ಬಾಗಲಕೋಟೆ: ಗ್ರಾಮೀಣ ಭಾಗದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕರ ಜೀವನಕ್ಕೆ ಸ್ವಚ್ಛ ಪರಿಸರ ಅಗತ್ಯವಾಗಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ ಸ್ವಚ್ಛ ಭಾರತ, ಸ್ವಸ್ಥ ಭಾರತ ಕನಸನ್ನು ನನಸಾಗಿಸುವ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಎಲ್ಲರೂ ಶ್ರಮೀಸಬೇಕಾದ ಅಗತ್ಯ ಇದೆ ಎಂದು ಬೀಳಗಿ ತಾಲೂಕ ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ಎಮ್.ಕೆ.ತೊದಲಬಾಗಿ ಹೇಳಿದರು.
ಬೀಳಗಿ ತಾಲೂಕಿನ ಸಿದ್ದಾಪೂರ ಗ್ರಾಮದ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ಶನಿವಾರ ಭಾರತ ಸರಕಾರದ ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ವಿಜಯಪುರ ಹಾಗೂ ತಾಲೂಕ ಪಂಚಾಯತ, ಶಿಶು ಅಭಿವೃದ್ಧಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಬೀಳಗಿ ಹಾಗೂ ಗ್ರಾಮ ಪಂಚಾಯತ ಸಿದ್ದಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮೀಷನ್ ಕುರಿತು ಏರ್ಪಡಿಸಿದ್ದ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬಾಗಲಕೋಟೆ ಜಿಲ್ಲಾ ಪಂಚಾಯತ ಸ್ವಚ್ಛ ಭಾರತ ಮಿಷನ್ನ ಜಿಲ್ಲಾ ಸಮಾಲೋಚಕ ವಾಯ್.ಕೆ.ಪಾಷರ್ಿ ಮಾತನಾಡಿ, ಪ್ರತಿಶತ 60% ರಷ್ಟು ಕಾಯಿಲೆಗಳು ಬಯಲು ಮಲ ವಿಸರ್ಜನೆ ಮಾಡುವುದರಿಂದ ಹರಡುತ್ತದೆ. 1 ಗ್ರಾಂ ಮಲದಲ್ಲಿ 1 ಕೋಟಿ ರೋಗಾಣುಗಳು ಉತ್ಪತ್ತಿಯಾಗುತ್ತವೆ.
ಈ ದೃಷ್ಠಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವ್ಯಯಕ್ತಿಕ ಶೌಚಾಲಯಗಳನ್ನು ನಿಮರ್ಿಸಿಕೊಂಡು ತಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವುದರ ಜೋತೆಗೆ ಊರಿನ ನೈರ್ಮಲ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ಜನಸಂಪರ್ಕ ಕಾಯರ್ಾಲಯ ವಿಜಯಪುರದ ಸಂಯೋಜಕ ಕಾರಭಾರಿ ಮುರಳೀಧರ ಪ್ರಾಸ್ತಾವೀಕವಾಗಿ ಮಾತನಾಡಿ ಕೇಂದ್ರ ಸಕರ್ಾರವು ರಾಜ್ಯ ಸಕರ್ಾರಗಳ ಸಹಯೋಗದೊಂದಿಗೆ ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸ್ಥಳಿಯ ಜನ, ಸಮುದಾಯಗಳು, ಗ್ರಾಮ ಪಂಚಾಯತ ಹಾಗೂ ಸಂಬಂದಿಸಿದ ಇಲಾಖೆಗಳನ್ನು ಸಂಪಕರ್ಿಸಿ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ವ್ಯಯಕ್ತಿಕ ಅಭಿವೃದ್ಧಿ ಜೊತೆಗೆ ಗ್ರಾಮದ ಅಭಿವೃದ್ಧಿಗೆ ಕ್ಯೆಜೊಡಿಸಬೇಕೆಂದರು. ಇದೇ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ದಯಾನಂದ ಕರೆಣ್ಣವರ ಮತ್ತು ಕ್ಷೇತ್ರ ಶಿಕ್ಷಣ ಸಂಯೋಜಕ ಎ.ಆರ್.ಹಂಚಿನಾಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯೆಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ದೊಡ್ಡವ್ವ ಕುಂಬಾರ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷೆ ನೂರಜಾನ ನದಾಪ್, ತಾಲೂಕ ಪಂಚಾಯತ ಸದಸ್ಯ ಗೋಪಾಲ ರಜಪೂತ ಮತ್ತು ಎಲ್ಲ ಗ್ರಾಮ ಪಂಚಾಯತ ಸದಸ್ಯರು, ಅಭಿವೃದ್ಧಿ ಅಧಿಕಾರಿ ತೇಜಸ್ವಿನಿ ಮರೆಗುದ್ದಿ, ಅಂಗನವಾಡಿ ಮೇಲ್ವಿಚಾರಕಿಯರಾದ ಭಾಗ್ಯಶ್ರೀ ಜಾದವ, ಸುನಂದಾ ಕಾಲತಿಪ್ಪಿ, ಮಂಜುಳಾ ಇದ್ದಲಗಿ, ಬಸಮ್ಮ ಈರಣ್ಣವರ, ನೀಲಮ್ಮ ಜಲಗೇರಿ, ಶಾಲಾ ಮುಖ್ಯೋಪಾಧ್ಯಾಯರಾದ ಅಶೋಕ ಮಾಡಗಿ, ಎಸ್.ಎನ್.ಗಾಣಿಗೇರ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕತರ್ೆಯರು, ಮಹಿಳಾ ಸಂಘದ ಸದಸ್ಯರು, ಶಿಕ್ಷಕರು, ವಿದ್ಯಾಧರ್ಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಬಮೇಳದೊಂದಿಗೆ ಜಾಗೃತಿ ಜಾಥಾ ಆಯೋಜಿಸಲಾಗಿತ್ತು, ಸ್ವಚ್ಛ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮ ಕುರಿತು ಏರ್ಪಡಿಸಿದ್ದ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಬದಾಮಿಯ ಸಂಗನಬಸಯ್ಯ ಹಿರೇಮಠ ಹಾಗೂ ಕಾವೇರಿ ಕಲಾ ತಂಡದವರಿಂದ ಆರೋಗ್ಯ ಕುರಿತು ವಿವಿಧ ಜಾಗೃತಿ ಗೀತೆಗಳನ್ನು ಹಾಡಿದರು. ಶಿಕ್ಷಕರಾದ ವಿಠ್ಠಲ ವಡವಾನಿ ಸ್ವಾಗತಿಸಿ, ಎಸ್.ಎಸ್.ಗರಸಂಗಿ. ಉಮರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.