‘ನ್ಯಾಯಾಂಗದಲ್ಲಿ ತಂತ್ರಜ್ಞಾನ ಅಳವಡಿಕೆ’ ಉಪನ್ಯಾಸ ಕಾರ್ಯಕ್ರಮ

‘ನ್ಯಾಯಾಂಗದಲ್ಲಿ ತಂತ್ರಜ್ಞಾನ ಅಳವಡಿಕೆ’ ಉಪನ್ಯಾಸ ಕಾರ್ಯಕ್ರಮ Lecture program on ‘Implementation of Technology in the Judiciary’

       ಧಾರವಾಡ 17 : ಮಾಹಿತಿ ಇದ್ದಷ್ಟು ಸಬಲರಾಗುತ್ತೇವೆ. ಜನ ವ್ಯವಸ್ಥೆಯನ್ನು ಟೀಕಿಸುತ್ತಾರೆ. ನ್ಯಾಯಾಧೀಶನೂಕೂಡ ವ್ಯವಸ್ಥೆಯ ಶಿಶುವೆ ಎಂದು ಬೆಂಗಳೂರಿನ ಉಚ್ಛನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ  ಬಿ.ಎಂ. ಶ್ಯಾಮಪ್ರಸಾದ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ.ಚನ್ನಬಸಪ್ಪ ಮ.ಕೊಟ್ಟುರಶೆಟ್ಟರ ಮತ್ತು ಮಹಾಂತೇಶ ಚ.ಕೊಟ್ಟುರಶೆಟ್ಟರ ಸಂಸ್ಮರಣೆದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನ್ಯಾಯಾಂಗದಲ್ಲಿ ತಂತ್ರಜ್ಞಾನ ಅಳವಡಿಕೆ’ ವಿಷಯ ಕುರಿತು ಮಾತನಾಡುತ್ತಿದ್ದರು. 

1995 ರಿಂದ ನ್ಯಾಯ ವ್ಯವಸ್ಥೆದಶಕದಿಂದ ದಶಕಕ್ಕೆ ಹೇಗೆ ತಂತ್ರಜ್ಞಾನದಲ್ಲಿ ಬದಲಾಯಿತು ಎಂದು ವಿವರಿಸುತ್ತಾ, ಮೊದಲು ಪೇಜರ್, ನಂತರ ಮೊಬೈಲ್ ಇಂಟರನೆಟ್ ಬಂದು ಬದಲಾವಣೆ ಶೀಘ್ರ ಗತಿಯಲ್ಲಿ ಆಯಿತು. ಇಂಟರನೆಟ್ ಎಂಬುದು ಕಮ್ಯೂನಿಟಿ ಬದಲಾವಣೆ ಮಾಡಿತು. ರಾಜ್ಯಾದ್ಯಂತ 180 ಕಾನೂನು ಕಾಲೇಜುಗಳಿದ್ದು ಶಹರಗಳಲ್ಲಿ ಸುಮಾರು 56ಅ ಜನಸಂಖ್ಯೆ “ಅಂತರ್ಜಾಲ” ಇಂಟರನೆಟ್ ಬಳಸುತಿದ್ದಾರೆ.

        ಮೊದಲು ನ್ಯಾಯಾಲಯದಲ್ಲಿ ಕಕ್ಷಿದಾರರು ಬಂದು ವಕೀಲರನ್ನು ತಮ್ಮಕೇಸ್ ಏನಾಗಿದೆ ಅಂತ ಕೇಳುತ್ತಿದ್ದರು. ಈಗ ಇಂಟರನೆಟ್ ಮೂಲಕ ಅವರೆ ತಿಳಿದುಕೊಂಡು ಬಂದು ಯಾಕೆ ಹೀಗಾಯ್ತು ಅಂತ ಪ್ರಶ್ನಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೋರ್ಟುಗಳಲ್ಲಿ ಆನಲೈನ್ ಕಾನೂನು ತಿದ್ದುಪಡಿ ಮಾಡಿಕೊಂಡರು. ತಂತ್ರಜ್ಞಾನದ ಕ್ಯಾಮರಾಗಳ ಮೂಲಕ ವಿಡಿಯೋ, ಆಡಿಯೋ ಬಳಸಿಕೊಂಡು ಕಕ್ಷಿದಾರರ ಮನೆ ಬಾಗಿಲಿಗೆ ನ್ಯಾಯ ಒಯ್ಯುವ ಕಾರ್ಯ ಆರಂಭವಾಯಿತು. ಎಐ ಬಂದರೆದಕ್ಷತೆ ಸುಧಾರಿಸಬಹುದು ಎಂದರು. 

ಧಾರವಾಡ ಕವಿವಿಯ ಮಾಜಿ ಪ್ರಭಾರಿ ಕುಲಪತಿಡಾ.ಎಸ್‌. ಎಸ್‌. ಹೂಗಾರ ಮುಖ್ಯ ಅತಿಥಿಗಳಾಗಿ ಮಾತನಾಡಿ, ತಮ್ಮ ಗುರುಗಳಾದ ಚನ್ನಬಸಪ್ಪಕೊಟ್ಟುರ ಶೆಟ್ಟರ ಅವರು ಮಾನವೀಯ ಗುಣಗಳುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿದ ಹೃದಯವಂತ ಗುರುಗಳಾಗಿದ್ದರು. ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಿಸಿಕೊಳ್ಳುವ ಬಗೆ ಹೇಳುತ್ತಿದ್ದರು. ಕ್ರೀಯಾಶೀಲರಾದವರಿಗೆ ಉತ್ತಮ ಭವಿಷ್ಯವಿದೆ ಎಂದು ನಮಗೆ ಅರ್ಥೈಸಿದವರು ಎಂದ ಅವರು, ಕೊಟ್ಟುರಶೆಟ್ಟರ ಅವರ ಮಕ್ಕಳಿಗೂ ಒಳ್ಳೆಯ ಸಂಸ್ಕಾರವಿದೆಎಂದರು. 

ಮತ್ತೋರ್ವ ಅತಿಥಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ ಮಾತನಾಡಿ, ಮಹಾಂತೇಶ ಕೊಟ್ಟುರ ಶೇಟ್ಟರ ಅವರೊಂದಿಗಿನ ಸಂಬಂಧಗಳನ್ನು ಮೆಲುಕು ಹಾಕಿದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು, ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿದರು.ಗುರು ಹಿರೇಮಠ ವಂದಿಸಿದರು. ವೇದಿಕೆ ಮೇಲೆ ಚಂದ್ರಕಾಂತ ಬೆಲ್ಲದ, ವಿದ್ಯಾವತಿಕೊಟ್ಟುರಶೆಟ್ಟರ, ಶಂಕರ ಕುಂಬಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಬಿ.ಡಿ. ಪಾಟೀಲ, ಬಿ.ಎಸ್‌. ಶಿರೋಳ, ರಿಶಿಕೇಶ, ಯಶಸ್ವಿನಿ, ರಾಜು, ಸಿದ್ಧು, ಲಕ್ಷ್ಮೀಕೊಟ್ಟುರ ಶೆಟ್ಟರ ಸೇರಿದಂತೆ ಕೊಟ್ಟುರಶೆಟ್ಟರ ಪರಿವಾರ, ಶಿಷ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.