ರಷ್ಯಾದ ಮೆಟಿಯೋರ್- ಎಂ- ಹವಾಮಾನ ಉಪಗ್ರಹದ ಉಡಾವಣೆ 2021ಕ್ಕೆ ಮುಂದೂಡಿಕೆ

ಮಾಸ್ಕೋ, ಫೆ 12 :  ರಷ್ಯಾದ  ಬಾಹ್ಯಾಕಾಶ ಸಂಸ್ಥೆ ರೋಸ್ ಕೋಸ್ ಮಸ್  ಮಹತ್ವಾಕಾಂಕ್ಷೆಯ ಮೆಟಿಯೋರ್- ಎಂ- ಹವಾಮಾನ ಉಪಗ್ರಹದ ಉಡಾವಣೆಯನ್ನು 2021ಕ್ಕೆ ಮುಂದೂಡಲಾಗಿದೆ. 

ಉಪಗ್ರಹದ ತಂತ್ರಜ್ಞಾನದ ಕುರಿತು ಹೆಚ್ಚುವರಿ ಪರೀಕ್ಷೆಗಳನ್ನು ನಡೆಸಬೇಕಿರುವುದರಿಂದ, ಈ ವರ್ಷ ನಿಗದಿಯಾಗಿದ್ದ ಉಡಾವಣೆಯ ದಿನಾಂಕವನ್ನು 2021ಕ್ಕೆ ಮುಂದೂಡಿರುವುದಾಗಿ ರೋಸ್ ಕೋಸ್ ಮಸ್ ಸ್ಪುಟ್ನಿಕ್ ಗೆ ಮಾಹಿತಿ ನೀಡಿದೆ. 

2020ರ ನವೆಂಬರ್ ನಲ್ಲಿ ವೋಸ್ಟೋಚ್ನಿ ಉಡಾವಣಾ ಕೇಂದ್ರದಿಂದ ಈ ಉಪಗ್ರಹ ಉಡಾವಣೆಯಾಗಬೇಕಿತ್ತು.