ಐಎಸ್ ಎಸ್ ಮಂಡಳಿಯಿಂದ ಭಾರತದ ಮೊದಲ ಸೂಕ್ಷ್ಮ ಗುರುತ್ವಾಕಾರ್ಷಣೆ ಪ್ರಯೋಗ ಪ್ರಾರಂಭ

ಬೆಂಗಳೂರು, ನ.18 :    ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ ಸ್ಟಾರ್ಟ್ ಆಫ್ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್ಎಸ್) ಮಂಡಳಿಯಿಂದ ಭಾರತದ ಮೊದಲ ಮೈಕ್ರೋಗ್ರಾವಿಟಿ ಪ್ರಯೋಗವನ್ನು ಪ್ರಾರಂಭಿಸಲಾಗಿದೆ ಎಂದು ಯೋಜನೆಯ ಮಾರ್ಗದರ್ಶಕ ಡಾ. ಶಶಿಧರ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.2ರಂದು 9.59 ಇಟಿಯಲ್ಲಿ ಐಎಸ್ಎಸ್ ನ ಮಂಡಳಿಯು ಮೊದಲ ಮೈಕ್ರೊಗ್ರಾವಿಟಿ ಪ್ರಯೋಗವನ್ನು ಆಸ್ಟೋಮೆಡಾ ಸ್ಪೇಸ್ ಟ್ಯಾಂಗೋ ಸಹಯೋಗದೊಂದಿಗೆ ಆರಂಭಿಸಿದೆ. ಇದಕ್ಕಾಗಿ ಎನ್ ಜಿ- 12 ಉಪಗ್ರಹವನ್ನು ನಭೋಮಂಡಲಕ್ಕೆ ಹಾರಿಬಿಡಲಾಗಿದೆ ಎಂದರು.  

ಬಾಹ್ಯಾಕಾಶದ ವಿಶಿಷ್ಟ ಮೈಕ್ರೋಗ್ರಾವಿಟಿ ಪರಿಸರದಲ್ಲಿ ಉತ್ಪನ್ನಗಳನ್ನು ಸಂಶೋಧಿಸಿ, ಅಭಿವೃದ್ಧಿಪಡಿಸುವ ಭಾರತದ ಮೊದಲ ಕೃಷಿ ಉತ್ಪನ್ನಗಳ ಪರಿಶೋಧಕ ಕಂಪನಿಯಾಗಿದೆ. ಅಲ್ಲದೇ ಸಂಶೋಧಕರಿಗೆ ಐಎಸ್ ಎಸ್ ನಲ್ಲಿ ತನ್ನ ಪಾಲುದಾರ ಸಂಸ್ಥೆಯ ಸಹಯೋಗದಿಂದ ಮಹತ್ವದ ಬಯೋಟೆಕ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಇದು ವೇದಿಕೆಯಾಗಿದೆ ಎಂದು ತಿಳಿಸಿದರು. 

ಈ ಕಾರ್ಯಾಚರಣೆಯಲ್ಲಿ ಅಕ್ಕಿ ಕೃಷಿಯಲ್ಲಿ ಪ್ರಮುಖ ಅಂಶವಿರುವ ಅನಾಬೆನಾ ಬ್ಯಾಕ್ಟೀರಿಯಾವನ್ನು ಆಸ್ಟೋಮೆಡಾ ಪರೀಕ್ಷಿಸುತ್ತದೆ ಮತ್ತು ಸ್ಥಿರ ಸಾರಜನಕದ ಶೇ.70ರಷ್ಟು ಭಾಗವನ್ನು ಭತ್ತದ ಬೆಳೆಗೆ ಬಿಡುಗಡೆ ಮಾಡುತ್ತದೆ. ಈ ಉಪಗ್ರಹ ಮೂರು ವಾರಗಳವರೆಗೆ ಬಾಹ್ಯಾಕಾಶದಲ್ಲಿ ಉಳಿದಿರುತ್ತದೆ ಎಂದು ತಿಳಿಸಿದರು.