ಹೊಸ ಕನ್ನಡ ಪತ್ರಿಕೆಗಳಿಗೆ ಚಾಲನೆ: ಸಾಹಿತ್ಯ-ಸಾಂಸ್ಕ್ರತಿ ಕ್ಷೇತ್ರದಲ್ಲಿ ಹೊಸ ಚೈತನ್ಯ

ಹೊಸ ಕನ್ನಡ ಪತ್ರಿಕೆಗಳಿಗೆ ಚಾಲನೆ: ಸಾಹಿತ್ಯ-ಸಾಂಸ್ಕ್ರತಿ ಕ್ಷೇತ್ರದಲ್ಲಿ ಹೊಸ ಚೈತನ್ಯ Launch of New Kannada Newspapers: A New Vitality in the Realm of Literature and Culture

ಹೊಸ ಕನ್ನಡ ಪತ್ರಿಕೆಗಳಿಗೆ ಚಾಲನೆ: ಸಾಹಿತ್ಯ-ಸಾಂಸ್ಕ್ರತಿ ಕ್ಷೇತ್ರದಲ್ಲಿ ಹೊಸ ಚೈತನ್ಯ  

ಕೊಪ್ಪಳ, 13: ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿಸುವ ನಿಟ್ಟಿನಲ್ಲಿ ನೂತನ ಕನ್ನಡ ಪತ್ರಿಕೆಗಳ ಬಿಡುಗಡೆ, ಪುಸ್ತಕ ಲೋಕಾರೆ​‍್ಣ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕರುನಾಡ ಚೇತನ’ ಪ್ರಶಸ್ತಿ ಪ್ರದಾನ ಸಮಾರಂಭವು ಸಂಭ್ರಮದಿಂದ ನಡೆಯಿತು.  ವಿಶಾಲ ಪ್ರಕಾಶನ, ಮಾದಿನೂರು, ಕೊಪ್ಪಳ, ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಹಾಗೂ ಸಿರಿಗನ್ನಡ ವೇದಿಕೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ‘ಕರುನಾಡ ಚೇತನ’ ದ್ವೈಮಾಸಿಕ, ‘ನಮ್ಮ ವಿಜಯ ಸೂರ್ಯೋದಯ’, ‘ಸ್ಫೂರ್ತಿ ಧಾಮ’ ಹಾಗೂ ‘ಚಾಣಕ್ಯ ಪ್ರಭ’ ಸೇರಿದಂತೆ ನೂತನ ಕನ್ನಡ ಪತ್ರಿಕೆಗಳನ್ನು ಲೋಕಾರೆ​‍್ಣ ಮಾಡಲಾಯಿತು. ಇದೇ ವೇಳೆ ‘ವೈಜ್ಞಾನಿಕ ಯುಗದಲ್ಲಿ ಮೂಢನಂಬಿಕೆಗಳ ಆರಾಧಕರು’ ಕೃತಿಯನ್ನೂ ಬಿಡುಗಡೆಗೊಳಿಸಲಾಯಿತು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಭೂಸನೂರಮಠ, ಪತ್ರಿಕೆಗಳು ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಜವಾಬ್ದಾರಿ ಹೊಂದಿವೆ ಎಂದರು. ಪತ್ರಿಕೋದ್ಯಮವು ಕೇವಲ ಸುದ್ದಿಗಳ ಪ್ರಕಟಣೆಗೆ ಸೀಮಿತವಾಗದೆ, ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕು. ಯುವ ಪತ್ರಕರ್ತರು ಸಾಮಾಜಿಕ ಕಾಳಜಿ, ಸತ್ಯನಿಷ್ಠೆ ಹಾಗೂ ಜವಾಬ್ದಾರಿಯುತ ಬರವಣಿಗೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.  ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯಲ್ಲಿ ಜಿ.ಎಸ್‌. ಗೋನಾಳ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದರು. ಹಿಂದೆ ಪತ್ರಿಕೆಗಳ ಮುದ್ರಣಕ್ಕಾಗಿ ಪಕ್ಕದ ಗದಗ ಜಿಲ್ಲೆಯನ್ನು ಅವಲಂಬಿಸಬೇಕಾಗಿತ್ತು. ಆದರೆ ಇಂದು ಕೊಪ್ಪಳದಲ್ಲಿಯೇ ಹಲವು ಮುದ್ರಣಾಲಯಗಳು ಕಾರ್ಯನಿರ್ವಹಿಸುತ್ತಿರುವುದು ಜಿಲ್ಲೆಯ ಬೆಳವಣಿಗೆಯ ಸಂಕೇತವಾಗಿದೆ ಎಂದು ಹೇಳಿದರು.  ಹಿರಿಯ ಸಾಹಿತಿ ಡಾ. ರಾಜೇಂದ್ರ ಎಸ್‌. ಗಡಾದ ಅವರು ‘ವೈಜ್ಞಾನಿಕ ಯುಗದಲ್ಲಿ ಮೂಢನಂಬಿಕೆಗಳ ಆರಾಧಕರು’ ಕೃತಿಯನ್ನು ಲೋಕಾರೆ​‍್ಣಗೊಳಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿಯೂ ಮೂಢನಂಬಿಕೆಗಳು ಇನ್ನೂ ಕಂಡುಬರುತ್ತಿದ್ದು, ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇಂತಹ ಕೃತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಜಿ.ಎಸ್‌. ಗೋನಾಳ ಅವರು ಹಲವು ವರ್ಷಗಳಿಂದ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.  ಕಾರ್ಯಕ್ರಮದ ಪ್ರಾರ್ಥನೆಯನ್ನು ಎಸ್‌.ಎಸ್‌. ಬೆಲ್ಲದ ನೆರವೇರಿಸಿದರು. ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಜಿ.ಎಸ್‌. ಗೋನಾಳ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಆನಂದ ಎನ್‌. ಹಳ್ಳಿಗುಡಿ ಮಾಡಿದರು. ಉದಯ ತೋಟದ ವಂದನಾರೆ​‍್ಣ ಸಲ್ಲಿಸಿದರು.