ನಾಡೋಜ ಡಾ.ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ’ ಅಂಗವಾಗಿ ಉಪನ್ಯಾಸ ಹಾಗೂ ರಂಗ ಗೌರವ ಸನ್ಮಾನ
Lecture and stage honours as part of the 'Nadoja Dr. Enagi Balappa Memorial Endowment'
ಲೋಕದರ್ಶನ ವರದಿ
ಧಾರವಾಡ 28 : ನಾಡೋಜ ಡಾ. ಏಣಗಿ ಬಾಳಪ್ಪ 1947 ರಲ್ಲಿ ತಮ್ಮದೇ ಆದ ಕಲಾ ವೈಭವ ನಾಟ್ಯ ಸಂಘ ಕಟ್ಟಿ ದಶಕಗಳ ಕಾಲ ಯಶಸ್ವಿ ನಾಟಕಗಳನ್ನು ಪ್ರದರ್ಶಿಸಿದ ರಂಗಭೂಮಿಯ ಸಾಕ್ಷಿ ಪ್ರಜ್ಞೆಯಾಗಿದ್ದರು ಎಂದು ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಭಿಪ್ರಾಯ ಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ‘ನಾಡೋಜ ಡಾ.ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ’ ಅಂಗವಾಗಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ರಂಗಗೌರವ ಸಮಾರಂಭದಲ್ಲಿ ರಂಗ ಗೌರವ ಸನ್ಮಾನ ಮಾಡಿ ಮಾತನಾಡಿದರು. .
1874 ರಲ್ಲಿ ವೀರನಾರಾಯಣ ಪ್ರಸಾದಿಕ ಕೃತಪುರ ಕರ್ನಾಟಕ ನಾಟಕ ಮಂಡಳಿ ಹಾಗೂ ಶಿರಹಟ್ಟಿಯ ಮಹಾಲಕ್ಷ್ಮೀ ಪ್ರಸಾದಿಕ ಸಂಗೀತ ನಾಟಕ ಮಂಡಳಿಗಳು ಮರಾಠಿಮಯವಾದ ಆ ಕಾಲ ಘಟ್ಟದಲ್ಲಿ ಕರ್ನಾಟಕದಲ್ಲಿ ಕನ್ನಡ ನಾಟಕ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದವು. ಆಧುನಿಕ ನಾಟಕಗಳ ಪಿತಾಮಹರೆನಿಸಿಕೊಂಡ ಸಕ್ಕರಿ ಬಾಳಾಚಾರ್ಯ ಹಾಗೂ ಡಾ.ಏಣಗಿ ಬಾಳಪ್ಪನವರ ರಂಗ ಸೇವೆ ಸ್ಮರಣೀಯ. ಬೆಳಗಾವಿಯ ಡಾ.ಏಣಗಿ ಬಾಳಪ್ಪ ಪ್ರತಿಷ್ಠಾನ 8 ವರ್ಷಗಳಿಂದ ರಂಗ ಗೌರವ ಸನ್ಮಾನ ಸ್ಮರಣೀಯವಾದುದು.
1961 ರಲ್ಲಿ ವಿಶ್ವರಂಗಭೂಮಿ ಸಂಸ್ಥೆಯು ಮಾರ್ಚ 27 ನ್ನು ಪ್ರತಿ ವರ್ಷ ವಿಶ್ವರಂಗಭೂಮಿ ದಿನಾಚರಣೆ ಆಚರಿಸಲು ಕರೆ ನೀಡಿತು. ತನ್ನಿಮಿತ್ತರಂಗ ಚಿಂತನೆ, ನಾಟಕ ಪ್ರದರ್ಶನ, ವಿಚಾರ ಸಂಕಿರಣ, ರಂಗಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ. ರಂಗಚಟುವಟಿಕೆ ನಿರಂತರವಾಗಿ ನಡೆಯಬೇಕೆಂಬ ಸ್ಮರಣೀಯ ದಿನವಾಗಬೇಕು ಎನ್ನುವ ಗುರಿಯೊಂದಿಗೆ ವಿಭಿನ್ನ ಸಂಸ್ಕೃತಿಗಳನ್ನು ಬೆಸೆಯುವ ಕಾರ್ಯ ವಿಶ್ವರಂಗಭೂಮಿ ದಿನದ ಉದ್ದೇಶಎಂದು ಹೇಳಿದರು.
ಧಾರವಾಡದ ರಂಗ ನಿರ್ದೇಶಕರಾದ ಡಾ. ಪ್ರಕಾಶ ಗರುಡ ಅಭಿನಂದನಾ ಪರ ನುಡಿಗಳನ್ನಾಡಿ, ಸಕ್ಕರಿ ಬಾಳಾಚಾರ್ಯ ವೃತ್ತಿರಂಗ ಭೂಮಿಗೊಂದು ಭದ್ರನೆಲೆ ಒದಗಿಸಿದವರು. 1874 ರಲ್ಲಿಅವರ ಸ್ಥಾಪಿಸಿದ ವೀರ ನಾರಾಯಣ ಕೃತಪುರ ನಾಟಕ ಮಂಡಳಿ, ಉರ್ದು, ಮರಾಠಿ ಪ್ರಾಬಲ್ಯವಿರುವ ಆ ಕಾಲದಲ್ಲಿ ಕನ್ನಡ ನಾಟಕಗಳನ್ನು ಉತ್ತರಕರ್ನಾಟಕದಲ್ಲಿ ಜನಪ್ರಿಯಗೊಳಿಸಿದರು. ಕನ್ನಡದ ದಾಸಯ್ಯನಾಗಿ ಕನ್ನಡ ಸೇವೆ ಮಾಡಿದ ಮಹಾನುಭಾವರು. ಮುಂದೆ ಈ ನಾಟಕ ಕಂಪನಿ ಹಲವು ಕಾರಣದಿಂದ ತನ್ನ ನೆಲೆ ಕಳೆದುಕೊಂಡಿತು ಎಂದು ಹೇಳಿದರು.
ಡಾ. ಮಂಜುನಾಥ ಅರ್ಕಸಾಲಿ ಶಿರಹಟ್ಟಿಯ ಮಹಾಲಕ್ಷ್ಮೀ ಪ್ರಸಾದಿತ ಸಂಗೀತ ನಾಟಕ ಮಂಡಳಿಯ ಸ್ಥಾಪಕರಾದ ವೆಂಕೋಬರಾಯರುರಂಗ ಸೇವೆ ಹಾಗೂ ರಂಗಕಲಾವಿದರನ್ನು ಪ್ರೋತ್ಸಾಹಿಸಿದ ಬಗ್ಗೆ ಮಾತನಾಡಿದರು.
ವೇದಿಕೆಯ ಮೇಲೆ ಎರಡೂ ನಾಟಕ ಕಂಪನಿಗಳ ಪರವಾಗಿ ಬಾಬರಾವ್‌ಎಸ್. ಹಾಗೂ ಮಾಲತಿ ಪುರಂದರೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಣಗಿ ಬಾಳಪ್ಪ ಟ್ರಸ್ಟ್ ಪರವಾಗಿ ಗಣ್ಯರನ್ನು ಸನ್ಮಾನಿಸಲಾಯಿತಶಂಕರ ಕುಂಬಿ ಸ್ವಾಗತಿಸಿದರು, ಬಸವರಾಜ ಬೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಬಸವರಾಜ ಜಗಜಂಪಿ, ರಾಮಕೃಷ್ಣ ಮರಾಠೆ, ಶೀರೀಷ ಜೋಶಿ, ಡಾ.ಶಶಿಧರ ನರೇಂದ್ರ, ರಾಮಪ್ಪಕಮತ, ಸುಭಾಸಏಣಗಿ, ಮೋಹನ ಏಣಗಿ, ಅರವಿಂದ ಏಣಗಿ, ವಿಜಯ ಏಣಗಿ, ಅಶೋಕ ಏಣಗಿ, ಹನಮೇಶ ಸಕ್ರಿ ದಂಪತಿಗಳು, ಡಾ.ಪಿ.ಜಿ. ಕೆಂಪಣ್ಣವರ ಸೇರಿದಂತೆ ಪ್ರತಿಷ್ಠಾನದ ಸದಸ್ಯರು, ಏಣಗಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 