ರಾಣೇಬೆನ್ನೂರು08: ತಾಲೂಕಿನಲ್ಲಿ ವಸತಿ ನಿರ್ಗತಿಕರು ಸಾಕಷ್ಟು ಪ್ರಮಾಣದಲ್ಲಿದ್ದು, ಈ ಕುರಿತು ಚಿಂತನೆ ನಡೆಸಿದ ಶಾಸಕ ಅರುಣಕುಮಾರ ಪೂಜಾರ ಅವರು ರಾಣೇಬೆನ್ನೂರು ವಿಧಾಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಈ ಕುರಿತಂತೆ ಸುಧೀರ್ಘ ಸಮಾಲೋಚನೆ ನಡೆಸಿದರು.
ಸ್ಪಂದಿಸಿ ಮಾತನಾಡಿದ ವಸತಿ ಸಚಿವರು ಶೀಘ್ರವೇ ಈ ಕುರಿತು ಚಿಂತನೆ ನಡೆಸಲಾಗುವುದು ಎಂದು ಅರುಣಕುಮಾರ ಪೂಜಾರ ಅವರಿಗೆ ಭರವಸೆ ನೀಡಿದರು.