‘ರಂಗಭೂಮಿಯಲ್ಲಿ ನೆರಳು-ಬೆಳಕು ಹಾಗೂ ಪ್ರಸಾದನ’ ಉಪನ್ಯಾಸ

 ‘ರಂಗಭೂಮಿಯಲ್ಲಿ ನೆರಳು-ಬೆಳಕು ಹಾಗೂ ಪ್ರಸಾದನ’  ಉಪನ್ಯಾಸ Lecture on 'Shadow-Light and Prostitution in Theatre'

 

          ಧಾರವಾಡ 21:  ಇರುವ ವ್ಯಕ್ತಿಯನ್ನು ಬಣ್ಣದ ಮೂಲಕ ಬೇರೆ ರೀತಿಯಲ್ಲಿ ತೋರಿಸುವುದನ್ನು ಕರಗತ ಮಾಡಿಕೊಂಡವರು ಗಜಾನನ ಮಹಾಲೇ ಅವರು ಎಂದು ಗುಳೇದಗುಡ್ಡದ ಹಿರಿಯ ರಂಗಭೂಮಿ ಕಲಾವಿದ ವಿನೋದ ಅಂಬೇಕರ ಹೇಳಿದರು.  ಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀ ಗಜಾನನ ಮಹಾಲೆ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ವಿದುಷಿ ಪ್ರಮೋದಾ ಉಪಾಧ್ಯಾಯ, ಧಾರವಾಡ ಶಿಷ್ಯ ಬಳಗದವರಿಂದ ಡಾ. ದ.ರಾ. ಬೇಂದ್ರೆ ಗೀತೆಗಳಿಗೆ ಜಾನಪದ ನೃತ್ಯಗಳು ಕಾರ್ಯಕ್ರಮದಲ್ಲಿ ‘ರಂಗಭೂಮಿಯಲ್ಲಿ ನೆರಳು-ಬೆಳಕು ಹಾಗೂ ಪ್ರಸಾದನ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡತ್ತಿದ್ದರು.  

ಮುಂದುವರಿದು ಮಾನತಾಡಿದ ಅವರು, ರಂಗಭೂಮಿಯಲ್ಲಿ ಏನನ್ನು ಮಾಡಲು ಸಾಧ್ಯವೋ ಅದನ್ನು ಬಣ್ಣಗಳಿಂದ ತೋರಿಸಿಕೊಟ್ಟವರು ಮಹಾಲೇಯವರು. ಬಣ್ಣಗಳ ಬಗ್ಗೆ ಅಘಾದವಾದ ಜ್ಞಾನ ಹೊಂದಿದವರು. ಪಾತ್ರವನ್ನು ಸೂಕ್ಷ್ಮ ರೀತಿಯಿಂದ ಬಣ್ಣದ ಮೂಲಕ ತೋರಿಸತ್ತಿದ್ದರು ಎಂದ ಅಂಬೇಕರ ಅವರು, ರಂಗದಲ್ಲಿ ಬೆಳಕಿನ ಜೊತೆ ಆಟವಾಡುವದನ್ನು ಕಲಿಯಬೇಕು. ಸಮಯ, ಸಂದರ್ಭ, ಮಿತಿ, ವ್ಯಾಪ್ತಿ, ವಿನ್ಯಾಸದ ಅರಿವು ಇರಬೇಕು. ರಂಗಕ್ಕೆ ಬೆಳಕು ಅನಿವಾರ್ಯ ಹಾಗೂ ಪೂರಕ. ನಾಟಕಕ್ಕೆ ಬೆಳಕು ಮಹಾನ್ ಶಕ್ತಿಯಾಗಿದೆ. ಗಜಾನನ ಮಹಾಲೇಯವರು ಸೃಜನಶೀಲವ್ಯಕ್ತಿಯಾಗಿದ್ದರು. ಪ್ರಸಾಧನದಲ್ಲಿ ಪ್ರಾವಿಣ್ಯತೆ ಹೊಂದಿದ್ದರು. ಸಂಗೀತ ಮತ್ತು ಚಿತ್ರಕಲೆಯಲ್ಲಿಯೂ ಪರಿಣಿತರಾಗಿದ್ದರು. ಉತ್ತರ ಕರ್ನಾಟಕಕ್ಕೆ ಇವರ ಕೊಡುಗೆ ಅಪಾರ. ಇವರ ಹೆಸರಿನಲ್ಲಿ ಶಂಕರ ಹಲಗತ್ತಿ ಅವರು ಸಂಘದಲ್ಲಿ ದತ್ತಿ ಇರಿಸಿ, ಎಲ್ಲರೂ ಸ್ಮರಿಸುವಂತೆ ಮಾಡಿರುವುದು ಶ್ಲಾಘನೀಯ ಎಂದರು.  

ಮುಖ್ಯ ಅತಿಥಿಗಳಾಗಿ ದಾಂಡೇಲಿಯ ಭರತನಾಟ್ಯ ಕಲಾವಿದ ವಿದ್ವಾನ್ ಕೃಷ್ಣ ಭಾಗವತ್ ಮಾತನಾಡಿ, ಗಜಾನನ ಮಹಾಲೇ ಅವರು ನೂರಾರು ಮಕ್ಕಳಿಗೆ ಮಾಡುತ್ತಿದ್ದ ಪ್ರಸಾದನ ಸುಲಭದ ಕೆಲಸವಲ್ಲ. ಅಂಥ ಕಾರ್ಯಗಳನ್ನು ಅತ್ಯಂತ ಸರಳವಾಗಿ ಮಾಡುವ ಪ್ರಖರತೆ ಹೊಂದಿ ಕಲಾವಿದರ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು ಎಂದು ಹೇಳಿದರು.  ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಮಾತನಾಡಿದರು.  ಡಾ. ದ.ರಾ. ಬೇಂದ್ರೆ ಗೀತೆಗಳಿಗೆ ಜಾನಪದ ನೃತ್ಯಗಳನ್ನು ವಿದುಷಿ ಪ್ರಮೋದಾ ಉಪಾಧ್ಯಾಯ ಶಿಷ್ಯ ಬಳಗದವರು ಮನಮೋಹಕವಾಗಿ ಪ್ರಸ್ತುತಪಡಿಸಿದರು. ವೇದಿಕೆಯಲ್ಲಿ ಸಂತೋಷ ಮಹಾಲೆ ಉಪಸ್ಥಿತರಿದ್ದರು. ನಟರಾಜ ಉಪಾಧ್ಯಾಯ ಅವರು, ಗಜಾನನ ಮಹಾಲೇ ಅವರ ವ್ಯಕ್ತಿತ್ವ ಮತ್ತು ಪ್ರಸಾದನಕ್ಕೆ ಅವರ ಕೊಡುಗೆ ಕುರಿತು ಮಾತನಾಡಿದರು.   

ಕಲ್ಪತರು ಮಹಿಳಾ ಮಂಡಳದ ಸದಸ್ಯರಾದ ಸುಧಾ ಕಬ್ಬೂರ, ಮಾಧುರಿ ಕುಲಕರ್ಣಿ ಅವರು ಪ್ರಾರ್ಥಿಸಿದರು. ಶಂಕರ ಕುಂಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿ, ವಂದಿಸಿದರು.  ಕಾರ್ಯಕ್ರಮದಲ್ಲಿ ಡಾ. ಎಚ್‌.ಬಿ. ನೀಲಗುಂದ, ಎಂ.ಎಂ. ಚಿಕ್ಕಮಠ, ಕೆ.ಎಚ್‌. ನಾಯಕ, ಎಂ. ಸುದರ್ಶನರಾಜ, ವಿಜಯಲಕ್ಷ್ಮೀ ಯಲಿಗಾರ, ವಿಜಯೇಂದ್ರ ಅರ್ಚಕ, ಗೋಪಾಲ ಉಣಕಲ್, ಡಾ. ಅನಿಲ ಮೇತ್ರಿ, ದತ್ತರಾಜ ಕುಲಕರ್ಣಿ, ದೀಪಕ, ಕಿರಣ, ಅಪೂರ್ವ, ಸ್ನೇಹಾ ಹಾಗೂ ಕೃತಿಕಾ ಮಹಾಲೆ ಸೇರಿದಂತೆ ಮಹಾಲೆ ಪರಿವಾರದವರು, ಅಭಿಮಾನಿಗಳು ಉಪಸ್ಥಿತರಿದ್ದರು.