ಕರುಗಳ ಪ್ರದರ್ಶನಕ್ಕೆ ಶಾಸಕ ಓಲೇಕಾರ ಚಾಲನೆ

ಹಾವೇರಿ18 : ರೈತರು ಆರ್ಥಿಕವಾಗಿ  ಸದೃಢರಾಗಬೇಕಾದರೆ ಬೇಸಾಯದೊಂದಿಗೆ ಹೈನುಗಾರಿಕೆಯಿಂದ ಲಾಭಗಳಿಕೆ ಮಾಡುವುದು ಅಗತ್ಯವಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

       ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಆಯೋಜಿಸಿದ ತಾಲೂಕ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಹಿರೇಮುಗದೂರ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಜರುಗಿದ ಮಿಶ್ರತಳಿ ಹಸುಗಳ ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿದರು.

        ರೈತರು ತಮ್ಮ ಸಂಕಷ್ಟದಿಂದ ಪಾರಾಗಲು ಮಳೆಯ ಅತಿವೃಷ್ಟಿ ಹಾಗೂ ಅನಾವೃಷ್ಟಿ ಕಾರಣವಾಗಿದ್ದರೂ ಸರಿಯಾದ ವೈಜ್ಞಾನಿಕ ಹೈನುಗಾರಿಕೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.ಸಿಎಂ ಯಡಿಯೂರಪ್ಪನವರು ರೈತರ ಪರವಾಗಿ ಹಲವಾರು ಯೋಜನೆ ಜಾರಿಗೆ ತರುತ್ತಿದ್ದಾರೆ. ಪ್ರತಿ ಲೀಟರ್ ಹಾಲಿಗೆ 2-3 ಹೆಚ್ಚಿಗೆ ನೀಡುವುದರೊಂದಿಗೆ ವಿಶೇಷವಾಗಿ ದೇಶಿ ತಳಿಯ ಹಾಲನ್ನು ಪ್ರತ್ಯಕವಾಗಿ ಖರೀದಿ ಮಾಡಿ ಹೆಚ್ಚಿನ ದರ ನಿಗದಿ ಮಾಡಿದ್ದಾರೆ. ಕಡಿಮೆ  ಖರ್ಚು ಮಾಡಿ ಹೆಚ್ಚು ಲಾಭ ಮಾಡಿಕೊಳ್ಳಲು ಅವಕಾಶಗಳಿಗೆ ರೈತರು ಮುಂದಾಗಿ  ಆರ್ಥಿಕವಾಗಿ ಬಲಿಷ್ಠರಾಗಿ ಎಂದು ಶಾಸಕರು ರೈತರಿಗೆ ಕರೆ ನೀಡಿದರು. 

        ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ ಸರ್ಕಾರ  ಹೈನುಗಾರಿಕೆಗೆ ವಿಶೇಷ ಒತ್ತು ನೀಡುತ್ತಿದೆ.ಪಶುಗಳಿಂದ ಎಲ್ಲ ರೀತಿ ಲಾಭವಾಗುತ್ತದೆ. ಹೈನುಗಾರಿಕೆಯಿಂದ ನಿರಂತರವಾಗಿ ಹಣ ಸಿಗುತ್ತದೆ.ಕುಟುಂಬ ನಿರ್ವಹಣೆ ಸುಲಭವಾಗುತ್ತಾ ಮಕ್ಕಳ ಶಿಕ್ಷಣ ಹಾಗೂ ಬೇಸಾಯಕ್ಕೆ  ಬೇಕಾಗುವ ವಸ್ತುಗಳ ಖರೀದಿಗೆ ಸಹಕಾರಿಯಾಗುತ್ತದೆ. ಗುಣಮಟ್ಟದ ಹಾಲನ್ನು ನಮಗೆ ನೀಡಿದರೆ ಹೆಚ್ಚಿನ ದರ ನಿಗದಿ ಸಾಧ್ಯವಾಗುತ್ತದೆ. ಸ್ಪಧರ್ಾತ್ಮಕ ಯುಗದಲ್ಲಿ ಹಲವಾರು ಕಂಪನಿಗಳ ಸವಾಲನ್ನು ಎದುರಿಸಬೇಕಾಗಿದೆ. ದೇಶಿಯ ಪಶುಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ನಿಮಗೆ ಕೆಎಂಎಫ್ ಸಹಕಾರ ನೀಡಲಿದೆ ಎಂದರು.

       ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿಗಳು ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಪಶುಗಳಿಗೆ ಶ್ರೇಷ್ಠ ಸ್ಥಾನ ಮಾನಗಳಿಗೆ ಕಷ್ಟ ಕಾಪರ್ುಣ್ಯಗಳಿಗೆ ಪಶು ಸಹಕಾರಿಯಾಗಲಿದೆ. ಹಾಲಿನಿಂದ ಮನುಷ್ಯನಿಗೆ ಆಹಾರವಾಗಿ ಹಾಗೂ ಭೂಮಿಗೆ ಗೊಬ್ಬರವಾಗಿ ನಮಗೆ ಉಪಯೋಗಕ್ಕೆ ಬರುತ್ತದೆ. ಜವಾರಿ ತಳಿಗಳನ್ನು ಜೋಪಾನ ಮಾಡಲು ನಾವು ಬದ್ಧರಾಗಬೇಕಾಗುತ್ತದೆ. ಮನುಷ್ಯನ ಸ್ವಾರ್ಥತನದಿಂದ ಪ್ರಾಣಿ ಪಕ್ಷಿಗಳು ನಾಶದ ಅಂಚಿನಲ್ಲಿ ಇವೆ. ನಿಸರ್ಗದಲ್ಲಿ ಸಮತೋಲನದಿಂದ ಮಾತ್ರ ನಮಗೆ ಉಳಿಗಾಲವಿದೆ ಎಂದು ಆಶರ್ಿವಚನ ನೀಡಿದರು.

       ಪ್ರದರ್ಶನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಿಶ್ರತಳಿಗಳ ಹಸುಗಳು ಮತ್ತು ಕರುಗಳನ್ನು ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತ ಬಾಂಧವರು ಭಾಗವಹಿಸಲು ಕರೆ ತಂದಿದ್ದರು.ಉತ್ತಮ ಹಸು-ಕರುಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

           ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ,ಕೆಎಂಎಫ್ ನಿದರ್ೇಶಕರಾದ ಬಸವಗೌಡ ಮೇಲಿನಮನಿ, ಹಾ.ಉ.ಸ.ಸಂ ಅಧ್ಯಕ್ಷರಾದ ಬಸವಣ್ಣೆಪ್ಪ ಚ ಕಡ್ಲೇಪ್ಪನವರ,ಉಪಾಧ್ಯಕ್ಷರಾದ ಮರಿಯವ್ವ ಹರಿಜನ, ದುಗರ್ಾಂಬಾ ಸೊಸೈಟಿಯ ಅಧ್ಯಕ್ಷರಾದ ಬಸಪ್ಪ ಚ ಕಡ್ಲೇಪ್ಪನವರ, ತಾಪಂ ಸದಸ್ಯ ಫಕ್ಕಿರಗೌಡ ಕುಂದೂರ, ಬಸವರಾಜ ಕೋಳಿವಾಡ, ಗ್ರಾಪಂ ಸದಸ್ಯರಾದ ಬಸಪ್ಪ ಕಡ್ಲೇಪ್ಪನವರ, ಈರಣ್ಣ ಚಪ್ಪರದಹಳ್ಳಿಮಠ,ಸಾವಿತ್ರವ್ವ ಹಿರೇಮಠ, ನೀಲವ್ವ ಜಾಡರ ಪ್ರೌಢ ಶಾಲೆ ಮುಖ್ಯೋಪಾಧ್ಯಯರಾದ ಎಸ್,ಜಿ ಚರಂತಿಮಠ, ಊರಿನ ಮುಖಂಡರಾದ ಶಿವಲಿಂಗಪ್ಪ ಕನವಳ್ಳಿ, ಶಂಭಣ್ಣ ಆರೇರ, ಗಂಗಾಧರ ಕನವಳ್ಳಿ.ಬಿ.ಡಿ ಕೊಳೂರ, ಬಸಪ್ಪ ಕನವಳ್ಳಿ, ಮಂಜು ಮಾಲಿ, ಪರಮಯ್ಯಸ್ವಾಮಿ ಹಿರೇಮಠ, ಮಲ್ಲಪ್ಪ ತಳವಾರ, ಬಸವರಾಜ ಸೋಮಸಾಗರ, ಮಲ್ಲಪ್ಪ ಹೊಸಮನಿ, ನೀಲಪ್ಪ ಕಾಳಿ, ಶ್ರೀಧರಗೌಡ ಪಾಟೀಲ, ಅಶೋಕ ಅಳ್ಳಳ್ಳಿ, ಪಶು ಇಲಾಖೆ ಸಹಾಯಕ ನಿದೇಶಕರಾದ ಡಾ|| ಬೀರೇಶ ಸಣ್ಣಪುಟ್ಟಕ್ಕನವರ, ಡಾ|| ಮಹೇಶ ಸವಣೂರ, ಪಶು ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು, ರೈತ ಬಾಂದವರು ಪಾಲ್ಗೊಂಡು ಯಶಸ್ವಿಗೊಳಿಸಿದರು.