ಬಳ್ಳಾರಿ, ಮೇ 20: ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ರೈತರ ಜಮೀನಿನಲ್ಲಿ "ಬದು ನಿಮರ್ಾಣದ ಮಾಸಾಚರಣೆ ಹಾಗೂ ಅಭಿಯಾನ"ಕ್ಕೆ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರು ಚಾಲನೆ ನೀಡಿದರು.
ಕೂಲಿ ಕಾಮರ್ಿಕರಿಗೆ ಮಾಸ್ಕ್ಗಳನ್ನು ಮತ್ತು ರೋಗ ನಿವಾರಕ ದ್ರಾವಣಗಳನ್ನು ಇದೇ ಸಂದರ್ಭದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಕೊರೊನಾ ಭೀತಿ ಇರುವುದರಿಂದ ಜನರೆಲ್ಲರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಬಳಸಿ ಹಾಗೆ ನಿಮ್ಮ ಮನೆ ಮತ್ತು ಊರುಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ಹೇಳಿದರು.
ಪ್ರತಿ ಹೊಲದಲ್ಲಿ ಬದು ರೈತನ ಮುಖದಲ್ಲಿ ನಗು, ಪ್ರತಿ ಕುಟುಂಬಕ್ಕೂ ಕೆಲಸ ಪ್ರತಿ ಹೊಲಕ್ಕೂ ಬದು ಎಂಬ ಉದ್ದೇಶದಲ್ಲಿ ಈ ಬದು ನಿಮರ್ಾಣದ ಮಾಸಾಚರಣೆ ಮತ್ತು ಅಭಿಯಾನವನ್ನು ಕೈಗೊಳ್ಳಲಾಗಿದೆ. ಬದು ನಿಮರ್ಾಣದಿಂದ ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗುವುದರಿಂದ ಶೇ.10 ರಿಂದ 15ರಷ್ಟು ಅಧಿಕ ಬೆಳೆ ಇಳುವರಿ, ಕಂದಕ ಬದು ನಿಮರ್ಿಸಿಕೊಳ್ಳಲು ಪ್ರತಿ ಎಕರೆಗೆ ಗರಿಷ್ಟ 13 ಸಾವಿರ ಆಥರ್ಿಕ ನೆರವು, ಒಂದು ಎಕರೆ ಪ್ರದೇಶದಲ್ಲಿ 100 ಮೀ. ಬದು ನಿಮರ್ಾಣದಿಂದ ಪ್ರತಿ ಹದ ಮಳಿಗೆ ಅಂದಾಜು 2 ಲಕ್ಷ ಲೀ. ಮಳೆ ನೀರು ಸಂಗ್ರಹ, ಬದುವಿನ ಮೇಲೆ ಹುಲ್ಲು, ತೋಟಗಾರಿಕೆ/ಅರಣ್ಯ ಸಸಿಗಳನ್ನು ನಾಟಿಮಾಡಿದಲ್ಲಿ ಬದುಗಳ ಸ್ವೀಕರಣ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ನಿಮ್ಮೂರಲ್ಲೆ ನಿಮಗೆ ನೂರು ದಿನಗಳ ಕೆಲಸ, ಗಂಡು-ಹೆಣ್ಣಿಗೆ ಸಮಾನ ಕೂಲಿ, ಪ್ರತಿ ದಿನಕ್ಕೆ 275 ರೂ.ಗಳನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿವರ್ಾಹಕ ಅಧಿಕಾರಿಗಳು, ಸ್ಥಳೀಯ ಪಿಡಿಒ, ಕೂಲಿ ಕಾಮರ್ಿಕರು ಸೇರಿದಂತೆ ಇತರರು ಇದ್ದರು.