ಯುವಕರಿಗೆ ಬಸವಾದಿ ಶರಣರ ಸಂದೇಶ ತಲುಪಿಸಿ: ನಾಯ್ಕೋಡಿ
Convey the message of Basavanna and the Sharanas to the youth: Naikodi
ತಾಳಿಕೋಟಿ 17: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಇಂದು ಯುವ ಸಮುದಾಯ ದಾರಿ ತಪ್ಪುತ್ತಿದೆ. ಅವರನ್ನು ಸನ್ಮಾರ್ಗ ದಡೆಗೆ ತರಲು ಬಸವಾದಿ ಶರಣರ ಉದಾತ್ತ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯ ಇದೆ ಎಂದು ವಚನ ಸಾಹಿತ್ಯ ಪರಿಷತ್ತ ಜಿಲ್ಲಾ ಅಧ್ಯಕ್ಷ ಅಬ್ದುಲ್ ರೆಹಮಾನ ನಾಯ್ಕೋಡಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ, ಯುವ ಘಟಕ ಹಾಗೂ ಕದಳಿ ವೇದಿಕೆ ವತಿಯಿಂದ ಶ್ರಾವಣ ಮಾಸದ ನಿಮಿತ್ಯವಾಗಿ ಹಮ್ಮಿಕೊಂಡ ವಚನ ಶ್ರಾವಣ ಹಾಗೂ ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಶರಣ ತತ್ವ ಪರಿ ಪಾಲನೆಯಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ಸೋಮವಾರ ಸಂಜೆ ಅವರು ವಿಶೇಷ ಉಪನ್ಯಾಸ ನೀಡಿದರು.
ಬಸವಣ್ಣನವರ ವಚನಗಳಲ್ಲಿ ವಿಶ್ವಮಾನವ ಕಲ್ಪನೆಯಿದೆ. ಅವರನ್ನು ಸೀಮಿತಗೊಳಿಸುವುದು ಸರಿಯಲ್ಲ. ಬಸವಣ್ಣನನ್ನು ನಮ್ಮ ಸ್ವಾರ್ಥ,ಲಾಭಕ್ಕಾಗಿ ಬಳಸಿಕೊಳ್ಳಬಾರದು. ಬಸವಣ್ಣ ನಮಗೆ ಭಾಷಣದ ವಿಷಯ ಆಗಬಾರದು. ಮಕ್ಕಳಿಗೆ ಉತ್ತಮ ತರಬೇತಿ ಹಾಗೂ ಸಂಸ್ಕಾರಗಳನ್ನು ನೀಡುವುದು ಹೆತ್ತವರ ಕರ್ತವ್ಯವಾಗಿದೆ ಅದರಲ್ಲೂ ತಾಯಂದಿರ ಪಾತ್ರ ಬಹಳವಿದೆ ಇದರ ಕುರಿತು ನಿರ್ಲಕ್ಷೆ ಮಾಡಬೇಡಿ, ಮೊಬೈಲ್ ಗೀಳಿನಿಂದ ಮಕ್ಕಳನ್ನು ರಕ್ಷಿಸಿ ಇದರಿಂದಾಗಿಯೇ ಮಕ್ಕಳು ಹಾಳಾಗುತ್ತಿದ್ದಾರೆ. ಪರಿಷತ್ತಿನ ಯುವ ಘಟಕದ ಪದಾಧಿಕಾರಿಗಳು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಕೆಲಸ ಮಾಡುವ ಅಗತ್ಯ ಇದೆ ಎಂದರು.
ಶರಣ ಸಾಹಿತ್ಯ ಪರಿಷತ್ತ ವಿಜಯಪುರ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ ಅವರು ಮಾತನಾಡಿ ಇವತ್ತು ಪದಗ್ರಹಣದ ಮೂಲಕ ಅಧಿಕಾರವನ್ನು ಸ್ವೀಕರಿಸಿದವರು ಹೆಚ್ಚು ಆಸಕ್ತಿ ವಹಿಸಿ ಪರಿಷತ್ತಿನ ಕೆಲಸ ಮಾಡಬೇಕು. ದತ್ತಿಗಳು ಪರಿಷತ್ತಿನ ಆತ್ಮವಾಗಿವೆ, ಇದರಿಂದಲೇ ನಮ್ಮ ಕೆಲಸಗಳು ನಡೆಯುತ್ತವೆ ಆದ್ದರಿಂದ ದತ್ತಿಗಳನ್ನು ಹೆಚ್ಚಿಸಲು ಪ್ರಯತ್ನಿಸಿ, ಬಸವಾದಿ ಶರಣರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ನಿಮ್ಮ ನಡೆ ಮತ್ತು ನುಡಿಯಲ್ಲಿ ಸಾಮ್ಯತೆ ಇರಲಿ ಎಂದು ತಿಳಿಸಿ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ವಿ.ಎಸ್.ಕಾರ್ಚಿ, ಯುವ ಘಟಕದ ಅಧ್ಯಕ್ಷ ಕಾಶಿನಾಥ ಸಜ್ಜನ, ಕದಳಿ ವೇದಿಕೆ ಅಧ್ಯಕ್ಷೆ ಉಮಾದೇವಿ ಗಂಗಾಧರ ಕಸ್ತೂರಿ ಇವರ ಪದಗ್ರಹಣ ಕಾರ್ಯಕ್ರಮ ಜರಗಿತು. ನೂತನ ಅಧ್ಯಕ್ಷ ಡಾ.ವಿಜಯಕುಮಾರ ಕಾರ್ಚಿ ಅಧ್ಯಕ್ಷತೆ ವಹಿಸಿದ್ದರು. ಕದಳಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷೆ ಉಮಾ ಘಿವಾರಿ, ಗಣ್ಯ ವರ್ತಕ ಮಹಾದೇವಪ್ಪ ಕುಂಬಾರ, ಎಂ.ಎಸ್.ನಾಗರಾಳ, ಸಮಾಜ ಸೇವಕ ಇಬ್ರಾಹಿಂ ಮನ್ಸೂರ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ಜಗದೀಶ ಬಿಳೇಭಾವಿ, ಗಂಗಾಧರ ಕಸ್ತೂರಿ, ಆರ್. ಬಿ.ದಮ್ಮೂರಮಠ, ಗುಂಡೂರಾವ ಧನಪಾಲ, ಅಶೋಕ ಚಿನಗುಡಿ, ಪರಿಷತ್ತು ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳು ಮತ್ತು ಬಸವಾಭಿಮಾನಿಗಳು ಉಪಸ್ಥಿತರಿದ್ದರು.
ಕಾಶಿನಾಥ ಕಾರಾಗನೂರ ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಸ್ವಾಗತಿಸಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ಹಾಗೂ ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು. ಮಲ್ಲನಗೌಡ ಪಾಟೀಲ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 