ತುಬಚಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಚಿರತೆ
Leopard sighted in Tubachi village
ಲೋಕದರ್ಶನ ವರದಿ
ಜಮಖಂಡಿ 03: ತಾಲ್ಲೂಕಿನ ತುಬಚಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದನ್ನು ಕಂಡ ಗ್ರಾಮಸ್ಥರು ಭಯಭೀತಗೊಂಡಿರುವ ಘಟನೆ ನಡೆದಿದೆ. ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಾ ಅಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಾ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಬಾಗಲಕೋಟ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದ ಸರಹದ್ದಿನ ಹೊಲಗದ್ದೆಯಲ್ಲಿ ಚಿರತೆಯ ಓಡಾಟ ನಡೆಸಿದ್ದು. ಅದರ ಹೆಜ್ಜೆ ಗುರುತು, ಲದ್ದಿಯನ್ನು ಹಾಕಿರುವ ಗುರುತುಗಳು ಪತ್ತೆಯಾಗಿದ್ದು ಎರಡು ಜಿಲ್ಲೆಯ ತಾಲೂಕಿನ ತಹಶೀಲ್ದಾರರಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ತುಬಚಿ ಹಾಗೂ ಝಂಜರವಾಡ ಗ್ರಾಮದ ಹೊಲಗದ್ದೆಯಲ್ಲಿ ಚಿರತೆಯು ಆಹಾರಕ್ಕೆ ಬೇಟೆಗಾಗಿ ತಿರುಗಾಡುತ್ತಿರುವದನ್ನು ಪ್ರತ್ಯಕ್ಷವಾಗಿ ಕಂಡ ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಜಮಖಂಡಿಯ ಅರಣ್ಯ ಇಲಾಖೆ ಹಾಗೂ ಅಥಣಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದರು ಸಹ ಆ ಗ್ರಾಮ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಎರಡು ತಾಲೂಕಿನ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ ಎಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ. ಚಿರತೆಯು ಹಗಲಿನಲ್ಲಿ ರಸ್ತೆಯನ್ನು ದಾಟಿ. ಜಮಖಂಡಿ ತಾಲ್ಲೂಕಿನ ವ್ಯಾಪ್ತಿಗೆ ಬರುತ್ತಿದ್ದು. ರಾತ್ರಿ ಸಮಯದಲ್ಲಿ ಅಥಣಿ ತಾಲೂಕಿನ ವ್ಯಾಪ್ತಿಗೆ ಹೋಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತುಬಚಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯು ಇರುವ ಕಾರಣ ರಸ್ತೆಯ ಎಡ ಬದಿಗೆ ಝಂಜರವಾಡ ಗ್ರಾಮ ಬೆಳಗಾವಿ ಜಿಲ್ಲೆ ಪ್ರಾರಂಭವಾಗುತ್ತದೆ. ಬಲಬದಿಗೆ ತುಬಚಿ ಗ್ರಾಮ ಬಾಗಲಕೋಟ ಜಿಲ್ಲೆಯ ಪ್ರಾರಂಭವಾಗುತ್ತಿದ್ದು. ಎರಡು ಜಿಲ್ಲೆಯ ಮಧ್ಯ ರಸ್ತೆ ಇದ್ದು. ರಸ್ತೆಯನ್ನು ದಾಟಿದರೆ ಬೇರೆ-ಬೇರೆ ಜಿಲ್ಲೆಗಳು ಪ್ರಾರಂಭವಾಗುತ್ತದೆ. ಆದಕಾರಣ ಎರಡು ಜಿಲ್ಲೆಗೆ ಸಂಬಂಧಿಸಿದ ತಾಲೂಕಾ ಅಧಿಕಾರಿಗಳು ಇವಾಗ ಕಾರ್ಯಾಚರಣೆ ಮಾಡಲು ಮುಂದಾಗಿದ್ದಾರೆ.
ಸ್ಥಳಕ್ಕೆ ಜಮಖಂಡಿ ತಹಶೀಲ್ದಾರ ಅನೀಲ ಬಡಿಗೇರ ಅವರು ಭೇಟಿ ನೀಡಿ, ಅರಣ್ಯ ಇಲಾಖೆಯ ಆಧಿಕಾರಿಗಳಿಗೆ ಚಿರತೆಯನ್ನು ಸೆರೆ ಹಿಡಿಯಲು ಸೂಚನೆಯನ್ನು ಸಹ ನೀಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಅಳವಡಿಸಿದ್ದಾರೆ.
ಚಿರತೆಯನ್ನು ಕಂಡ ಪ್ರತ್ಯಕ್ಷದರ್ಶಿಗಳಾದ ಪಿಂಟು ಸಿಂಧೂರ, ಸಾಗರ ಕರಬಸನ್ನವರ, ಪವಣ ಕುರೆನ್ನವರ, ಸುನೀಲ ಬಾಲಪ್ಪನ್ನವರ, ಪಾರೀಶ ನ್ಯಾಮಗೌಡ, ಪರಗೌಡ ಶೇಗುಣಸಿ ಚಿರತೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿದ್ದಾರೆ.
ಚಿರತೆಯ ಓಡಾಟದ ಹೆಜ್ಜೆಯ ಗುರುತುಗಳು, ಅದರ ಲದ್ದಿಯ ಕುರುಹುಗಳನ್ನು ಕಂಡ ಅಧಿಕಾರಿಗಳು ಚಿರತೆ ಇರುವುದು ನಿಜವಾಗಿದೆ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ತಹಶೀಲ್ದಾರ ಅನೀಲ ಬಡಿಗೇರ ಅವರು ಗ್ರಾಮಸ್ಥರಲ್ಲಿ ಎಚ್ಚರಿಕೆಯಿಂದ ಇರಲು ಹಾಗೂ ದನಕರುಗಳನ್ನು ಜಾಗೃಕತೆಯಿಂದ ನೋಡಿಕೊಳ್ಳಲು ಹಾಗೂ ಮಕ್ಕಳಿಗೆ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವ ಬಗ್ಗೆ ಸೂಚನೆಯನ್ನು ಸಹ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಸ್.ಸಿಂಧೂರ, ಸುರೇಶಗೌಡ ಪಾಟೀಲ ಸೇರಿದಂತೆ ಗ್ರಾಮಸ್ಥರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 