ಮೇ 2 ರಂದು ಲೀಲಾತಾಯಿ ಹಾಗೂ ಜೀವಣ್ಣಗೌಡ ಪಾಟೀಲ ಕುಲಕರ್ಣಿ ದತ್ತಿ ಕಾರ್ಯಕ್ರಮ

ಮೇ 2 ರಂದು ಲೀಲಾತಾಯಿ ಹಾಗೂ ಜೀವಣ್ಣಗೌಡ ಪಾಟೀಲ ಕುಲಕರ್ಣಿ ದತ್ತಿ ಕಾರ್ಯಕ್ರಮ Leelathai and Jeevannagouda Patil Kulkarni Charity Program on May 2nd

ಲೋಕದರ್ಶನ ವರದಿ 

ಧಾರವಾಡ 01 :  ಕರ್ನಾಟಕ ವಿದ್ಯಾವರ್ಧಕ ಸಂಘವು, ಲೀಲಾತಾಯಿ ಹಾಗೂ ಜೀವಣ್ಣಗೌಡ ಪಾಟೀಲ ಕುಲಕರ್ಣಿದತ್ತಿ ಅಂಗವಾಗಿ ದಿನಾಂಕ: 2-5-2026 ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಕಾರ್ಯಕ್ರಮ ಏರಿ​‍್ಡಸಿದೆ. ಧಾರವಾಡದ ಆಧ್ಯಾತ್ಮಿಕ ಚಿಂತಕರು, ಸಮಾಜ ಸೇವಕರಾದ ಪ್ರೇಮಾ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಜಮಖಂಡಿಯ ಹಿರಿಯ ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ತಾತಾಸಾಹೇಬ ಬಾಂಗಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಸುಭಾಸ ಹಿರೇಮಠ  ಮತ್ತು ಕಲಘಟಗಿ ಶಿಕ್ಷಣ ಸಮಿತಿ ಕಾರ್ಯದರ್ಶಿ ಕೆ. ಬಿ. ಪಾಟೀಲ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಆರ್‌.ಎಮ್‌.ಷಡಕ್ಷರಯ್ಯ ದಂಪತಿ ಅವರು ಸನ್ಮಾನ ಸ್ವೀಕರಿಸುವರು. ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜೀವಣ್ಣಗೌಡ ಪಾಟೀಲ ಕುಲಕರ್ಣಿ 

1922ರಲ್ಲಿ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಮಡಕಿ ಹೊನ್ನಿಹಳ್ಳಿಯ ವತನದಾರ ಗೌಡರ ಮನೆತನದಲ್ಲಿ ಜನಿಸಿದ ಜೀವಣ್ಣ ಗೌಡರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದುತ್ತಿದ್ದಾಗ ಚಲೇಜಾವ್ ಚಳುವಳಿಯಲ್ಲಿ ಪಾಲ್ಗೊಂಡು ವಿದ್ಯಾಭ್ಯಾಸಕ್ಕೆ ವ್ಯತ್ಯಯ ತಂದುಕೊಂಡು ನಂತರ ಕಷ್ಟಪಟ್ಟು ಎಂ.ಎ.ಪದವಿ ಪಡೆದರು.ಉ.ಕ. ಜಿಲ್ಲೆ ಹಳಿಯಾಳದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ 33ನೇ ವಯಸ್ಸಿನಲ್ಲಿ ನಿಧನರಾದರು. ಕೃಷಿ, ಸಮಾಜಸೇವೆ, ಲಲಿತಕಲೆಗಳು, ಖಾದಿ ಮತ್ತು ವಿಧಾಯಕ ಕಾರ್ಯ ಅವರ ಹವ್ಯಾಸಗಳಾಗಿದ್ದವು. ಮಹಾತ್ಮಾಗಾಂಧೀಯವರ ಅಪ್ಪಟ ಅಭಿಮಾನಿಯಾಗಿದ್ದ ಅವರು ಹತ್ಯೆಯಾಗಿದ್ದಾಗ ಅಂತ್ಯ ಸಂಸ್ಕಾರದ ವೇಳೆಯವರೆಗೂ ನಿರಶನ ಆಚರಿಸಿದ್ದರು. 

ಲೀಲಾತಾಯಿ ಜೀ. ಪಾಟೀಲ ಕುಲಕರ್ಣಿ 

ಹಿರಿಯ ಸ್ವಾತಂತ್ರ್ಯ ಯೋಧ ದಂಪತಿಗಳಾದ ದಿ.ವಾಮನರಾವ ದೇಸಾಯಿ ಬಿದರಿ ಹಾಗೂ ದಿ.ಪದ್ಮಾವತಿ ಬಾಯಿ ಇವರ ಹಿರಿಯ ಮಗಳಾಗಿ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ 1929 ರಲ್ಲಿ ಜನಿಸಿದರು. ತವರೂರು ಜಮಖಂಡಿಯ ಪಿ.ಬಿ. ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದಂತೆ ಜೀವಣ್ಣಗೌಡ ಅವರೊಂದಿಗೆ 1948 ರಲ್ಲಿ ವಿವಾಹವಾದರು. ಬರೀ ಎಂಟು ವರ್ಷಗಳ ದಾಂಪತ್ಯದ ನಂತರ ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳೊಂದಿಗೆ ಜೀವನದ ಹಲವು ವೈರುಧ್ಯಗಳನ್ನು ಎದುರಿಸಿ ಹೋರಾಟ ಮಾಡುತ್ತಲೇ ಬದುಕಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಸುರೇಬಾನದಲ್ಲಿ 2 ಮೇ 1962 ಬುಧವಾರದಂದು 33ನೇ ವಯಸ್ಸಿನಲ್ಲಿ ನಿಧನರಾದರು. ಮಹಿಳಾ ಸಂಘಟನೆ, ಮೇಲುಕೀಳು ನಿವಾರಣೆ, ವಿಶೇಷತಃ ಪರಿಶಿಷ್ಟ ಜಾತಿಜನಾಂಗದ ಮಹಿಳೆಯರಲ್ಲಿಯ ಮೌಢ್ಯವನ್ನು ನಿವಾರಿಸುವಲ್ಲಿ ಬಹುಮುಖವಾಗಿ ಶ್ರಮಿಸಿದರು.