ರಂಜಾನ್ ಹಬ್ಬದ ಅಂಗವಾಗಿ ಲೆಜೆಂಡ್ ಬ್ರದರ್ಸ್ ಹಬ್ಬದ ದಿನಸಿ ಕಿಟ್‌ನ್ನು ವಿತರಣೆ
Legend Brothers distributes festive grocery kits as part of Ramadan
ಲೋಕದರ್ಶನ ವರದಿ
ಗಜೇಂದ್ರಗಡ 15: ರಂಜಾನ್ ಹಬ್ಬದ ಅಂಗವಾಗಿ ಲೆಜೆಂಡ್ ಬ್ರದರ್ಸ್ ವತಿಯಿಂದ ಶಾದಿಮಹಲ್ ಆಯೋಜಿಸಿದ್ದ ಸಮಾರಂಭದಲ್ಲಿ ಹಬ್ಬದ ದಿನಸಿ ಕಿಟ್‌ನ್ನು ವಿತರಣೆ ಮಾಡಿದರು. ಈ ವೇಳೆ ಕೇಂದ್ರಕಾರಾಗೃಹದಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ ಮಾತನಾಡಿ
ರಂಜಾನ್ ಹಬ್ಬದಲ್ಲಿಯಾರೊಬ್ಬರೂ ಉಪವಾಸ ಇರಬಾರದೆಂಬ ಉದ್ದೇಶದಿಂದಆಹಾರಕಿಟ್ ವಿತರಿಸಿ ಸಮಬಾಳು ಸಮಪಾಲಿನ ತತ್ವವನ್ನುರಂಜಾನ್ ಹಬ್ಬಕ್ಕೆಅರ್ಥ ನೀಡಿದ್ದಾರೆ. ಇದರ ಭಾಗವಾಗಿರಂಜಾನ್ ಹಬ್ಬಕ್ಕೆಂದು ಬಡವರಿಗೆ ಲೆಜೆಂಡ್ ಬ್ರದರ್ಸ್‌ಆಹಾರಕಿಟ್ ವಿತರಣೆ ಮಾಡಿರುವುದು ಮೆಚ್ಚುಗೆ ಕೆಲಸವಾಗಿದೆಎಂದರು.
ಪ್ರತಿಯೊಬ್ಬರುತಮ್ಮದುಡಿಮೆಯಒಂದು ಭಾಗವನ್ನು ಸಮಾಜದ ಬಡವರಿಗೆಜಕಾತ್‌ರೂಪದಲ್ಲಿದಾನವನ್ನು ಮಾಡಬೇಕು. ಆ ಮೂಲಕ ಬಡ ಕುಟುಂಬಗಳು ಸಹ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳಲು ಮಹಮ್ಮದ್ ಪೈಗಂಬರ್(ಸ್ವ.ಅ) ಅವರು ಹಾಕಿ ಕೊಟ್ಟಿರುವದಾರಿಯಲ್ಲಿಎಲ್ಲರಿಗೂಆರ್ಥಿಕ ಸಮಾನತೆ ಸಿಗಬೇಕು. ಮೊಹಮ್ಮದ್ ಪೈಗಂಬರ(ಸ್ವ.ಅ) ಅವರು ಮಹಿಳೆಯರಿಗೆ, ಅತ್ಯಂತಗೌರವದ ಸ್ಥಾನವನ್ನು ನೀಡಿದ್ದರುಎಂದರು.
ಹಿರಿಯ ನ್ಯಾಯವಾದಿ ಎಂ.ಎಸ್.ಹಡಪದ ಮಾತನಾಡಿಡಿಜೆ ಸಾಂಗ್ ಹಾಕಿ, ಬೈಕ್ ಗಳ ಸೈಲೆನ್ಸರ್‌ಕಿತ್ತುಎಲ್ಲದರಲ್ಲಿಕುಣಿದು ಮೋಜು ಮಸ್ತಿ ಮಾಡುವಯುವಕರಿಗೆ ಲೆಜೆಂಡ್ ಬ್ರದರ್ಸ್‌ಅವರಕಾರ್ಯ ನಿಜಕ್ಕೂಎಲ್ಲರಿಗೂ ಮಾದರಿಯಾಗಿದೆಎಂದರು. ಹೆಚ್ಚೆಚ್ಚು ಇಂತಹ ಸಮಾಜಮುಖಿ, ಮಾನವೀಯ ಕಾರ್ಯಗಳ ಮೂಲಕ ಒಳ್ಳೆಯತನ ಬೆಳೆದರೆ ತನ್ನಿಂದತಾನೇಕೆಟ್ಟತನ ಮೂಲೆಗುಂಪಾಗುತ್ತದೆಎಂದರು.
ಈ ವೇಳೆ 70 ಬಡ ಮುಸ್ಲಿಂ ಕುಟುಂಬಗಳಿಗೆ ಹಬ್ಬದ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಮಾಜಿ ಪುರಸಭೆ ಸದಸ್ಯರಾಜು ಸಂಗ್ಲಿಕಾರ ಮಾತನಾಡಿದರು. ನ್ಯಾಯವಾದಿ ಎಂ.ಎಸ್.ಹಡಪದ, ಶಿವರಾಜ್ ಘೋರೆ್ಡ, ಬಸವರಾಜಕೊಟಗಿ, ಎ.ಡಿ.ಕೋಲಕಾರ, ಎಂ.ವಾಯ್.ಮುಧೋಳ, ಎಚ್.ಎಸ್.ಸೊಂಪೂರ, ಮಾತನಾಡಿದರು. ಅಧ್ಯಕ್ಷತೆಯನ್ನು ಹಸನಸಾಬ ತಟಗಾರ ವಹಿಸಿದ್ದರು.
ವಿಶೇಷವಾಗಿ ಎಂ.ಎಸ್.ಹಡಪದ,ಎಚ್.ಎಸ್.ಸೊಂಪೂರ, ಬಸವರಾಜಕೊಟಗಿ, ಶಿವರಾಜ್ ಘೋರೆ್ಡ, ಇವರನ್ನು ಲೆಜೆಂಡ್ ಬ್ರದರ್ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಟೆಕ್ಕದದರ್ಗಾದ ನಿಜಾಮುದ್ದಿನಷಾ ಮಕಾನದಾರ, ಖಲೀಲ ಅಹ್ಮದಖಾಜಿ, ಯಾಸೀನ ಮೌಲಾನ, ರಫೀಕ ಮೌಲಾನ, ಎಸ್.ವಾಯ್.ಮುಧೋಳ, ಫಯಾಜ್‌ತೋಟದ, ದಾವಲಸಾಬ ತಾಳಿಕೋಟಿ, ಲೆಜೆಂಡ್ ಬ್ರದರ್ಸ್ ಸಮಿತಿಅಧ್ಯಕ್ಷ ಅಲಿ ಸಾಗರ, ಅಸ್ಲಂ ಸಾಂಗ್ಲಿಕಾರ, ಸದ್ದಾಂಯಲಬುರ್ಗಿ, ಪಾಶು ಗಂಗಾವತಿ, ಮೈಬು ಸುಕಂದ, ಶರೀಫ್ ತಹಶಿಲ್ದಾರ, ಅಬ್ದುಲ ಮುಚ್ಚಾಲಿ, ಭಾಷಾಮೀಯಾ ತಹಶೀಲ್ದಾರ, ಆಸೀಫ ಸಂಗ್ಲಿಕಾರ, ಆಸೀಫ ದ್ಯಾಂಪೂರ ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 