ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಪುರಾಣ ಪ್ರವಚನಕ್ಕೆ ಚಾಲನೆ
Launching the Purana discourse of Sri Channaveera Sharan of Chickenakoppa
ಕುಕನೂರು, ಆ.18: ಕಲಿಯುಗದ ಕಾಮಧೇನು, ಮೌನಯೋಗಿ, ಘನಮೌನಿ ತ್ರಿಕಾಲಜ್ಞಾನಿ ಎಂದು ಭಕ್ತರಿಂದ ಕರೆಯಲ್ಪಡುವ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಅಪಾರ ಭಕ್ತರ ಆರಾಧ್ಯ ಗುರುಗಳಾಗಿದ್ದಾರೆ ಎಂದು ಶ್ರೀಮಠದ ಪೂಜ್ಯ ಮಹಾದೇವ ಸ್ವಾಮೀಜಿ ಹೇಳಿದರು. ಕುಕನೂರು ಪಟ್ಟಣದ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ 25 ದಿನಗಳ ಕಾಲ ನಡೆಯಲಿರುವ ಶ್ರೀ ಚಿಕ್ಕೇನಕೊಪ್ಪದ ಚನ್ನವೀರ ಶರಣರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಜಗತ್ತಿನಲ್ಲಿ ಎಲ್ಲವೂ ಇದ್ದರೂ ನೆಮ್ಮದಿ ಇಲ್ಲ. ಇದಕ್ಕೆ ಧರ್ಮವನ್ನು ಮರೆತಿರುವುದೇ ಕಾರಣ. ಧರ್ಮವೆಂದರೆ ಕೇವಲ ಪೂಜೆ, ಮಂತ್ರವಲ್ಲ; ಮನುಷ್ಯನಾಗಿ ಬದುಕುವ ರೀತಿ ಎಂದು ಹೇಳಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಗುಡ್ಡದ ಆನವೇರಿ ಶ್ರೀಮಠದ ಪರಮಪೂಜ್ಯ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಆಸ್ತಿ, ಬಂಗಲೆ ಮಾಡಿಕೊಡುವುದರ ಜೊತೆಗೆ ಸಂಸ್ಕಾರ ನೀಡುವುದನ್ನು ಮರೆಯಬಾರದು. ಆಸ್ತಿ ಕೆಲ ವರ್ಷ ಮಾತ್ರ ಇರುತ್ತದೆ, ಆದರೆ ಸಂಸ್ಕಾರ ಹಲವು ಜನ್ಮಗಳವರೆಗೆ ಉಳಿಯುತ್ತದೆ. ತಂದೆ-ತಾಯಿಗೆ ಗೌರವ ನೀಡುವುದು, ಹಿರಿಯರನ್ನು ಗೌರವಿಸುವುದು ಹಾಗೂ ಪುರಾಣ ಕೇಳುವಾಗ ಮೊಬೈಲ್ ಬದಿಗಿಟ್ಟು ಮನಸ್ಸಿಟ್ಟು ಆಲಿಸುವುದು ಉತ್ತಮ ಸಂಸ್ಕಾರವಾಗಿದೆ ಎಂದರು.
ಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ ಮಾತನಾಡಿ, 25 ದಿನಗಳ ಪುರಾಣ ಪ್ರವಚನದಲ್ಲಿ ಶರಣರ ಜೀವನ ಚರಿತ್ರೆ, ಪವಾಡಗಳು, ಕಾಯಕ-ದಾಸೋಹ ತತ್ವ, ಮಾನವೀಯತೆ ಹಾಗೂ ಸಮಾನತೆಯ ಸಂದೇಶಗಳನ್ನು ಭಕ್ತರಿಗೆ ತಿಳಿಸಲಾಗುವುದು ಎಂದರು.
ಪ್ರತಿದಿನ ಸಂಜೆ ಪುರಾಣ ಮಂಗಲದ ನಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಶರಣಪ್ಪ ಚಂಡೂರ, ಪುರಾಣ ಸಮಿತಿ ಅಧ್ಯಕ್ಷ ಶಿವಕುಮಾರ ಯತ್ನಟ್ಟಿ, ದೇವಪ್ಪ ಸೋಬಾನ, ಬಸವರಾಜ ಸಬರದ, ಈರಣ್ಣ ಶಿರೂರು, ಆನಂದ ಹೊಸಮನಿ, ಪ್ರಭು ಶಿವಶಿಂಪರ, ಶರಣಪ್ಪ ಕೂಡೂರು, ಆನಂದ ಮಡಿವಾಳರ, ಪ್ರಕಾಶ ಹತ್ತಿಕಟಗಿ ಸೇರಿದಂತೆ ಅನೇಕ ಗಣ್ಯರು, ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖಾದರ್ ಸಾಬ್ ಸಿದ್ದನೇಕೊಪ್ಪ, ವೀರಯ್ಯ ಹಿರೇಮಠ ಗೋಲೇಕೊಪ್ಪ ಹಾಗೂ ಶರಣಪ್ಪ ಕುಕನೂರು ಸಂಗೀತ ಸೇವೆ ಸಲ್ಲಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 