‘ಅವ್ವ ನಮ್ಮ ಮನೆ ವಾರೇನ್ ಬಫೆಟ್’ ಪುಸ್ತಕ ಬಿಡುಗಡೆ
Launch of the book ‘Avva Namma Mane Warren Buffett’
ಲೋಕದರ್ಶನ ವರದಿ
ವಿಜಯಪುರ, ಆ.6: ಯುವ ಲೇಖಕ ಸಂತೋಷ ಬಿರಾದಾರ ಅವರ ‘ಅವ್ವ ನಮ್ಮ ಮನೆ ವಾರೇನ್ ಬಫೆಟ್’ ಕನ್ನಡ ಕೃತಿಯನ್ನು ನಿಡೋಣಿ ವಿರಕ್ತ ಮಠದ ಪರಮಪೂಜ್ಯ ಸಿದ್ಧಲಿಂಗ ಶ್ರೀಗಳು ಬಿಡುಗಡೆ ಮಾಡಿದರು.
ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಸಿದ್ಧಲಿಂಗ ಶ್ರೀಗಳು, ತಾಯಿಯ ಕುರಿತು ಅತ್ಯಂತ ಸರಳ ಹಾಗೂ ಹೃದಯಸ್ಪರ್ಶಿಯಾಗಿ ಬರೆಯಲ್ಪಟ್ಟಿರುವ ಈ ಕೃತಿ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಪುಸ್ತಕದಲ್ಲಿನ ಗ್ರಾಮೀಣ ಸೊಗಡಿನ ಭಾಷೆ ಮತ್ತು ಜೀವನಾನುಭವಗಳ ಚಿತ್ರಣ ಓದುಗರನ್ನು ಬಾಲ್ಯದ ನೆನಪುಗಳಿಗೆ ಕರೆದೊಯ್ಯುತ್ತದೆ. ಸ್ಥಳೀಯ ಭಾಷೆಯ ಸೊಗಡನ್ನು ಉಳಿಸಿಕೊಂಡಿರುವುದು ಕೃತಿಯ ವಿಶೇಷತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕ ಸಂತೋಷ ಬಿರಾದಾರ ಅವರು ಪುಸ್ತಕದ ಕುರಿತು ಸಂಕ್ಷಿಪ್ತ ಪರಿಚಯ ನೀಡಿ, ತಾಯಿಯಿಂದ ಕಲಿತ ಜೀವನ ಪಾಠಗಳು, ಮೌಲ್ಯಗಳು ಹಾಗೂ ಪ್ರೇರಣೆಯೇ ಕೃತಿಯ ಜೀವಾಳವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಡೋಣಿ ಗ್ರಾಮದ ಹಿರಿಯರಾದ ಸೋಮಶೇಖರ ಕೋಟ್ಯಾಳ, ಜಾಫರ್ ಇನಾಮದಾರ, ರಾಜು ತಕ್ಕಳಕಿ, ಪ್ರಭುಲಿಂಗ ಬಿರಾದಾರ, ಜಬ್ಬಾರ್ ಇನಾಮದಾರ, ಶಾನು ಸಾರವಾಡ, ಶಿವಪ್ಪ ಹಾಗೂ ಶಿವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 