ಬಳ್ಳಾರಿ,ಜು.06: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇನ್ಮುಂದೆ ಅನುಮೋದಿತ ವಿನ್ಯಾಸಗಳಲ್ಲಿನ ನಿವೇಶನಗಳಿಗೆ ಸವರ್ೆ ನಕ್ಷೆ ನೀಡುವುದರ ಬದಲಿಗೆ ಅನುಮೋದಿತ ಲೇಔಟ್ ಪ್ಲಾನ್ ನಕ್ಷೆ ನೀಡಲು ನಿರ್ಧರಿಸಲಾಗಿದೆ ಎಂದು ಬುಡಾ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದರು.
ಅನುಮೋದಿತ ವಿನ್ಯಾಸಗಳಲ್ಲಿನ ನಿವೇಶನಗಳಿಗೆ ಸವರ್ೆ ನಕ್ಷೆ ನೀಡಿಕೆಗೆ ಸಂಬಂಧಿಸಿದಂತೆ ನಗರದ ಬುಡಾ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇನ್ಮುಂದೆ ನಿವೇಶನಗಳ ಸವರ್ೆ ನಕ್ಷೆ ನೀಡುವುದನ್ನು ಕೈಬಿಟ್ಟು ಬುಡಾ ಅನುಮೋದಿತ ಬಡಾವಣೆಯ ನಿಲನಕ್ಷೆಯನ್ನು ಒದಗಿಸಲಾಗುವುದು ಎಂದು ಹೇಳಿದ ಅವರು ಬುಡಾ ಅಧ್ಯಕ್ಷ ದಮ್ಮೂರು ಅವರು ಬುಡಾದಿಂದ ಈ ವರ್ಷ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಗೆ ವಿವರಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಕೆ.ಸಿ.ಕೊಂಡಯ್ಯ, ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ, ಭೂ ದಾಖಲೆಗಳ ಉಪನಿದರ್ೇಶಕರು, ಜಿಲ್ಲಾ ನೋಂದಣಾಧಿಕಾರಿಗಳು, ಬುಡಾ ಆಯುಕ್ತ ಈರಪ್ಪ, ಎಂಜನಿಯರ್ ಮತ್ತು ವ್ಯವಸ್ಥಾಪಕರು ಸೇರಿದಂತೆ ಇತರರು ಇದ್ದರು.