧಪಟ್ಟವರು ನೀಡಬೇಕು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಧಾರವಾಡವನ್ನು ನಾವು ಮೊದಲಿದ್ದ ಧಾರವಾಡವನ್ನಾಗಿ ಮಾಡಲು ಸಾರ್ವಜನಿಕರು ಸ್ವಇಚ್ಚೆಯಿಂದ ತಮ್ಮತಮ್ಮ ಮನೆಯ ಮುಂದೆ ಹಾಗೂ ಅಂಗಳದಲ್ಲಿ ಸಸಿಗಳನ್ನು ನೆಟ್ಟು ಮುಂದಾಗಬೇಕು. ಧಾರವಾಡದ ಕೆರೆಗಳು, ಬಾವಿಗಳು ಸಂಪೂರ್ಣ ನಾಶವಾಗಿದ್ದು, ಜಲದ ಮಟ್ಟ 1000 ಅಡಿ ಕೆಳಗೆ ಹೋಗಿರುವುದು ಬಹಳ ಬೇಸರದ ಸಂಗತಿ ಒತ್ತಿ ಹೇಳಿದರು.
ವಿಜಯೇಂದ್ರ ಪಾಟೀಲ ಮಾತನಾಡಿ, ತಮ್ಮ ಸಂಘದ ವಿವಿಧ ಚಟುವಟಿಕೆಗಳನ್ನು ವಿವರಿಸಿದರು. ಅತಿಥಿಗಳಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೀಡಲಾಯಿತು. ಪರಿಸರ ಭವನದ ಪಕ್ಕದ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಅರುಣ ಶೀಲವಂತರ, ಅಶೋಕ ಕೌಜಗೇರಿ, ಜಿ.ಸಿ. ಕೆಂಡದಮಠ, ಎಸ್.ಸಿ. ಮಾಳಗಿ, ಸುಜಾತಾ ಬಡವಣ್ಣವರ, ಉಮಾ ಪುರಾಣಿಕಮಠ, ಕಸ್ತೂರಿ ರಾಯನಗೌಡರ, ಗೀತಾ ಕುಂಬಿ, ಶ್ರೀಮತಿ ವೀಣಾ ಕೆಂಡದಮಠ, ಸುನೀತಾ ನರೇಂದ್ರ, ಪದ್ಮಾ ರಾಯಚೂರ, ಪಿ.ವಾಯ್. ಕಿತ್ತೂರ, ಬಸವರಾಜ ನರೇಗಲ್ಲ. ಬಸವರಾಜ ಲಂಗೋಟಿ, ದೀಪಕ ಕುಲಕಣರ್ಿ, ಮುಂತಾದವರು ಉಪಸ್ಥಿತರಿದ್ದರು. ಡಾ. ವಿಲಾಸ ಕುಲಕಣರ್ಿ ಸ್ವಾಗತಿಸಿ, ನಿರೂಪಿಸಿದರು. ಸಂಜಯ ಕಬ್ಬೂರ ವಂದಿಸಿದರು.