ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ

 ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ Leprosy awareness campaign launched at Lakkundi Primary Health Center

ಲೋಕದರ್ಶನ ವರದಿ 

ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ  

ಗದಗ   : ಜನೆವರಿ 30 : ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು  ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ ಹಮ್ಮಿಕೊಳ್ಳಲಾಗಿದೆ .ಕುಷ್ಟರೋಗವು  ಮೈಕ್ರೋ ಬ್ಯಾಕ್ಟಿರಿಯಂ ಲೆಪ್ರೆ ಎಂಬ ಸೂಕ್ಷ್ಮಾಣುವಿನಿಂದ ಬರುವ ಕಾಯಿಲೆಯಾಗಿದೆ. ಕುಷ್ಟರೋಗವನ್ನ ಎಂ.ಡಿ.ಟಿ ಚಿಕಿತ್ಸೆಯಿಂದಯಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಎಂ.ಡಿ.ಟಿ ಚಿಕಿತ್ಸೆಯು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ  ಹಾಗೂ ಕುಷ್ಟರೋಗ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಬಗ್ಗೆ ಪ್ರತಿಯೊಂದು ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವನ್ನು ಮೂಡಿಸಬೇಕೆಂದು ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳತಿಳಿಸಿದರು. 


ಲಕ್ಕುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂಜ್ಯ ಮಹಾತ್ಮಗಾಂಧೀಜಿಯವರ ಪುಣ್ಯತಿಥಿ ಹುತಾತ್ಮರ ದಿನಾಚರಣೆ ಹಾಗೂ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಏರಿ​‍್ಡಸಲಾದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನದ ಪಾಕ್ಷಿಕ ಆಚರಣೆ ಕಾರ್ಯಕ್ರಮದ  ಕುರಿತು ಪೊಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ಪತ್ರಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಶಾಲೆಗಳಲ್ಲಿ ಮತ್ತು ಸಾರ್ವಜನಿಕರಿಗೆ ಪ್ರತಿಜ್ಞಾವಿಧಿ ಭೋಧಿಸಿ ಕುಷ್ಠರೋಗಿಗಳನ್ನು ಗೌರವದಿಂದ ಕಾಣುವುದು ಮತ್ತು ತಾರತಮ್ಯವನ್ನು ಕೊನೆಗೊಳಿಸವುದು ಮತ್ತು ಘನತೆಯನ್ನು ಕಾಪಾಡುವುದು ಘೋಷಣೆಯಂತೆ ಕುಷ್ಠರೋಗ ಮುಕ್ತಮಾಡಲು ನಾವು ನಮ್ಮ ಕೇತ್ರದಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು   ಮಾಡೋಣ ಎಂದು ಹೇಳಿದರು  

ಅಧ್ಯಕ್ಷತೆಯನ್ನು ಮಹಿಸಿದ್ದ ವೈದ್ಯಾಧಿಕಾರಿಗಳಾದ ಡಾ.ಶರ್ಮಿಳಾ ಮಾತನಾಡಿ  ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದಡಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ  ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು  ಜನೆವರಿ 30 ರಿಂದ ಫೆಬ್ರುವರಿ 13 ರವರೆಗೆ ನಡೆಸಿರಿ ಮತ್ತು ರೋಗಗಳನ್ನು ಪತ್ತೇ ಹಚ್ಚಿರಿ ಎಂ.ಡಿ.ಟಿ ಚಿಕಿತ್ಸೆಯಿಂದಯಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿರಿ ಕುಷ್ಠರೋಗಿಗಳನ್ನು ಗೌರವದಿಂದ ಕಾಣಬೇಕೆಂದು ಹೇಳಿದರರು. 


ಇದೇ ಸಂದರ್ಭದಲ್ಲಿ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನ ಹಾಗೂ ಕುಷ್ಟರೋಗ ನಿರ್ಮೂಲನೆ ಕುರಿತು  ಕರಪತ್ರ  ಹಾಗೂ ಭಿತ್ತಿಪತ್ರಗಳನ್ನು ಜಿಲ್ಲಾ ರೋಗವಾಹ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಮೇವಲ್ವಿಚಾರಕರಾದ  ಅನ್ನಪೂರ್ಣ ಶೆಟ್ಟರ ಬಿಡುಗಡೆ ಮಾಡಿದರು   


ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕರಿಗಳಾದ ಶಾಂತಾ ನೂಕಾಪೂರ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ವಾಯ್ ಎನ್ ಕಡೇಮನಿ ಎಸ್‌.ಬಿ.ಗಡಾದ ಸಮುದಾಯ ಆರೋಗ್ಯಾಧಿಕಾರಿಗಳಾದ ಲಕ್ಷ್ಮೀ ಭಜಂತ್ರಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕರಿಗಳಾದ ಜಯಶ್ರೀ ಡಬಾಲಿ ಚಂದ್ರಕಲಾ ತೋಟದ ಗಂಗಮ್ಮ ಕುಂಬಾರ ಶುಶ್ರೂಷಣಾಧಿಕರಿಗಳಾದ ಆರೀಪಾ ಕಿರಟಗೇರಿ ಗಾಯತ್ರಿ ಬಡಿಗೇರ ಮಂಜುಳಾ ಆರಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು  ಹಾಜರಿದ್ದರು.