ನಮ್ಮ ಗ್ರಾಮಕ್ಕೆ ಆಗಮಿಸಿದ ಪಲ್ಲಕ್ಕಿ ಬಸ್ ಸೇವೆಗೆ ಮುಖಂಡರಿಂದ ಚಾಲಕರಿಗೆ ಸ್ವಾಗತ ಸತ್ಕಾರ
Leaders welcome drivers of palanquin bus service that arrived in our village
ಹುಕ್ಕೇರಿ 09 : ತಾಲೂಕಿನ ಯಾದಗೂಡ ಗ್ರಾಮದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ನೂತನವಾಗಿ ಪಲ್ಲಕ್ಕಿ ಬಸ್ ಸೇವೆ ಪ್ರಾರಂಭವಾಗಿ ಅಥಣಿ ದಿಂದಾ ಐನಾಪುರ್ ಉಗಾರ್ ಸಿರಗುಪ್ಪಿ ಚಿಕ್ಕೋಡಿ ಹುಕ್ಕೇರಿ ಬೆಳಗಾವಿ ಮಾರ್ಗವಾಗಿ ಬೆಂಗಳೂರುಗೆ ಪ್ರತಿ ದಿನ ಸೇವೆಯನ್ನು ಪ್ರಾರಂಭವಾಯಿತು. ಇಂದು ದಿನಾಂಕ 08/04/2026 ರಿಂದ ಪಲ್ಲಕ್ಕಿ ಬಸ್ಸ ಪ್ರಾರಂಭಿಸಿದ್ದಾರೆ. ಈ ಬಸ್ಸಗೆ ಯಾದಗೂಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಗ್ರಾಮದ ಹಿರಿಯರು ಗ್ರಾಮದಲ್ಲಿ ಆಗಮಿಸಿದ ಪಲ್ಲಕ್ಕಿ ಬಸ್ಸಿಗೆ ಪೂಜೆ ನೆರವೇರಿಸಿದರು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದ ಗ್ರಾಮಸ್ಥರು ರಾಮಪ್ಪ ಪಾಟೀಲ್ ಕೆಎಸ್‌ಆರ್ಟಿಸಿ ಲಗಮಣ್ಣ ಜನ್ಮಟ್ಟಿ ಭೀಮಶೇನ್ ವಾಳಿಕಿ ಶ್ರೀರಾಜು ಗಿಡ್ಡಾಳೆ, ಸಂತೋಷ ರುಡ್ಡ ಅಭಿನಯ್ ಮಠಪತಿ ರಂಜನ್ ಮಾಹಾಡಿಕ್ ಮಲ್ಲು ಬಹದ್ದೂರಿ ಸಂಜು ಗೆಜ್ಜೆ ಕಲ್ಲು ಕಬ್ಬುರಿ ಮಹದೇವ್ ಜನುಮಟ್ಟಿ ಬರಮಣ್ಣಾ ಗುರವ್ ಜೊತೆಗೂಡಿ ಗ್ರಾಮದ ಗುರು ಹಿರಿಯರು ಸಂಭ್ರಮದಿಂದ ಬರಮಾಡಿಕೊಂಡರು ಹಾಗೂ ಬಸ್ಸಿನ ಸಿಬ್ಬಂದಿ ಇವರನ್ನು ಸಾಗತಿಸಿ ಸತ್ಕರಿಸಿದರು. ಇದು ನಮ್ಮ ಪಾಲಿನ ಸೌಭಾಗ್ಯ ಖಾಸಗಿ ವಾಹನಕ್ಕಿಂತ ಸರ್ಕಾರಿ ವಾಹನವೇ ನಮಗೆ ಸಂತೋಷದ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು ಹುಕ್ಕೇರಿಯಲ್ಲಿ ಅಥಣಿ - ಬೆಂಗಳೂರು ಪಲ್ಲಕ್ಕಿ ಬಸ್ ನ ಮೊದಲ ದಿನದ ಪ್ರಯಾಣದ ಮೊದಲ ಪ್ರಯಾಣಿಕರಿಗೆ ಹೂ ಗುಚ್ಚ ನೀಡಿ ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಘಟಕ ವ್ಯವಸ್ಥಾಪಕರಾದ ನಿಜಗುಣ ಕೇರಿ ಹಾಗೂ ಹುಕ್ಕೇರಿ ಘಟಕದ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರೂ....
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 